ಬೈ ಬೈ 2023, ವೆಲ್ಕಮ್ 2024 : ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸಿದ ಜನತೆ

ಬೆಂಗಳೂರು : ಬೈ ಬೈ 2023.. ವೆಲ್‌ಕಮ್‌ 2024.. ಹೀಗೆ ಜೋರಾಗಿ ಕೂಗುತ್ತಲೇ 2023ಕ್ಕೆ ಗುಡ್‌ಬೈ ಹೇಳಿ 2024ರ ಹೊಸ ವರ್ಷವನ್ನು ವಿಶ್ವದ ಮೂಲೆ ಮೂಲೆಯಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು.

ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂದ 2023ನೇ ವರ್ಷಕ್ಕೆ ಬೈ ಬೈ ಹೇಳಿರುವ ಜನರು 2024ರ ನೂತನ ವರ್ಷವನ್ನು ಸಂಭ್ರಮ, ಸಡಗರದಿಂದ ಬರಮಾಡಿಕೊಂಡರು.

ಮಧ್ಯರಾತ್ರಿ 12 ಗಂಟೆ ಆಗುತ್ತಿದ್ದಂತೆ ಹೋಟೆಲ್‌, ಪಬ್‌, ಹೋಮ್‌ಸ್ಟೇ, ಬಡಾವಣೆ, ಬೀದಿ ಬೀದಿಗಳಲ್ಲಿ ಕೇಕ್‌ ಕತ್ತರಿಸಿ ಪರಸ್ಪರ ಹೊಸ ವರ್ಷದ ಶುಭಾಶಯ ವಿನಿಮಯ ಮಾಡಿಕೊಂಡರು. ಅಲ್ಲದೇ, ಪಟಾಕಿ ಸಿಡಿಸಿ ಸಂಭ್ರಮಿಸಿ ಸಿಳ್ಳೆ, ಕೇಕೆ ಹೊಡೆದು ಹೊಸ ವರ್ಷವನ್ನು ಸ್ವಾಗತಿಸಿದರು.

ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಮೈಸೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಸಂಭ್ರಮ ಮನೆ ಮಾಡಿತ್ತು. ಸಂಜೆಯಿಂದಲೇ ಹೊಸ ವರ್ಷದ ಸ್ವಾಗತಕ್ಕೆ ಸಜ್ಜಾಗಿದ್ದ ಜನರು, ವಿವಿಧ ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕುಣಿದು ಕುಪ್ಪಳಿಸಿದರು.

ಬಿಗಿ ಪೊಲೀಸ್ ಬಂದೋಬಸ್ತ್‌

ಹೋಟೆಲ್‌, ಪಬ್, ಹೋಮ್‌ಸ್ಟೇ, ಬಡಾವಣೆ, ಅಪಾರ್ಟ್‌ಮೆಂಟ್‌, ಗಲ್ಲಿಗಲ್ಲಿ ಸೇರಿದಂತೆ ಎಲ್ಲೆಡೆ ಜನರು ತಡರಾತ್ರಿವರೆಗೂ ಮೋಜು ಮಸ್ತಿ ಮಾಡಿದರು. ಇನ್ನು ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಭದ್ರತಾ ದೃಷ್ಟಿಯಿಂದ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಪೊಲೀಸರು ಬಿಗಿ ಬಂದೋಬಸ್ತ್‌ ಹಮ್ಮಿಕೊಂಡಿದ್ದರು.

RELATED ARTICLES

Related Articles

TRENDING ARTICLES