Sunday, August 24, 2025
Google search engine
HomeUncategorizedವಿಮಾನ ನಿಲ್ದಾಣದಲ್ಲಿ ಕುಸಿದು ಬಿದ್ದು ಕಾಲು ಮುರಿದುಕೊಂಡ ಪಾಕಿಸ್ತಾನ ಅಧ್ಯಕ್ಷ

ವಿಮಾನ ನಿಲ್ದಾಣದಲ್ಲಿ ಕುಸಿದು ಬಿದ್ದು ಕಾಲು ಮುರಿದುಕೊಂಡ ಪಾಕಿಸ್ತಾನ ಅಧ್ಯಕ್ಷ

ದುಬೈ: ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಬುಧವಾರ ರಾತ್ರಿ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನದಿಂದ ಇಳಿಯುವಾಗ ಕುಸಿದುಬಿದ್ದಿದ್ದಾರೆ. ಇದರಿಂದ ಅವರ ಕಾಲು ಮುರಿದಿದೆ. ಪಾಕಿಸ್ತಾನ್ ರಾಷ್ಟ್ರಪತಿ ಭವನದ ಮಾಹಿತಿಯ ಪ್ರಕಾರ, ಬಿದ್ದ ನಂತರ, ತಕ್ಷಣ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆ ಗೆ ಸಾಗಿಸಲಾಯಿತು.ವೈದ್ಯರು ನಾಲ್ಕು ವಾರಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ ಎನ್ನಲಾಗಿದೆ.

ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿ ಮನೆಗೆ ಕಳುಹಿಸಲಾಗಿದೆಯಂತೆ. ಸಂಪೂರ್ಣ ವಿಶ್ರಾಂತಿ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ. 69 ವರ್ಷ ವಯಸ್ಸಿನ ಅಧ್ಯಕ್ಷ ಆಸಿಫ್ ಅಲಿ ಕಳೆದ ಕೆಲವು ವರ್ಷಗಳಿಂದ ಹಲವಾರು ಆರೋಗ್ಯ ಸಮಸ್ಯೆ ಗಳನ್ನು ಎದುರಿಸುತ್ತಿದ್ದಾರೆ. ಅವರು ಮಾರ್ಚ್ 2023ರಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಕಣ್ಣಿನ ಶಸ್ತ್ರ ಚಿಕಿತ್ಸೆಯನ್ನು ಮಾಡಿಕೊಂಡಿದ್ದರು.

2022 ರಲ್ಲಿ ಒಂದು ವಾರ ಡಾಕಾದ ಜಿಯಾವುದ್ದೀನ್ ಆಸ್ಪತ್ರೆಯಲ್ಲಿ ಎದೆಯನೋವಿಗೆ ಚಿಕಿತ್ಸೆ ಪಡೆದುಕೊಂಡಿದ್ದರು. 2022 ರಲ್ಲಿ ಜರ್ದಾರಿ ಅವರಿಗೆ  ಕೋವಿಡ್-19 ಲಕ್ಷಣಗಳು ಕಂಡುಬಂದಿದ್ದು , ಬಹಳ ಪ್ರವಾಸ ಮಾಡುತ್ತಿದ್ದ ಕಾರಣ ಅವರಿಗೆ ಒಂದು ವರ್ಷದ ಹಿಂದೆ ಅನಾರೋಗ್ಯದ ಸಮಸ್ಯೆ ಉಂಟಾಗಿತ್ತು ಎಂದು ಅವರ ಪುತ್ರ ಮತ್ತು PPP ಅಧ್ಯಕ್ಷ ಬಿಲಾವಲ್ ಭುಟ್ಟೋ ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments