Tuesday, August 26, 2025
Google search engine
HomeUncategorizedಹೇಳಿದ್ದು ಕಾಂಗ್ರೆಸ್, ಸಾಧಿಸಿ ತೋರಿಸಿದ್ದು ಮೋದಿ : ಬಿ.ವೈ. ವಿಜಯೇಂದ್ರ

ಹೇಳಿದ್ದು ಕಾಂಗ್ರೆಸ್, ಸಾಧಿಸಿ ತೋರಿಸಿದ್ದು ಮೋದಿ : ಬಿ.ವೈ. ವಿಜಯೇಂದ್ರ

ಬೆಂಗಳೂರು : ದೇಶದಲ್ಲಿ 25 ಕೋಟಿ ಜನರು ಬಡತನಮುಕ್ತರಾಗಿರುವ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಂತಸ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಅವರು, ಗರೀಬಿ ಹಠಾವೋ‌ ಎಂದಿದ್ದು ಕಾಂಗ್ರೆಸ್. ಆದರೆ, ಅದನ್ನು ಸಾಧಿಸಿ, ಬಡತನ ನಿರ್ಮೂಲನೆ ಮಾಡಿದ್ದು ಪ್ರಧಾನಿ ನರೇಂದ್ರ ಮೋದಿ. ಇದಲ್ಲವೇ ಅಚ್ಛೆದಿನ್? ಎಂದು ಕಾಂಗ್ರೆಸ್ಸಿಗರಿಗೆ ಟಾಂಗ್ ಕೊಟ್ಟಿದ್ದಾರೆ.

ಕಳೆದ 9 ವರ್ಷದಲ್ಲಿ ಭಾರತದ ಬಡತನ ಸಂಖ್ಯೆ ಕುಸಿತ, ಇದು ನೀತಿ ಆಯೋಗದ ವರದಿ. 2013-14ರ ವೇಳೆಗೆ ಭಾರತದಲ್ಲಿ ಶೇ.29.17 ರಷ್ಟಿದ್ದ ಬಡನತ ಸಂಖ್ಯೆ ಅನುಪಾತ 2022-23ರ ವೇಳೆ ಶೇಕಡಾ 11.28ಕ್ಕೆ ಕುಸಿತ ಕಂಡಿದೆ. 9 ವರ್ಷದಲ್ಲಿ 24.82 ಕೋಟಿ ಮಂದಿ ಬಡತನದಿಂದ ಹೊರ ಬಂದಿದ್ದಾರೆ ಎಂದು ಹೇಳಿದ್ದಾರೆ.

25 ಕೋಟಿ ಜನರು ಬಡತನಮುಕ್ತ

2013 ರಿಂದ 2023ರ ಅವಧಿಯಲ್ಲಿ ಒಟ್ಟು 24.8 ಕೋಟಿ ಭಾರತೀಯರು ಬಡತನ ರೇಖೆಯಿಂದ ಹೊರ ಬಂದಿದ್ದಾರೆ ಎಂದು ಕೇಂದ್ರ ಸರ್ಕಾರ ಹೇಳಿದೆ. ನೀತಿ ಆಯೋಗ ಸಿದ್ಧಪಡಿಸಿದ ಬಹು ಆಯಾಮ ಅಳತೆ ಆಧಾರದಲ್ಲಿ ನಡೆದ ಅಧ್ಯಯನದಲ್ಲಿ ಈ ಅಂಶವಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments