Wednesday, August 27, 2025
HomeUncategorizedಅತ್ತೆ ಮೇಕ್​ಅಪ್​ ಕಿಟ್​ ಬಳಸಿದ್ದಕ್ಕೆ ಗಂಡನತ್ರ ಡಿವೋರ್ಸ್ ಕೇಳಿದ ಪತ್ನಿ 

ಅತ್ತೆ ಮೇಕ್​ಅಪ್​ ಕಿಟ್​ ಬಳಸಿದ್ದಕ್ಕೆ ಗಂಡನತ್ರ ಡಿವೋರ್ಸ್ ಕೇಳಿದ ಪತ್ನಿ 

ಆಗ್ರಾ: ನೀವು ಇತ್ತೀಚಿಗೆ ತನ್ನ ಪತಿ ಹನಿಮೂನ್​ಗೆ ಗೋವಾಗೆ ಕರೆದುಕೊಂಡು ಹೋಗುತ್ತೇನೆಂದು ಹೇಳಿ ಅಯೋಧ್ಯೆಗೆ ಕರೆದುಕೊಂಡು ಹೋಗಿದ್ದಕ್ಕೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ಘಟನೆ ಕೇಳಿರಬಹುದು. ಆದ್ರೆ ಇದೀಗ ಇಲ್ಲೊಬ್ಬ ಯುವತಿ  ಪರ್ಮಿಶನ್ ಇಲ್ಲದೇ ಅತ್ತೆ ತನ್ನ ಮೇಕ್​ಅಪ್​ ಕಿಟ್ ಬಳಸಿದ್ದಕ್ಕೆ ಡಿವೋರ್ಸ್ ಕೇಳಿರುವ ಘಟನೆ ನಡೆದಿದೆ.

ಹೌದು, ಈ ವಿಚಾರವಾಗಿ ಅತ್ತೆಯೊಂದಿಗೆ ಜಗಳವಾಡಿದ ನಂತರ ಪತಿ ತನ್ನನ್ನು ಮತ್ತು ತನ್ನ ಸಹೋದರಿಯನ್ನು ಮನೆಯಿಂದ ಹೊರಹಾಕಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾಳೆ.

ಸೊಸೆಯ ಆರೋಪವೇನು..? 

ಮಹಿಳೆ ಮತ್ತು ಆಕೆಯ ಸಹೋದರಿ ಕಳೆದ ವರ್ಷ ಇಬ್ಬರು ಸಹೋದರರನ್ನು ವಿವಾಹವಾಗಿದ್ದರು. ಅತ್ತೆ ಆಕೆಯ ಮೇಕ್​ ಅಪ್​ ಬಳಸಿದ್ದಕ್ಕಾಗಿ ಹೊರಗೆ ಹೋಗುವಾಗ ಮೇಕ್​ಅಪ್​ ಮಾಡಿಕೊಳ್ಳಲು ತಮ್ಮ ಬಳಿ ವಸ್ತುಗಳಿರಲಿಲ್ಲ. ಮನೆಯಲ್ಲಿದ್ದರೂ ಅತ್ತೆ ಮೇಕ್​ಅಪ್​ ಮಾಡಿಕೊಳ್ಳುತ್ತಲೇ ಇರುತ್ತಾರೆ  ಎಂದು ಸೊಸೆ ಹೇಳಿದ್ದಾರೆ.

ಮನೆಯಲ್ಲಿದ್ದಾಗ ಮೇಕ್ಅಪ್ ಬಳಸಬೇಡಿ ಎಂದು ಮಹಿಳೆ ತನ್ನ ಅತ್ತೆಯನ್ನು ಕೇಳಿದಾಗ, ಜಗಳ ಶುರುವಾಗಿದೆ, ನಂತರ ಅತ್ತೆ ತನ್ನ ಪತಿಗೆ ಘಟನೆಯ ಬಗ್ಗೆ ದೂರು ನೀಡಿದ್ದಾಳೆ. ಪತಿ ಆಕೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಆಕೆ ಹಾಗೂ ತಂಗಿಯನ್ನು ಮನೆಯಿಂದ ಹೊರ ಹಾಕಿದ್ದರಿಂದ ಪರಿಸ್ಥಿತಿ ಬಿಗಡಾಯಿಸಿತು. ಇಬ್ಬರು ಮಹಿಳೆಯರು ಎರಡು ತಿಂಗಳಿನಿಂದ ತಮ್ಮ ತಾಯಿಯ ಮನೆಯಲ್ಲಿ ವಾಸವಿದ್ದಾರೆ.

ಕೌನ್ಸೆಲರ್​ಗೆ ಅತ್ತೆ- ಸೊಸೆ ಹೇಳಿದ್ದೇನು..? 

ಮಹಿಳೆ ಮತ್ತು ಆಕೆಯ ಅತ್ತೆಯ ಕೌನ್ಸೆಲಿಂಗ್ ಮಾಡಲಾಯಿತು, ಆದರೆ ಮಹಿಳೆ ವಿಚ್ಛೇದನ ಪಡೆಯುವ ನಿರ್ಧಾರ ದೃಢವಾಗಿದೆ ಎಂದು ಕೌನ್ಸೆಲರ್ ಅಮಿತ್ ಕುಮಾರ್ ತಿಳಿಸಿದ್ದಾರೆ.

ಅನುಮತಿಯಿಲ್ಲದೆ ತನ್ನ ಮೇಕ್ಅಪ್ ಅನ್ನು ಬಳಸುವುದರ ಬಗ್ಗೆ ಸಮಸ್ಯೆ ಇಲ್ಲ ಎಂದು ಅವರು ಪ್ರತಿಪಾದಿಸಿದರು. ತನ್ನ ಪತಿ ತನ್ನ ತಾಯಿಯ ಪ್ರಭಾವಕ್ಕೆ ಒಳಗಾಗಿ ತನ್ನ ಮೇಲೆ ಕೌಟುಂಬಿಕ ದೌರ್ಜನ್ಯವೆಸಗಿದ್ದಾರೆ ಎಂದು ಹೇಳಿದ್ದಾರೆ.

ಮಹಿಳೆ ಮತ್ತು ಆಕೆಯ ಪತಿ ಇಬ್ಬರನ್ನೂ ಹೆಚ್ಚುವರಿ ಕೌನ್ಸೆಲಿಂಗ್ ಸೆಷನ್‌ಗಳಿಗೆ ಕರೆಯಲಾಗುವುದು ಎಂದು ಗೌರ್ ಹೇಳಿದರು.

ಇತ್ತೀಚಿನ ದಿನಗಳಲ್ಲಿ ಸಣ್ಣ ಪುಟ್ಟ ವಿಚಾರಕ್ಕೆ ವಿಚ್ಛೇದನ ಪಡೆದುಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments