Saturday, August 23, 2025
Google search engine
HomeUncategorizedಕಿತ್ತೂರು ಉತ್ಸವ : ಶಾಲಾ-ಕಾಲೇಜುಗಳಿಗೆ 3ದಿನ ರಜೆ ಘೋಷಣೆ

ಕಿತ್ತೂರು ಉತ್ಸವ : ಶಾಲಾ-ಕಾಲೇಜುಗಳಿಗೆ 3ದಿನ ರಜೆ ಘೋಷಣೆ

ಬೆಳಗಾವಿ : ಇಂದಿನಿಂದ ಮೂರು ದಿನಗಳ ಕಾಲ ಕಿತ್ತೂರು ಉತ್ಸವ ಹಿನ್ನೆಲೆ ಕಿತ್ತೂರು ಮತ್ತು ಬೈಲಹೊಂಗಲ ತಾಲೂಕಿನ ಶೈಕ್ಷಣಿಕ ವಲಯದ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ ರಾಣಿ ಚನ್ನಮ್ಮ 200ನೇ ವಿಜಯೋತ್ಸವ ಅಂಗವಾಗಿ ಕಿತ್ತೂರಿನಲ್ಲಿ ಉತ್ಸವ ನಡೆಯುತ್ತಿದ್ದು.ರಜೆ ಘೋಷಣೆ ಮಾಡಿ ಎಂದು ಡಿ.ಸಿ ಮೊಹಮ್ಮದ್ ರೋಷನ್ ಆದೇಶ ಹೊರಡಿಸಿದ್ದಾರೆ.

ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದ್ದು. ಶಾಲಾ ಕಾಲೇಜು ಮಕ್ಕಳು ಉತ್ಸವದಲ್ಲಿ ಪಾಲ್ಗೊಳ್ಳಲಿ ಎಂದು ರಜೆ ಘೋಷಣೆ ಮಾಡಲಾಗಿದೆ ಎಂದು ಮಾಹಿತಿ ದೊರೆತಿದೆ. ಅಗಸ್ಟ್ 23 ರಿಂದ 25 ರವರೆಗೆ ಮೂರು ದಿನ ರಜೆ ನೀಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಇಂದಿನಿಂದ ‌ಮೂರು‌ ದಿನಗಳ ಕಾಲ ಕಿತ್ತೂರು ಉತ್ಸವ ನಡೆಯಲಿದ್ದು ಅದ್ಧೂರಿಯಾಗಿ 200ನೇ ಕಿತ್ತೂರು ವಿಜಯೋತ್ಸವ ಸಂಭ್ರಮಕ್ಕೆ ಕ್ಷಣ ಗಣನೆ ಆರಂಭವಾಗಿದೆ. ಬೆಳಗಾವಿ ಜಿಲ್ಲೆಯ ಕಿತ್ತೂರು ಕೋಟೆ ಆವರಣದಲ್ಲಿ  ಉತ್ಸವ ನಡೆಯುತ್ತಿದ್ದು.ಐದು ಕೋಟಿ ವೆಚ್ಚದಲ್ಲಿ 200 ನೇ ವಿಜಯೋತ್ಸವ ಆಚರಿಸಲಾಗುತ್ತಿದೆ.

ಕಿತ್ತೂರು ಉತ್ಸವದ ಉದ್ಘಾಟನಾ ಸಮಾರಂಭಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್ ಗೈರಾಗಿದ್ದು.
ಉತ್ಸವದ ಕೊನೆ ದಿನ ಅಂದ್ರೆ ಸಮಾರೋಪ ಸಮಾರಂಭಕ್ಕೆ  ಸಿಎಂ, ಡಿಸಿಎಂ ಆಗಮಿಸಲಿದ್ದಾರೆ ಎಂದು ಮಾಹಿತಿ ದೊರೆತಿದೆ. ಕಿತ್ತೂರು ಕೋಟೆ ಆವರಣದಲ್ಲಿ ಬೆಳಗ್ಗೆ 9 ಗಂಟೆಗೆ ಕಿತ್ತೂರು ಉತ್ಸವದ ಉದ್ಘಾಟನಾ ಧ್ವಜಾರೋಹಣ ನಡೆಯಲಿದೆ

ಬೆಳಗ್ಗೆ 10 ಗಂಟೆಗೆ ವಿಜಯಜ್ಯೋತಿ ಸ್ವಾಗತ ಮಾಡಲಿದ್ದು ಕಿತ್ತೂರು ಸಂಸ್ಥಾನದಲ್ಲಿ ಧ್ವಜಾರೋಹಣ ನಡೆಯಲಿದೆ. ಬೆಳಗಾವಿ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ‌ಯಿಂದ ವಿಜಯಜ್ಯೋತಿ ಸ್ವಾಗತ ಮಾಡಿದ ಅನಂತರ ಜಾನಪದ ಕಲಾವಾಹಿನಿಗಳ ಮೆರವಣಿಗೆ ಚಾಲನೆ ದೊರೆಯಲಿದೆ. ಸಂಜೆ 4 ಗಂಟೆ ಕಿತ್ತೂರು ಉತ್ಸವ ಉದ್ಘಾಟನಾ ಸಮಾರಂಭ ನಡೆಯಲಿದೆ.ಉದ್ಘಾಟನೆ ಸಮಾರಂಭ ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಮೂರು ದಿನಗಳ ಉತ್ಸವಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments