Sunday, August 24, 2025
Google search engine
HomeUncategorizedPaush Purnima 2024: ನಾಳೆ ಪುಷ್ಯ ಪೂರ್ಣಿಮೆ: ಶುಭ ಮುಹೂರ್ತ, ಪೂಜೆ ವಿಧಾನ, ಮಹತ್ವ ಹೀಗಿದೆ

Paush Purnima 2024: ನಾಳೆ ಪುಷ್ಯ ಪೂರ್ಣಿಮೆ: ಶುಭ ಮುಹೂರ್ತ, ಪೂಜೆ ವಿಧಾನ, ಮಹತ್ವ ಹೀಗಿದೆ

ಪುಷ್ಯ ಪೂರ್ಣಿಮೆಯಂದು ಏನೆಲ್ಲಾ ಮಾಡಬೇಕು ಶುಭ ಮುಹೂರ್ತ,ಪೂಜೆ ವಿಧಾನ, ಮಹತ್ವ ಮತ್ತು ಮಂತ್ರ ಹೀಗಿದೆ ಎಂದು ಸಿದ್ದಲಿಂಗೇಶ್ವರ ಗದ್ದುಗೆ ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಯವರು ಮಾಹಿತಿ ನೀಡಿದ್ದಾರೆ. 

ಪುಷ್ಯ ಮಾಸದ ಶುಕ್ಲ ಪಕ್ಷದ ಪೂರ್ಣಿಮಾ ತಿಥಿಯನ್ನು ಪುಷ್ಯ ಪೂರ್ಣಿಮಾ, ಬನದ ಹುಣ್ಣಿಮೆ ಅಥವಾ ಶಾಕಾಂಬರಿ ಹುಣ್ಣಿಮೆ ಎಂದು ಕರೆಯಲಾಗುತ್ತದೆ. ಈ ವರ್ಷ ಪುಷ್ಯ ಪೂರ್ಣಿಮಾವನ್ನು 2024 ರ ಜನವರಿ 25 ರಂದು ಗುರುವಾರ ಆಚರಿಸಲಾಗುವುದು. ಧಾರ್ಮಿಕ ನಂಬಿಕೆಯ ಪ್ರಕಾರ, ಪುಷ್ಯ ಪೂರ್ಣಿಮಾ ದಿನದಂದು ಉಪವಾಸ ವ್ರತ ಮಾಡುವುದಕ್ಕೆ, ಗಂಗಾ ಸ್ನಾನ ಮತ್ತು ದಾನ ಮಾಡುವುದಕ್ಕೆ ವಿಶೇಷ ಮಹತ್ವವನ್ನು ನೀಡಲಾಗಿದೆ.

ಸಮಯ 24-01-2024 ರಾತ್ರಿ 9:49ಕ್ಕೆ ಆರಂಭ  

25-01-2024 33 11:23 ಕ್ಕೆ ಮುಕ್ತಾಯ

ಈ ಪೌರ್ಣಮಿಯಲ್ಲಿ ಶ್ರೀಲಕ್ಷ್ಮೀನಾರಾಯಣರನ್ನು ಅಥವಾ ಪಾರ್ವತಿ ಪರಮೇಶ್ವರರ ಆರಾಧನೆಯನ್ನು ಮಾಡುವುದರಿಂದ ವಿಶೇಷ ಫಲಗಳನ್ನು ಪಡೆಯಬಹುದಾಗಿದೆ. ಶ್ರೀವಿಷ್ಣುವಿಗೆ ವಿಶೇಷವಾಗಿ ಕೀರನ್ನು ಸಮರ್ಪಿಸಿ. ನಮ್ಮ ಶಾಸ್ತ್ರಗಳ ಪ್ರಕಾರ ಸಮುದ್ರ ಮಂಥನದ ಸಮಯದಲ್ಲಿ ಮಹಾಲಕ್ಷ್ಮಿಯು ಸಮುದ್ರದಿಂದ ಅವಿರ್ಭವಿಸಿ ನಾರಾಯಣನೊಂದಿಗೆ ವಿವಾಹವಾದ ಪುಣ್ಯದಿನವೇ ಬನದ ಹುಣ್ಣಿಮೆ.

ಇನ್ನು ದಶಮಹಾವಿದ್ಯೆಯ ಆರಾಧಕರಾದ ಶಾಕ್ತ / ಶಕ್ತಿಯ ಪಂಥದವರಿಗೆ ಈ ಹುಣ್ಣಿಮೆಯ ದಿನ ವಿಶೇಷವಾಗಿರುವುದರಿಂದ ಅವರು ಅನೇಕ ಉತ್ಸವಗಳನ್ನು ಆಚರಿಸುತ್ತಾರೆ. ಈ ದಿನದಲ್ಲಿ ಶ್ರೀ ಭಗವತಿ ತಾಕಂಬರಿ ದೇವಿಯ ಬನಶಂಕರಿ ದೇವಿ ಪೂಜೆಗೆ ವಿಶೇಷವಾದ ಮಹತ್ವವಿದೆ.

ಪುಷ್ಯ ಮಾಸದ ಷಷ್ಠಿ/ಸಪ್ತಮಿ/ಅಷ್ಟಮಿಯಿಂದ ಹುಣ್ಣಿಮೆಯವರಿಗೆ ಬರುವ ದಿನಗಳನ್ನು ಶಾಕಂಬರಿಯ ನವರಾತ್ರಿಯೆಂದು ಆಚರಿಸುವ ಪದ್ಧತಿ ಇದೆ. ಯಾರು 3 ಶಾಕಂಬರಿಯ ಶ್ರೀ ಅಂತವರಿಗೆ ಲಕ್ಷ್ಮಿ ದೇವಿಯ ಕೃಪ್ತ ಸದಾ ಇರುತ್ತದೆ.

 ಈ ಪುಷ್ಯಮಾಸದ ಹುಣ್ಣಿಮೆಯಂದು ಏನನ್ನು ಮಾಡಬೇಕು ?

  • ಎಳ್ಳಿನ ತಿಂಡಿಯನ್ನು ಎಳ್ಳಿನ ಪದಾರ್ಥಗಳನ್ನು ಹಾಗೂ ಎಳ್ಳು ಮತ್ತು ಎಳ್ಳೆಣ್ಣೆಯನ್ನು ದಾನಮಾಡುವುದರಿಂದ ಶನೈಶ್ಚರ ಸ್ವಾಮಿಯು ಪ್ರಸನ್ನರಾಗುತ್ತಾರೆ.
  • ಬೆಲ್ಲವನ್ನು ದಾನಮಾಡುವುದರಿಂದ ಕುಲದೇವರು ಪ್ರಸನ್ನರಾಗುವರು.
  • ಕಂಬಳಿ/ಉಣ್ಣೆಯನ್ನು ದಾನಮಾಡುವುದರಿಂದ ದಾರಿದ್ರನಾಶವಾಗುತ್ತದೆ.
  • ಚಿಕ್ಕಮಕ್ಕಳಿಗೆ ಅದರಲ್ಲೂ ಕನೈಯರಿಗೆ ಸಿಹಿಯನ್ನು ಹಂಚುವುದರಿಂದ ಶ್ರೀ ಲಕ್ಷ್ಮೀದೇವಿಯು ಪ್ರಸನ್ನಳಾಗುತ್ತಾರೆಗೆ
  • ಅನ್ನದಾನವನ್ನು ಮಾಡುವುದರಿಂದ ಪಿತೃದೇವತೆಗಳು ತೃಪ್ತಿಯಾಗುತ್ತಾರೆ.
  • ಹೊಸ್ತಿಲ ಬಳಿ 5 ಮಣ್ಣಿನ ದೀಪವನ್ನು ಸಾಸಿವೆ ಎಣ್ಣೆ ಮತ್ತು ಎಳ್ಳೆಣ್ಣೆ ಮಿಶ್ರಣ ಮಾಡಿ ಶ್ರೀ ಹಚ್ಚುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ದೂರವಾಗಿ ನೆಮ್ಮದಿ ಪ್ರಾಪ್ತಿಯಾಗುತ್ತದೆ.

ಸದ್ಧರಂಗ ಶ್ವಾಕಂಬರೀ ಧ್ಯಾನ ಮೂಲ ಮಂತ್ರದಾನ

ಶೂಲಂ ಏಡಂ ಚ ಡಮರುಂ ದಧಾನಾಮಭಯಪ್ರದಾಯಂ

ಸಿಂಹಾಸನಸ್ಥಾಂ ಧ್ಯಾಯಾಮಿ ದೇವೀಂ ಶಾಕಂಬರೀಮಹಂ॥

ಓಂ ವನಶಂಕರೀ ನಮಃ ಬನನಶಂಕರಿ ನಮೋ ಭಗವತೇ ವನಶಂಕರಿ ಮಹಾವರಪ್ರದಾಯಿಕೇ ಸಕಲ ಶತ್ರು ಸಂಹಾರಿಣಿ, ಸಕಲ ದುಷ್ಟಗ್ರಹನಾಶಿನಿ, ಸಕಲ ಅಭಯ ಪ್ರದಾಯಿಕೇ, ಕ್ಲೀಂ ನಮೋ ಭಗವತೀ ವನಶಂಕರೀ ಪ್ರಸೀದ ಪ್ರಸೀದ ಸ್ವಾಹಾ ॥

ಸಾಧ್ಯವಾದಷ್ಟು ಕಾಲ ಶ್ರದ್ಧಾಭಕ್ತಿಯಿಂದ 1008 ಬಾರಿ ಜಪವನ್ನು ಜಪವನ್ನು ಮಾಡಿ. ನದಿ ತೀರದಲ್ಲಿ ಗುರುಗಳ ಸಮ್ಮುಖದಲ್ಲಿ ವನದಲ್ಲಿ/ಕಾಡಿನಲ್ಲಿ, ಮಾಡುವುದರಿಂದ ಅಧಿಕ ಪುಣ್ಯ ದೊರೆಯುತ್ತದೆ.

ರಾಹುವಿನ ತೊಂದರೆ ಇರುವವರು ದೇವಿ ಬನಶಂಕರಿಗೆ ತರಕಾರಿಗಳನ್ನು ಸಮರ್ಪಿಸಿ. ಯಾರಿಗೆ ಸಾಲಬಾಧೆ ಇದೆಯೋ ಅಂತಹವರು ದೇವಿ ಇಷ್ಟಕಾಮೇಶ್ವರಿಗೆ ಏಲಕ್ಕಿ ಮಾಲೆಯನ್ನು ಸಮರ್ಪಿಸಿ.ಕಲ್ಯಾಣ ಪ್ರಾಪ್ತಿಗಾಗಿ ದೇವಿ ಇಷ್ಟಕಾಮೇಶ್ವರಿಗೆ ಸಂಪಿಗೆ ಮಾಲೆಯನ್ನು ಸಮರ್ಪಿಸಿ.

 

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments