Saturday, August 23, 2025
Google search engine
HomeUncategorizedMental Health Care: ಮಾನಸಿಕ ಅನಾರೋಗ್ಯದಿಂದ ಬಳಲುತ್ತಿದ್ದೀರಾ? ಹಾಗಿದ್ರೆ ಈ ಟಿಪ್ಸ್​ ಟ್ರೈ ಮಾಡಿ! 

Mental Health Care: ಮಾನಸಿಕ ಅನಾರೋಗ್ಯದಿಂದ ಬಳಲುತ್ತಿದ್ದೀರಾ? ಹಾಗಿದ್ರೆ ಈ ಟಿಪ್ಸ್​ ಟ್ರೈ ಮಾಡಿ! 

ದಿನ ನಿತ್ಯದ ಜಂಜಾಟಗಳ ಬದುಕಿನಲ್ಲಿ ಒತ್ತಡ, ಆಲೋಚನೆಗಳು, ಮಾನಸಿಕ ನೆಮ್ಮದಿ ಕೆಡಿಸುವ  ಸಂಗತಿಗಳಿಂದಾಗಿ ನಾವು ಮಾನಸಿಕ ಖಿನ್ನತೆಗೆ ಒಳಪಡಿತ್ತೇವೆ. ಇದರಿಂದ ನಾವು ಮಾನಸಿಕ ಅಸ್ವಸ್ಥತೆಗೂ ಗುರಿಯಾಗಬಹುದು. ಇದರಿಂದ ನಾವು ಬಚಾವ್​ ಆಗಲು ಈ ಸಿಂಪಲ್​ ಟಿಪ್ಸ್ ಫಾಲೋ ಮಾಡಿ..

ಮಾನಸಿಕ ಆರೋಗ್ಯಕ್ಕೆ ಕೆಲವು ಟಿಪ್ಸ್​ಗಳು ಹೀಗಿವೆ

  1. ನಿಮ್ಮ ಜೀವನಶೈಲಿಯನ್ನು ಉತ್ತಮವಾಗಿರಿಸಿ. ನಿಮಗಾಗಿ ನೀವು ಮೊದಲು ಸಮಯ ಕೊಡಿ.
  2. ನಿಮ್ಮ ಕೆಲಸಗಳ ಬಗ್ಗೆ ಸರಿ-ತಪ್ಪುಗಳ ಸ್ವಯಂ ವಿಮರ್ಶೆ ಮಾಡಿ. ನಿಮ್ಮಿಷ್ಟದ ವಿಷಯಗಳತ್ತ ಹೆಚ್ಚು ಗಮನಹರಿಸಿ.
  3. ನಿಮಗೆ ಸಂತಸ ಕೊಡುವ ಕೆಲಸಗಳನ್ನು ಮಾಡುತ್ತಾ ಹೋಗಿ ನಿಮ್ಮ ಮನಸ್ಸು ಹಗುರವಾಗುತ್ತದೆ.
  4. ನಿಮ್ಮ ಹವ್ಯಾಸ ಮತ್ತು ಯೋಜನೆಗಳು ಯಾವಗಲೂ ಉತ್ತಮವಾಗಿರಲಿ.
  5. ನಿಮ್ಮ ನೆಚ್ಚಿನ ಹವ್ಯಾಸಗಳನ್ನು ದಿನವೂ ಮಾಡಿ
  6. ಫೋನ್ ಬದಲು ಪುಸ್ತಕ ಓದಿ. ನಿಮ್ಮಿಷ್ಟದ ಸ್ಥಳಗಳಿಗೆ ಸುತ್ತಾಡಿ.
  7. ನಿಮ್ಮ ಬಿಡುವಿನ ವೇಳೆಯಲ್ಲಿ ಹಾಡು, ಆಟ, ನೃತ್ಯ, ಪೇಂಟಿಂಗ್ ಹೀಗೆ ಹಲವು ಹವ್ಯಾಸಗಳಲ್ಲಿ ಮಾಡುವುದನ್ನೂ ರೂಢಿ ಮಾಡಿಕೊಳ್ಳಿ.
  8. ಮಾನಸಿಕ ಆರೋಗ್ಯಕ್ಕೆ ಹಾಗೂ ದೈಹಿಕ ಆರೋಗ್ಯ ಎರಡು ಮುಖ್ಯ.ಇದಕ್ಕಾಗಿ ರಾತ್ರಿ ಆಳವಾದ ನಿದ್ದೆ, ಉತ್ತಮ ಊಟ, ಹೆಚ್ಚು ನೀರು ಕುಡಿಯುವುದು ಉತ್ತಮ
  9. ಯೋಗ, ವ್ಯಾಯಾಮ ಮತ್ತು ಧ್ಯಾನ ಮಾಡಿ
  10.  ಹೆಚ್ಚು ಹಣ್ಣುಗಳು, ಹಸಿರು ಸೊಪ್ಪು ಮತ್ತು ತರಕಾರಿಗಳನ್ನೂ ಸೇವಿಸಿ.
  11. ಒತ್ತಡ ನಿಭಾಯಿಸುವುದನ್ನು ಕಲಿಯಿರಿ
  12. ಒಳ್ಳೆಯ ಜನರೊಂದಿಗೆ ಸಂಪರ್ಕ ಹೊಂದಿರಿ

ಈ ಮೇಲಿನ ಟಿಪ್ಸ್​ಅನ್ನು ನೀವು ಅನುಸರಿಸಿವುದರಿಂದ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments