Friday, September 5, 2025
HomeUncategorizedಮುಂದಿನ ವರ್ಷ ಜಾತಿಗಣತಿ ಮಾಡಲು ನಿರ್ಧಾರಿಸಿದ ಕೇಂದ್ರ ಸರ್ಕಾರ

ಮುಂದಿನ ವರ್ಷ ಜಾತಿಗಣತಿ ಮಾಡಲು ನಿರ್ಧಾರಿಸಿದ ಕೇಂದ್ರ ಸರ್ಕಾರ

ದೆಹಲಿ : ಮುಂದಿನ ವರ್ಷ ದೇಶದಲ್ಲಿ ಜನಗಣತಿ ನಡೆಸಲು ಕೇಂದ್ರ ಸರ್ಕಾರದ ನಿರ್ಧಾರ ಮಾಡಿದ್ದು.2026ರಲ್ಲಿ ಜನಗಣತಿಯ ಅಂಕಿ ಅಂಶಗಳನ್ನು ಪ್ರಕಟಿಸಲು ಕೇಂದ್ರ ಸರ್ಕಾರದ ನಿರ್ಧಾರ ಮಾಡಿದೆ ಎಂಬ ಮಾಹಿತಿ ದೊರೆತಿದೆ.

ಈ ಬಾರಿ ಜನಗಣತಿಯ ವೇಳೆ ವ್ಯಕ್ತಿಗಳ ಧರ್ಮದ ಜೊತೆಗೆ ಪಂಗಡದ ಕಲಂ ಸೇರ್ಪಡೆ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದ್ದು. ಪಂಗಡದ ಕಲಂನಲ್ಲಿ ಜನರು ತಮ್ಮ ಜಾತಿಯನ್ನು ಉಲ್ಲೇಖಿಸಬಹುದು ಎಂದು ಹೇಳಿದೆ. ಆದರೆ, ಪ್ರತೇಕವಾಗಿ ಜಾತಿ ಜನಗಣತಿಯನ್ನು ಕೇಂದ್ರ ಸರ್ಕಾರ ನಡೆಸಲ್ಲ ಎಂದು ಮಾಹಿತಿ ದೊರೆತಿದೆ.

ಎನ್‌ಡಿಎ ಅಂಗಪಕ್ಷಗಳು, ವಿಪಕ್ಷಗಳಿಂದ ದೇಶಾದ್ಯಂತ ಜಾತಿ ಜನಗಣತಿಗೆ ಒತ್ತಾಯ ಮಾಡಿದ್ದರು. ಯಾವ ಯಾವ ಜಾತಿಯ ಜನರು ಎಷ್ಟಿದ್ದಾರೆ ಎಂದು ತಿಳಿಯಲು ಜಾತಿ ಗಣತಿಯಾಗಬೇಕು ಎಂದು ಆಗ್ರಹಿಸಿದ್ದರು. ಜಾತಿಯ ಜನಸಂಖ್ಯೆಯ ಆಧಾರದ ಮೇಲೆ ಉದ್ಯೋಗ, ಶಿಕ್ಷಣ ಕ್ಷೇತ್ರದಲ್ಲಿ ಮೀಸಲಾತಿ ನೀಡಬೇಕೆಂದು ಮತ್ತು ಇದಕ್ಕೆ ಆರ್‌ಎಸ್‌ಎಸ್ ಕೂಡ ಜಾತಿ ಜನಗಣತಿಯ ನಡೆಸುವುದರ ಪರವಾಗಿಯೇ ಇದೆ ಎಂದು ವಿಪಕ್ಷಗಳು ಆಗ್ರಹಿಸಿದ್ದರು.
ಆದರೆ ಸರ್ಕಾರ ಪ್ರತ್ಯೇಕವಾಗಿ ಜಾತಿ ಗಣತಿ ನಡೆಸುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ.

2025ರ ಜನಗಣತಿಯ ಬಳಿಕ ದೇಶದಲ್ಲಿ 2035 ರಲ್ಲಿ ಜನಗಣತಿ ನಡೆಸಲು ಕೇಂದ್ರ ಸರ್ಕಾರದ ನಿರ್ಧಾರ ಮಾಡಿದೆ. 2021 ರಲ್ಲೇ ದೇಶದಲ್ಲಿ ಜನಗಣತಿ ನಡೆಯಬೇಕಾಗಿತ್ತು ಆದರೆ ಕೋವಿಡ್ ಕಾರಣದಿಂದ ಜನಗಣತಿ 2021 ರಲ್ಲಿ ನಡೆದಿರಲಿಲ್ಲ ಆದ್ದರಿಂದ ಹೀಗ ನಡೆಸಲಾಗುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments