Tuesday, August 26, 2025
Google search engine
HomeUncategorizedಟೀ ಅಂಗಡಿ ಮುಂದೆ ಪ್ರತಿಭಟನೆಗೆ ಕುಳಿತ ರಾಜ್ಯಪಾಲರು!

ಟೀ ಅಂಗಡಿ ಮುಂದೆ ಪ್ರತಿಭಟನೆಗೆ ಕುಳಿತ ರಾಜ್ಯಪಾಲರು!

ತಿರುವನಂತಪುರ: ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಕೊಲ್ಲಂ ಜಿಲ್ಲೆಯ ನಿಲಮೇಲ್‌ನಲ್ಲಿ ಇಂದು ಬೀದಿ ಬದಿಯ ಅಂಗಡಿಯ ಮುಂದೆ ಧರಣಿ ಕುಳಿತ ಘಟನೆ ನಡೆದಿದೆ. ತಮ್ಮ ಮೇಲೆ ಮುಗಿಬಿದ್ದು ಪ್ರತಿಭಟನೆ ನಡೆಸಿದ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ ಕಾರ್ಯಕರ್ತರನ್ನು ಬಂಧಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಅವರು ಧರಣಿ ನಡೆಸಿದರು.

ಇದನ್ನೂ ಓದಿ: ಅಯೋಧ್ಯೆಯಲ್ಲಿ ‘ಶ್ರೀ ರಾಮ್ ರಾಗ್ ಸೇವೆ’!: ಬಾಲಿವುಡ್​ನ ನಟ-ನಟಿಯರು ಭಾಗಿ!

ಆರಿಫ್ ಮಹಮ್ಮದ್ ಖಾನ್ ವಾಹನದಿಂದ ಇಳಿದು ನಿಲಮೇಲ್‌ನ ಜನನಿಬಿಡ ಎಂಸಿ ರಸ್ತೆಯಲ್ಲಿರುವ ಅಂಗಡಿಯಿಂದ ಕುರ್ಚಿ ತೆಗೆದುಕೊಂಡು ಅಂಗಡಿ ಮುಂದೆ ಕುಳಿತು, ಪ್ರತಿಭಟನಾಕಾರರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು. ಟಿವಿ ಚಾನೆಲ್‌ಗಳಲ್ಲಿ ಈ ನಾಟಕೀಯ ದೃಶ್ಯಗಳು ಪ್ರಸಾರವಾದವು. ಕೋಪಗೊಂಡಿದ್ದ ರಾಜ್ಯಪಾಲ ಖಾನ್ ಅವರು ಪೊಲೀಸ್ ಸಿಬ್ಬಂದಿ ಜೊತೆಗೆ ಕಠಿಣವಾಗಿ ಮಾತನಾಡಿದ್ದನ್ನೂ ವಾಹಿನಿಗಳು ತೋರಿಸಿವೆ. ಪೊಲೀಸ್ ಅಧಿಕಾರಿಗಳಲ್ಲದೆ, ಖಾನ್ ಅವರ ಅಧಿಕಾರಿಗಳು ಮತ್ತು ಸ್ಥಳೀಯ ಜನರು ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದರು.

ರಾಜ್ಯಪಾಲರು ಸಮೀಪದ ಕೊಟ್ಟಾರಕ್ಕರದ ಕಾರ್ಯಕ್ರಮವೊಂದಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಆಡಳಿತಾರೂಢ ಸಿಪಿಐ(ಎಂ)ನ ವಿದ್ಯಾರ್ಥಿ ಘಟಕವಾದ ಎಸ್‌ಎಫ್‌ಐನ ಹಲವು ಕಾರ್ಯಕರ್ತರು ರಾಜ್ಯಪಾಲರ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments