Tuesday, September 2, 2025
HomeUncategorizedಕಿಂಗ್ ಕೊಹ್ಲಿಗೆ ಮುಡಿಗೆ ಐಸಿಸಿ 'ವರ್ಷದ ಏಕದಿನ ಕ್ರಿಕೆಟಿಗ' ಪ್ರಶಸ್ತಿ

ಕಿಂಗ್ ಕೊಹ್ಲಿಗೆ ಮುಡಿಗೆ ಐಸಿಸಿ ‘ವರ್ಷದ ಏಕದಿನ ಕ್ರಿಕೆಟಿಗ’ ಪ್ರಶಸ್ತಿ

ಬೆಂಗಳೂರು : ಭಾರತದ ಮಾಜಿ ನಾಯಕ, ರನ್ ಮೆಷಿನ್ ವಿರಾಟ್ ಕೊಹ್ಲಿ ಅವರು 2023ರ ‘ವರ್ಷದ ಏಕದಿನ ಕ್ರಿಕೆಟಿಗ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ವಿರಾಟ್ ಕೊಹ್ಲಿ ಹೊರತುಪಡಿಸಿ ಮೊಹಮ್ಮದ್ ಶಮಿ ಮತ್ತು ಶುಭ್​ಮನ್ ಗಿಲ್ ಏಕದಿನ ಕ್ರಿಕೆಟಿಗ ಪ್ರಶಸ್ತಿ ರೇಸ್​ನಲ್ಲಿದ್ದರು. ಆದರೆ, ಇಬ್ಬರನ್ನು ಹಿಂದಿಕ್ಕಿ ವಿರಾಟ್ ಕೊಹ್ಲಿ ಈ ಗೌರವಕ್ಕೆ ಭಾಜನರಾಗಿದ್ದಾರೆ.

ಇದರೊಂದಿಗೆ ವಿರಾಟ್ ಕೊಹ್ಲಿ ನಾಲ್ಕನೇ ಬಾರಿಗೆ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ವಿರಾಟ್ ಕೊಹ್ಲಿ ಇದಕ್ಕೂ ಮೊದಲು ಮೂರು ಬಾರಿ ಈ ಪ್ರಶಸ್ತಿ ಗೆದ್ದಿದ್ದರು. ನಾಲ್ಕನೇ ಬಾರಿಗೆ ಈ ಪ್ರಶಸ್ತಿ ಗೆಲ್ಲುವ ಮೂಲಕ ವಿಶ್ವ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಬಾರಿ ವರ್ಷದ ಏಕದಿನ ಪ್ರಶಸ್ತಿ ಗೆದ್ದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಭಾಜನರಾಗಿದ್ದಾರೆ.

ಖವಾಜಾಗೆ ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿ

ಆಸ್ಟ್ರೇಲಿಯಾದ ಆರಂಭಿಕ ಬ್ಯಾಟರ್ ಉಸ್ಮಾನ್ ಖವಾಜಾ ಅವರು 2023ರ ಐಸಿಸಿ ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಶ್ವಿನ್, ಜೋ ರೂಟ್ ಹಾಗೂ ಟ್ರಾವಿಸ್ ಹೆಡ್​ ಸ್ಪರ್ಧೆಯಲ್ಲಿದ್ದರೂ ಖವಾಜಾಗೆ ಈ ಪ್ರಶಸ್ತಿ ಒಲಿದಿದೆ. ಖವಾಜಾ ಕಳೆದ ವರ್ಷದ 13 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 1,210 ರನ್​ ಸಿಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments