Monday, August 25, 2025
Google search engine
HomeUncategorizedಯತೀಂದ್ರ ಸಿದ್ದರಾಮಯ್ಯಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ವ್ಯಕ್ತಿ ಬಂಧನ

ಯತೀಂದ್ರ ಸಿದ್ದರಾಮಯ್ಯಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ವ್ಯಕ್ತಿ ಬಂಧನ

ಚಾಮರಾಜನಗರ : ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಭಾಷಣ ಮಾಡ್ತಿದ್ದ ವೇಳೆ ವ್ಯಕ್ತಿಯೋರ್ವ ಸಿಡಿದೆದ್ದಿದ್ದ. ಅವಾಚ್ಯ ಶಬ್ದಗಳಿಂದ ನಿಂದಿಸಿ ಸ್ಥಳದಿಂದ ಕಾಲ್ಕಿತ್ತಿದ್ದ. ಇದೀಗ ಆತ ಪೊಲೀಸರ ಅತಿಥಿಯಾಗಿದ್ದಾನೆ.

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಪಟ್ಟಣದ ಡಿ.ದೇವರಾಜ ಅರಸ್ ಕ್ರೀಡಾಂಗಣದಲ್ಲಿ ಅಯೋಜನೆ ಮಾಡಿದ್ದ ಕಾರ್ಯಕ್ರಮದಲ್ಲಿ ಯತೀಂದ್ರ ಸಿದ್ದರಾಮಯ್ಯ ಭಾಷಣ ಮಾಡ್ತಿದ್ರು. ಭಕ್ತ ಶ್ರೇಷ್ಠ ಕನಕದಾಸ ಕಾರ್ಯಕ್ರಮದಲ್ಲಿ ಯತೀಂದ್ರ ಸಿದ್ದರಾಮಯ್ಯ ಮಾತನಾಡುವ ವೇಳೆ ಪ್ರಧಾನಿ ನರೇಂದ್ರ ಮೋದಿ ಶ್ರೀರಾಮ ಮಂದಿರ ಕಟ್ಟಿದ್ದರೆ ಆಯ್ತಾ? ಎಂದು ವಾಗ್ದಾಳಿಗೆ ಇಳೀತಿದ್ದಂತೆ ಯುವಕನೋರ್ವ ಯತೀಂದ್ರರನ್ನು ನಿಂದಿಸಿದ್ದಾನೆ.

ಸಮಾರಂಭದ ಹಿಂಬದಿಯಿಂದ ಅವಾಚ್ಯ ಶಬ್ಧಗಳಿಂದ ನಿಂದಿಸಿ ಪರಾರಿಯಾಗಿದ್ದಾನೆ. ರಂಜಿತ್ ಎಂಬ ಯುವಕ ಯತೀಂದ್ರ ಸಿದ್ದರಾಮಯ್ಯರ ಬಗ್ಗೆ ಅವ್ಯಾಚ ಶಬ್ದಗಳಿಂದ ನಿಂದಿಸುತ್ತಾ ವೇದಿಕೆಯ ಆವರಣದಿಂದ ಬುಲೆಟ್ ಬೈಕ್​ನಲ್ಲಿ ಪರಾರಿಯಾಗಿದ್ದಾನೆ. ಇನ್ನು ಕೆಲಕಾಲ ಇಡೀ ಕಾರ್ಯಕ್ರಮವೇ ಗೊಂದಲದ ಗೂಡಾಗಿ ಪರಿಣಮಿಸ್ತು.

ಯಾವುದೇ ಕಾರಣಕ್ಕೂ ಆತನಿಗೆ ಬೇಲ್ ಕೊಡಬೇಡಿ

ಕೂಡಲೇ ಸಚಿವ ಬೈರತಿ ಸುರೇಶ್ ಗುಂಡ್ಲುಪೇಟೆ PI, PSI ಅವರನ್ನು ವೇದಿಕೆಯ ಮೈಕ್ ಮೂಲಕವೇ ಕೂಗಿ ಕರೆದು ಆ ಕಿಡಿಗೇಡಿಯನ್ನು ಬಂಧಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಿ ಎಂದ್ರು. ಯಾವುದೇ ಕಾರಣಕ್ಕೂ ಆತನಿಗೆ ಬೇಲ್ ಕೊಡಬೇಡಿ ಎಂದೂ ಸೂಚಿಸಿದ್ರು. ಅಷ್ಟೇ ಅಲ್ಲದೇ ಎಸ್ಪಿ ಜೊತೆಗೂ ಫೋನ್ ಮೂಲಕ ಮಾತನಾಡಿ ಬಂಧಿಸುವಂತೆ ಸೂಚಿಸಿದರು.

ಮತ್ತೆ ಸ್ಥಳಕ್ಕೆ ಬಂದಾಗ ಪೊಲೀಸರಿಂದ ಬಂಧನ

ಇನ್ನು ಘಟನೆ ನಡೆದು ಅರ್ಧ ಗಂಟೆ ಬಳಿಕ ಯುವಕ ರಂಜಿತ್ ಮತ್ತೆ ಸ್ಥಳಕ್ಕೆ ಆಗಮಿಸಿದ್ದ ವೇಳೆ ಪೊಲೀಸರು ಬಂಧಿಸಿದ್ದಾರೆ. ಆ ವೇಳೆ ಕಾರ್ಯಕ್ರಮದಲ್ಲಿದ್ದ ಜನರು ಆತನ ಮೇಲೆ ಹಲ್ಲೆಗೆ ಮುಂದಾದ್ರು. ಪರಿಸ್ಥಿತಿ ಅರಿತ ಪೊಲೀಸರು ಕಿಡಿಗೇಡಿಯನ್ನು ಠಾಣೆಗೆ ಕರೆದೊಯ್ದು ಪರಿಸ್ಥಿತಿಯನ್ನು ನಿಯಂತ್ರಿಸಿದರು. ಆತ ಯಾಕೆ ಯತೀಂದ್ರ ವಿರುದ್ಧ ಕಿಡಿಕಾರಿದ್ದ ಅನ್ನೋದು ಗೊತ್ತಿಲ್ಲ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments