Thursday, August 28, 2025
HomeUncategorizedಸಹಸ್ರಲಿಂಗದಲ್ಲಿ ಈಜಲು ತೆರಳಿದ್ದ ಒಂದೇ ಕುಟುಂಬದ ಐವರು ನೀರುಪಾಲು!

ಸಹಸ್ರಲಿಂಗದಲ್ಲಿ ಈಜಲು ತೆರಳಿದ್ದ ಒಂದೇ ಕುಟುಂಬದ ಐವರು ನೀರುಪಾಲು!

ಉತ್ತರ ಕನ್ನಡ : ಸಹಸ್ರಲಿಂಗದಲ್ಲಿ ಈಜಲು ತೆರಳಿದ್ದ ಒಂದೇ ಕುಟುಂಬದ ಐವರು ನಾಪತ್ತೆಯಾಗಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸಹಸ್ರಲಿಂಗ ಪ್ರವಾಸಿ ತಾಣ ಸಮೀಪದ ಭೂತದಗುಂಡಿಯಲ್ಲಿ (ಶಾಲ್ಮಲಾ ನದಿ)ಈ ಘಟನೆ ನಡೆದಿದೆ.

ರಾಮನಬೈಲಿನ ಮೌಲಾನ ಮಹಮ್ಮದ್ ಸಲೀಮ್ ಕಲೀಲ್ ರೆಹಮಾನ್ (44) ನಾದಿಯಾ ನೂರ್ ಅಹಮದ್ ಶೇಖ್ (20) ಹಾಗೂ ಕಸ್ತೂರಬಾ ನಗರದ ಮಿಸ್ಬಾ ತಬಸುಮ್ (21), ರಾಮನಬೈಲಿನ ನಬಿಲ್ ನೂರ್ ಅಹಮದ್ ಶೇಖ್ (22) ರಾಮನಬೈಲಿನ ಯುವಕ ಉಮರ್ ಸಿದ್ದಿಕ್ (23) ನಾಪತ್ತೆಯಾದವರು.

ಇವರು ವೀಕೆಂಡ್ ಹಿನ್ನಲೆ ಸಹಸ್ರಲಿಂಗಕ್ಕೆ ಬಂದಿದ್ದರು. ಈ ವೇಳೆ ಐವರು ಯುವಕರು ಶಾಲ್ಮಲಾ ನದಿಯಲ್ಲಿ ಈಜಲು ತೆರಳಿದ್ದರು. ಆದರೆ, ಎಷ್ಟು ಸಮಯವಾದರೂ ಬಾರದೇ ಇದ್ದಾಗ ಅನುಮಾನ ಬಂದಿದೆ. ಎಲ್ಲಿ ಹುಡುಕಿದರೂ ಯುವಕರು ಕಾಣಿಸಿಲ್ಲ. ಹೀಗಾಗಿ, ನೀರು ಪಾಲಾಗಿರುವ ಶಂಕೆ ವ್ಯಕ್ತವಾಗಿದೆ.

ಓರ್ವನ ಮೃತ ದೇಹ ಪತ್ತೆ

ಒಬ್ಬ ಯುವಕನ ಮೃತ ದೇಹ ಪತ್ತೆಯಾಗಿದ್ದು, ನಾಲ್ವರ ಮೃತ ದೇಹಕ್ಕಾಗಿ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಸ್ಥಳಕ್ಕೆ ಶಿರಸಿ ಗ್ರಾಮೀಣ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿದ್ದಾರೆ. ಈ ಸಂಬಂಧ ಶಿರಸಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments