Monday, August 25, 2025
Google search engine
HomeUncategorizedOTT ಯಲ್ಲಿ 'ಕಾಟೇರ' ದರ್ಶನ!: ರಾಜ್ಯಾದ್ಯಂತ ಅಭಿಮಾನಿಗಳ ಸಂಭ್ರಮ

OTT ಯಲ್ಲಿ ‘ಕಾಟೇರ’ ದರ್ಶನ!: ರಾಜ್ಯಾದ್ಯಂತ ಅಭಿಮಾನಿಗಳ ಸಂಭ್ರಮ

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕಾಟೇರ ಸಿನಿಮಾ ನಿನ್ನೆಯಿಂದ ಜೀ5 ಒಟಿಟಿಯಲ್ಲಿ ತೆರೆ ಕಾಣುತ್ತಿದೆ. ಬೆಳ್ಳಿಪರದೆಯಲ್ಲಿ ನಾಗಲೋಟ ನಡೆಸಿದ್ದ ಡಿಬಾಸ್ ಸಿನಿಮಾ ಈಗ ಸಣ್ಣ ಪರದೆಗೆ ಎಂಟ್ರಿ ಕೊಟ್ಟಿದೆ. “ಒಂದು ಬಂದೂಕಲ್ಲ ನೂರು ಪಿರಂಗಿನೇ ಬಂದ್ರು ಇವ್ನ ಓಟ ತಡೆಯೋಕ್ಕಾಗಲ್ಲ. ಕಾಟೇರ ಬರ್ತಿದ್ದಾನೆ ಇದೇ ಫೆಬ್ರವರಿ 9 ರಿಂದ ನಿಮ್ಮ ZEE5 ನಲ್ಲಿ” ಎಂದು ಸಿನಿಮಾ ಒಟಿಟಿಗೆ ಬರುವುದನ್ನು ಘೋಷಿಸಿದೆ.

ಅಭಿಮಾನಿಗಳ ಸಂಭ್ರಮ :

ಕಾಟೇರ ಸಿನಿಮಾ ಇದೀಗ 50 ದಿನ ಪೂರೈಸೋಕೆ ಬಂದಿದೆ. ಇದರ ಮಧ್ಯೆ ಓಟಿಟಿ ಜೀ5ಗೂ ಚಿತ್ರ ಎಂಟ್ರಿ ಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಎಲ್ಲೆಡೆ ಅಭಿಮಾನಿಗಳು ಕಾಟೇರ ಓಟಿಟಿ ರಿಲೀಸ್ ಅನ್ನ ಕೂಡ ಸಂಭ್ರಮಿಸಿದ್ದಾರೆ. ಹುಬ್ಬಳ್ಳಿ, ಮೈಸೂರು, ದಾವಣಗೆರೆ, ಮಂಡ್ಯ, ಮೈಸೂರು ಬೆಂಗಳೂರಿನಲ್ಲಿ ಕಾಟೇರ ಬ್ಯಾನರ್ ಹಿಡಿದು ದಾಸನ ಸಿನಿಮಾವನ್ನ ವೆಲ್ಕಮ್ ಮಾಡಿದ್ದಾರೆ. ಬೃಹತ್ ಕಟೌಟ್ ಮುಂದೆ ಕಾಟೇರ ಪೋಸ್ಟರ್ ಹಿಡಿದು ಜೈಕಾರ ಹಾಕಿದ್ದಾರೆ.

ಇದನ್ನೂ ಓದಿ: ಕಾಟೇರ ಸಕ್ಸಸ್​ ಬೆನ್ನಲ್ಲೇ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಚಾಲೆಂಜಿಂಗ್ ಸ್ಟಾರ್!

1970ರ ದಶಕದಲ್ಲಿ ನಡೆಯುವ ಸಿನಿಮಾ ಕಾಟೇರ. ಜಾತಿ ಕಾರಣದಿಂದ ಅವಮಾನಕ್ಕೆ ಒಳಗಾಗುವ ಕಾಟೇರ ಭೂಸುಧಾರಣಾ ಕಾಯಿದೆಯ ಅನುಷ್ಠಾನದೊಂದಿಗೆ ತನ್ನ ಹಳ್ಳಿಯ ರೈತರಿಗೆ ಸಹಾಯ ಮಾಡಲು ಪಡುವ ಕಷ್ಟವನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಹಳ್ಳಿಗಾಗಿ ತನ್ನ ಜೀವನವನ್ನೇ ಮುಡಿಪಿಟ್ಟ ಒಬ್ಬ ವ್ಯಕ್ತಿಯ ಕಥೆಯನ್ನು ಟಚ್ಚುಕಟ್ಟಾಗಿ ಜನರ ಮುಂದಿಡಲಾಗಿದೆ.

ದರ್ಶನ್ ಮತ್ತು ತರುಣ್ ಸುಧೀರ್ ಕಾಂಬಿನೇಷನ್ ಮೂರನೇ ಸಿನಿಮಾ ಕಾಟೇರ. 2021 ರಲ್ಲಿ ಬಂದ ರಾಬರ್ಟ್ ಸಿನಿಮಾ ಬಳಿಕ ಮತ್ತೆ ಇಬ್ಬರು ಕೈ ಜೋಡಿಸಿದ್ದರು. ಕಾಟೇರ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಕನಸಿನ ನಟಿ ಮಾಲಾಶ್ರೀ ಅವರ ಮಗಳು ಆರಾಧನಾ ರಾಮ್ ಪಾದಾರ್ಪಣೆ ಮಾಡಿದ್ದಾರೆ. ಚಿತ್ರದಲ್ಲಿ ನಟಿ ಶೃತಿ, ಪದ್ಮಾವಸಂತಿ, ಜಗಪತಿ ಬಾಬು, ಕುಮಾರ್ ಗೋವಿಂದ್, ವಿನೋದ್ ಕುಮಾರ್ ಆಳ್ವಾ ಸೇರಿ ಅನೇಕರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ರಾಕ್ಲೈನ್ ವೆಂಕಟೇಶ್ ಅವರು ತಮ್ಮ ನಿರ್ಮಾಣದ ಬ್ಯಾನರ್ ರಾಕ್ಲೈನ್ ಎಂಟರ್ಟೈನ್ಮೆಂಟ್ನಡಿಯಲ್ಲಿ ಚಿತ್ರವನ್ನು ನಿರ್ಮಿಸಿದ್ದಾರೆ. ಇದೀಗ ಜೀ 5 ಒಟಿಟಿಯಲ್ಲೂ ಸ್ಟ್ರೀಮಿಂಗ್ ಆಗ್ತಿರುವ ಚಿತ್ರಕ್ಕೆ ಭರಪೂರ ಮೆಚ್ಚುಗೆ ಸಿಗುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments