Thursday, August 28, 2025
HomeUncategorizedಈ ಮೃಗ ಸಂಸದ ಆಗೋದಕ್ಕೆ ನಾಲಾಯಕ್ : ಕೆ.ಎನ್. ರಾಜಣ್ಣ

ಈ ಮೃಗ ಸಂಸದ ಆಗೋದಕ್ಕೆ ನಾಲಾಯಕ್ : ಕೆ.ಎನ್. ರಾಜಣ್ಣ

ತುಮಕೂರು : ಸಿಎಂ ಸಿದ್ದರಾಮಯ್ಯರನ್ನು ಅವನ್ಯಾವನೋ ದುರಹಂಕಾರಿನೋ.. ಮನುಷ್ಯನೋ.. ಮೃಗನೋ ಗೊತ್ತಿಲ್ಲ. ಮಗನೇ ಅಂತ ಕರೀತನಲ್ಲಾ.. ಇದನ್ನ ಯಾರಾದ್ರೂ ಸಹಿಸೋಕೆ ಆಗುತ್ತಾ ಹೇಳಿ ಎಂದು ಸಂಸದ ಅನಂತ್ ಕುಮಾರ್ ಹೆಗಡೆ ವಿರುದ್ಧ ಸಹಕಾರ ಸಚಿವ ಕೆ.ಎನ್. ರಾಜಣ್ಣ ಕಿಡಿಕಾರಿದ್ದಾರೆ.

ತುಮಕೂರಿನಲ್ಲಿ ನಡೆದ ಹಿಂದುಳಿದ ವರ್ಗಗಳ ಒಕ್ಕೂಟದ ದಶಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಇರುವ ಎಲ್ಲಾ ಸಾತ್ವಿಕ ಜನರು ಅದನ್ನ ಖಂಡನೆ ಮಾಡುವಂತದ್ದು ನಮ್ಮ ಕರ್ತವ್ಯ ಎಂದು ಹೇಳಿದ್ದಾರೆ.

ಎಲ್ಲಾ ಕಡೆ ಟೀಕೆ ಮಾಡಿದ್ದಾರೆ, ನಾವು ಮೆರವಣಿಗೆ ಮಾಡಿ ಸುಟ್ಟು, ಕೆರದಲ್ಲಿ ಹೊಡೆದು ಎಲ್ಲಾ ಮಾಡಬಹುದು. ಆದರೆ, 6 ಬಾರಿ ಲೋಕಸಭಾ ಸದಸ್ಯನಾಗಿ ಜನರ ಭಾವನೆ ಕೆರಳಿಸೋದು, ಜನರ ಮನಸ್ಸಿಗೆ ಬೇಸರ ಮೂಡಿಸೋದು. ಲೋಕಸಭೆ ಸದಸ್ಯ ಆಗಿ ಜನರ ಜನಪ್ರತಿನಿಧಿ ಆಗೋದಕ್ಕೆ ನಾಲಾಯಕ್ ಎಂದು ಛೇಡಿಸಿದ್ದಾರೆ

ನಾಲ್ಕೂವರೆ ವರ್ಷ ಮಲಗಿಬಿಡ್ತಾನೆ

ಬ್ರಾಹ್ಮಣ ಸಮುದಾಯದವರು ಯಾರಿಗೂ ತೊಂದರೆ ಕೊಡೋರು, ಹೀಯಾಳಿಸೋರು ಅಲ್ಲಾ. ಆದರೆ, ಇವನು ಬ್ರಾಹ್ಮಣ ಸಮುದಾಯ ಅಂತ ಹೇಳಿಕೊಳ್ತಾನೆ. ಸಮಾಜದಲ್ಲಿ ಯಾವ ನಿಕೃಷ್ಟ ಮನುಷ್ಯನೂ‌ ಕೂಡ ಆ ರೀತಿಯ ನಡವಳಿಕೆ ಮಾಡೋದಿಲ್ಲ. ನಾಲ್ಕೂವರೆ ವರ್ಷ ಮಲಗಿಬಿಡ್ತಾನೆ, ಅದೆಲ್ಲಿ ಮಲಗಿರ್ತಾನೆ ಗೊತ್ತಿಲ್ಲ. ಕೊನೆ ವರ್ಷ ಬಂದು ಹಿಂಗೆ ಅದು ಇದು ಹಿಂದೂಗಳು ಅಂತ ಬೈಯ್ದು ಬಿಡ್ತಾನೆ. ವೋಟು ಹಾಕಿಸಿಕೊಂಡು ತಿರಗ ಹೋಗಿ ಮಲಗಿ ಬಿಡ್ತಾನೆ ಎಂದು ಕೆ.ಎನ್. ರಾಜಣ್ಣ ವಾಗ್ದಾಳಿ ನಡೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments