Sunday, August 24, 2025
Google search engine
HomeUncategorizedದಿನ ಭವಿಷ್ಯ: ವಿನಾಯಕನ ವಿಶೇಷ ಕೃಪೆ ಈ ರಾಶಿಯವರ ಮೇಲೆ ಇರಲಿದೆ!

ದಿನ ಭವಿಷ್ಯ: ವಿನಾಯಕನ ವಿಶೇಷ ಕೃಪೆ ಈ ರಾಶಿಯವರ ಮೇಲೆ ಇರಲಿದೆ!

2024 ಫೆಬ್ರವರಿ 13ರ ಮಂಗಳವಾರವಾದ ಇಂದು, ದೇವಗುರು ಗುರುವಿನ ರಾಶಿಚಕ್ರದ ಮೀನ ರಾಶಿಯಲ್ಲಿ ಚಂದ್ರನು ಸಂಕ್ರಮಿಸಲಿದ್ದಾನೆ. ಅಲ್ಲದೆ, ನಾಳೆ ಮಾಘ ಮಾಸದ ಶುಕ್ಲ ಪಕ್ಷದ ಚತುರ್ಥಿ ದಿನಾಂಕದಂದು ವಿನಾಯಕ ಚತುರ್ಥಿ ವ್ರತ ಆಚರಿಸಲಾಗುತ್ತದೆ. ವಿನಾಯಕ ಚತುರ್ಥಿಯ ದಿನದಂದು ಸರ್ವಾರ್ಥ ಸಿದ್ಧಿ ಯೋಗ, ರವಿಯೋಗ, ಶುಭ ಯೋಗ, ಉತ್ತರಾಭಾದ್ರಪದ ನಕ್ಷತ್ರಗಳ ಶುಭ ಸಂಯೋಗವೂ ನಡೆಯುತ್ತಿದೆ. ಒಟ್ಟಾರೆ ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು ಎನ್ನುವುದನ್ನು ತಿಳಿದುಕೊಳ್ಳಿ.

ಮೇಷ: ಕೆಲವು ಬಿಕ್ಕಟ್ಟುಗಳು ಮತ್ತು ಭಿನ್ನಾಭಿಪ್ರಾಯಗಳು ನಿಮಗೆ ಕಿರಿಕಿರಿ ಹಾಗೂ ಆತಂಕವನ್ನು ತರಬಹುದು. ಯಾರಾದರೂ ನಿಮ್ಮ ಸಹಾಯ ಕೇಳಬಹುದು. ನಿಮ್ಮ ಜ್ಞಾನದಾಹ ನಿಮಗೆ ಹೊಸ ಸ್ನೇಹಿತರನ್ನು ಪಡೆಯಲು ಸಹಾಯ ಮಾಡುತ್ತದೆ. ಪ್ರೇಮಿಗಳಿಗೆ ಇಂದು ಹೊಸ ಆಶಾಭಾವನೆ ಮೂಡಿಸಲಿದೆ. ಆರೋಗ್ಯದ ಕುರಿತು ಕಾಳಜಿ ವಹಿಸಿ. ಉದ್ಯೋಗಿಗಳಿಗೆ ಶುಭ ಫಲ ಇರಲಿದೆ. ಹಣಕಾಸು ವ್ಯವಹಾರಗಳಲ್ಲಿ ಪ್ರಗತಿ ಕಾಣುವಿರಿ. ಕೌಟುಂಬಿಕವಾಗಿ ಶುಭ ಫಲ.

ವೃಷಭ: ನಿಮ್ಮ ಅಪಾರ ವಿಶ್ವಾಸ ಮತ್ತು ಸುಲಭದ ಕೆಲಸ ಇಂದು ವಿಶ್ರಾಂತಿಗೆ ಸಾಕಷ್ಟು ಸಮಯ ನೀಡುತ್ತದೆ. ಸಹೋದ್ಯೋಗಿಗಳೊಂದಿಗೆ ಸಂಯಮದಿಂದ ವರ್ತಿಸಿ, ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ. ಸಾಮಾಜಿಕ ಕಾರ್ಯಗಳಲ್ಲಿ ಹಾಜರಾಗಲು ಅವಕಾಶಗಳು ಬರಬಹುದು ಹಾಗೂ ಇದು ನಿಮ್ಮನ್ನು ಪ್ರಭಾವಿ ವ್ಯಕ್ತಿಗಳ ಜತೆ ನಿಕಟ ಸಂಪರ್ಕ ಹೊಂದುವಂತೆ ಮಾಡಬಹುದು. ಇಂದು ನಿಮ್ಮ ಕಲಾತ್ಮಕ ಮತ್ತು ಸೃಜನಶೀಲ ಸಾಮರ್ಥ್ಯ ಬಹಳಷ್ಟು ಮೆಚ್ಚುಗೆ ತರುತ್ತದೆ. ನಿಮಗೆ ಅನಿರೀಕ್ಷಿತ ಪ್ರತಿಫಲಗಳನ್ನು ತರುತ್ತದೆ. ಆರೋಗ್ಯ ಪರಿಪೂರ್ಣವಾಗಿರಲಿದ್ದರೆ, ಹಣಕಾಸು ಪ್ರಗತಿ ಸಾಧಾರಣ ಇರಲಿದೆ. ಕೌಟುಂಬಿಕವಾಗಿ ಮಧ್ಯಮ ಫಲ ಇರಲಿದೆ.

ಮಿಥುನ: ಅನಗತ್ಯ ಆಲೋಚನೆಗಳು ನಿಮ್ಮ ಮನಸ್ಸನ್ನು ಆವರಿಸಬಹುದು. ಹಣಕಾಸು ಯೋಜನೆಗಳ ಕುರಿತಾಗಿ ಆಲೋಚನೆ ಮಾಡುವಿರಿ. ನಿಮ್ಮ ಸಂಗಾತಿ ನಿಮ್ಮ ಬಗ್ಗೆ ಒಳ್ಳೆಯದನ್ನು ಯೋಚಿಸುತ್ತಾರೆ. ಆದ್ದರಿಂದ ಕೆಲವೊಮ್ಮೆ ನಿಮ್ಮ ಮೇಲೆ ಕೋಪವನ್ನು ಸಹ ತೋರಿಸಬಹುದು. ಆದರೆ, ನೀವೂ ಜಗಳಕ್ಕೆ ಬೀಳದೆ, ಅವರ ಮಾತುಗಳನ್ನು ನೀವು ಅರ್ಥಮಾಡಿಕೊಳ್ಳುವುದು ಉತ್ತಮ. ಆರೋಗ್ಯ ಕೊಂಚ ಹದಗೆಡುವ ಸಾಧ್ಯತೆ ಇದೆ. ಉದ್ಯೋಗಿಗಳಿಗೆ ಶುಭವಾಗಲಿದ್ದು, ಕೌಟುಂಬಿಕವಾಗಿ ಸಾಧಾರಣ ಫಲ ಇರಲಿದೆ.

ಇದನ್ನೂ ಓದಿ: ‘ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ” ಎಂದು ಘೋಷಣೆ ಮಾಡಿದ ರಾಜ್ಯ ಸರ್ಕಾರ!

ಕಟಕ: ಅನಗತ್ಯ ಖರ್ಚಿನ ಹೊರತಾಗಿಯೂ ನಿಮ್ಮ ಆರ್ಥಿಕ ಭಾಗವು ಬಲವಾಗಿರುತ್ತದೆ. ನಿಮ್ಮ ಆಕರ್ಷಣೆ ಹಾಗೂ ವ್ಯಕ್ತಿತ್ವವು ಹೊಸ ಸ್ನೇಹಿತರನ್ನು ಗಳಿಸಿಕೊಡುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ವಾಹನ ಚಾಲನೆ ಮಾಡುವಾಗ ಜಾಗ್ರತೆ ಇರಲಿ. ಕಾರಣ ಅಪಘಾತವಾಗುವ ಸಂಭವ ಹೆಚ್ಚಿದೆ. ಆರೋಗ್ಯದ ಕುರಿತು ಕಾಳಜಿ ವಹಿಸಿ. ಉದ್ಯೋಗಿಗಳಿಗೆ ಹಾಗೂ ಕೌಟುಂಬಿಕವಾಗಿ ಶುಭ ಫಲ ಇರಲಿದೆ.

ಸಿಂಹ: ಭೂಮಿ ಸಂಬಂಧಿ ವ್ಯವಹಾರ ನಡೆಯುವ ಸಾಧ್ಯತೆ ಇದೆ. ಅದು ನಿಮಗೆ ಲಾಭದಾಯಕವಾಗಲಿದೆ. ನಿಮ್ಮ ಪ್ರೀತಿಪಾತ್ರರು ನಿಮಗೆ ಅಪಾರ ಸಂತೋಷವನ್ನು ತರುತ್ತಾರೆ. ಉದ್ಯೋಗಿಗಳಿಗೆ ಸ್ವಲ್ಪ ಒತ್ತಡ ಉಂಟಾಗುವ ಸಾಧ್ಯತೆ ಇದೆ. ಸಂಗಾತಿಯ ಮಾತುಗಳು ಹಿತವೆನಿಸುವುದು. ಹಣಕಾಸು, ವ್ಯಾಪಾರ ವ್ಯವಹಾರಗಳಲ್ಲಿ ಪ್ರಗತಿ ಕಾಣುವಿರಿ. ಕೌಟುಂಬಿಕವಾಗಿ ಶುಭ ಫಲ.

ಕನ್ಯಾ: ಒತ್ತಡ ಮುಕ್ತವಾಗಿ ಶಾಂತ ವಾತಾವರಣ ನಿರ್ಮಾಣವಾಗಲಿದೆ. ವ್ಯಾಪಾರ ವ್ಯವಹಾರಗಳಲ್ಲಿ ಲಾಭವಾಗಲಿದೆ. ಅನಿವಾರ್ಯ ಕಾರಣಗಳಿಂದ ನೀವು ಖರ್ಚು ಮಾಡುವ ಸಾಧ್ಯತೆ ಇದೆ. ಉದ್ಯೋಗ ಆಕಾಂಕ್ಷಿಗಳಿಗೆ ಇಂದು ಅದೃಷ್ಟದ ದಿನದಂತೆ ತೋರುತ್ತದೆ. ನಿಮಗೆ ಅಗತ್ಯವಿಲ್ಲದ ವಿಷಯಗಳ ಮೇಲೆ ಇಂದು ನಿಮ್ಮ ಹೆಚ್ಚಿನ ಸಮಯವನ್ನು ವ್ಯರ್ಥ ಮಾಡುವುದು ಬೇಡ. ಆರೋಗ್ಯ ಪರಿಪೂರ್ಣವಾಗಿರಲಿದೆ. ಸಂಗಾತಿಯ ಮಾತುಗಳು ಅಹಿತವೆನಿಬಹುದು. ಕಲಹಗಳಿಗೆ ಆಸ್ಪದ ಕೊಡಬೇಡಿ. ಕೌಟುಂಬಿಕವಾಗಿ ಸಾಧಾರಣ ಫಲ.

ತುಲಾ: ಕುಟುಂಬದ ಸದಸ್ಯರ ಬೆಂಬಲ ಸಿಗಲಿದೆ. ಪ್ರೇಮ ಪ್ರಕರಣ ಹದಗೆಡುವ ಸಾಧ್ಯತೆ ಇದೆ. ಅನಿವಾರ್ಯ ಪ್ರಸಂಗಗಳಿಂದಾಗಿ ಪ್ರಯಾಣ ಬೆಳೆಸುವಿರಿ. ಸಂಬಂಧಿಕರ ಹಸ್ತಕ್ಷೇಪ ದಾಂಪತ್ಯ ಜೀವನದಲ್ಲಿ ವೈರತ್ವ ಮೂಡುವಂತೆ ಮಾಡಬಹುದು. ಅದಕ್ಕೆ ಅವಕಾಶ ಕೊಡಬೇಡಿ. ಆರೋಗ್ಯ ಪರಿಪೂರ್ಣ, ವ್ಯಾಪಾರ ವ್ಯವಹಾರಗಳಲ್ಲಿ ಯಶಸ್ಸು ಸಿಗಲಿದೆ. ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ಉದ್ಯೋಗಿಗಳಿಗೆ ಶುಭ ಫಲ ಇರಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ.

ವೃಶ್ಚಿಕ: ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಸ್ವಲ್ಪ ಆರ್ಥಿಕ ಲಾಭ ಮಾಡಲಿದೆ. ಇಂದು ಪ್ರೀತಿಯಲ್ಲಿ ನಿಮ್ಮ ಅದೃಷ್ಟದ ದಿನ. ನಿಮ್ಮ ಸಂಗಾತಿಯಿಂದ ಅಚ್ಚರಿ ಕಾದಿರಲಿದೆ. ಭವಿಷ್ಯದ ಹೂಡಿಕೆ ಬಗೆಗೆ ಆಲೋಚನೆ ಮಾಡುವಿರಿ. ಆಪ್ತರ ಆಗಮನದಿಂದ ಕಾರ್ಯದಲ್ಲಿ ವಿಳಂಬವಾಗುವ ಸಾಧ್ಯತೆ ಇದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ಶುಭ ಫಲ ಇರಲಿದೆ. ಕೌಟುಂಬಿಕವಾಗಿ ಶುಭ ಫಲ.

ಧನಸ್ಸು: ಹಣಕಾಸು ಹೂಡಿಕೆ ಬಗ್ಗೆ ಆಲೋಚನೆ ಮಾಡುವಿರಿ. ಉದ್ಯೋಗಿಗಳಿಗೆ ಕಿರಿಕಿರಿ ಉಂಟಾಗುವ ಸಾಧ್ಯತೆ ಇದೆ. ಮನೆಯಲ್ಲಿನ ವ್ಯತಿರಿಕ್ತ ವಾತಾವರಣ ನಿಮ್ಮ ಮನಸ್ಸಿಗೆ ನೋವುಂಟು ಮಾಡುವ ಸಾಧ್ಯತೆ ಇದೆ. ಅದರಿಂದ ದೂರ ಇರಿ. ದೈಹಿಕ ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ.

ಮಕರ: ನಿಮ್ಮ ಆರೋಗ್ಯದ ಬಗ್ಗೆ ಎಚ್ಚರ ವಹಿಸಿ. ಇಂದು ನೀವು ಹಣಕ್ಕೆ ಸಂಬಂಧಿಸಿದ ಸಮಸ್ಯೆಯ ಕಾರಣದಿಂದ ತೊಂದರೆಗೊಳಗಾಗಬಹುದು. ಅತಿಥಿಗಳ ಆಗಮನ ಕೊಂಚ ಮಟ್ಟಿಗೆ ಸಮಾಧಾನ ತರಿಸಬಹುದು. ಉದ್ಯೋಗದ ಸ್ಥಳದಲ್ಲಿ ಮಾತಿನ ನಿಯಂತ್ರಣ ತಪ್ಪಿ ಅಪಾಯ ತಂದು ಕೊಳ್ಳುವುದು ಬೇಡ. ವಿದ್ಯಾರ್ಥಿಗಳು ಅಭ್ಯಾಸದ ಕಡೆ ಹೆಚ್ಚು ಗಮನ ಹರಿಸಬೇಕು. ವ್ಯಾಪಾರ – ವ್ಯವಹಾರಗಳಲ್ಲಿ ಸಾಧಾರಣ ಪ್ರಗತಿ ಇರಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ.

ಕುಂಭ: ನಿಮ್ಮ ಅಪಾರ ವಿಶ್ವಾಸ ನಿಮಗೆ ಯಶಸ್ಸನ್ನು ತಂದುಕೊಡಲಿದೆ. ದಿನದ ಕೊನೆಯಲ್ಲಿ ಅನಿವಾರ್ಯ ಕಾರಣದಿಂದ ಮನಸ್ಸಿಗೆ ನೋವುಂಟಾಗುವ ಸಾಧ್ಯತೆ ಇದೆ. ನೀವು ಅತಿ ಉದಾರಿಯಾಗಿದ್ದಲ್ಲಿ – ನಿಮ್ಮ ನಿಕಟವರ್ತಿಗಳು ಅದರ ದುರುಪಯೋಗ ಪಡೆದುಕೊಳ್ಳಬಹುದು. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ.

ಮೀನ: ಬೇಡದ ವಿಷಯದ ಬಗ್ಗೆ ಆಲೋಚನೆ ಮಾಡಬೇಡಿ. ಬದಲಿಗೆ ಅರ್ಥಪೂರ್ಣವಾದದ್ದನ್ನು ಮಾಡಲು ನಿಮ್ಮ ಶಕ್ತಿಯನ್ನು ವ್ಯಯಿಸಿ. ಆಪ್ತರೊಂದಿಗೆ ಅನಿವಾರ್ಯ ಕಾರಣದಿಂದ ಮುನಿಸಿಕೊಳ್ಳುವ ಸಾಧ್ಯತೆ ಇದೆ. ಇದಕ್ಕೆ ಅವಕಾಶ ಕೊಡದೆ ನಿಮ್ಮ ಹಾಸ್ಯ ಮನೋಭಾವನೆಯಿಂದ ಸಮಸ್ಯೆಯನ್ನು ಪರಿಹರಿಸಿಕೊಳ್ಳಿ. ಉದ್ಯೋಗಿಗಳಿಗೆ ಹೊಸ ಭರವಸೆ ಮೂಡಲಿದೆ. ಸಂಗಾತಿಯ ಮಾತುಗಳು ಹಿತವೆನಿಸುತ್ತದೆ. ಆರೋಗ್ಯ ಮಧ್ಯಮವಾಗಿರಲಿದೆ. ಆರ್ಥಿಕ ಪ್ರಗತಿ ಸಾಧಾರಣವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments