ಅಥಣಿ: ಬೆಳಗಾವಿಯಿಂದ ಅಥಣಿಯನ್ನು ಪ್ರತ್ಯೇಕವಾಗಿಸಿ ಆಥಣಿ ಜಿಲ್ಲೆಯನ್ನಾಗಿ ಮಾಡಲು ಮುಖ್ಯಮಂತ್ರಿ ಅವರನ್ನು ಒತ್ತಾಯಿಸುವ’ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ನಗರದ ಜಿಲ್ಲಾ ಹೋರಾಟ ಸಮಿತಿ ಹಮ್ಮಿಕೊಂಡಿದ್ದ ಪ್ರತಿಭಟನಾ ರ‍್ಯಾಲಿ ಸಂದರ್ಭದಲ್ಲಿ ಮಾತನಾಡಿದ ಅವರು, ಬೆಳಗಾವಿ ದೊಡ್ಡ ಜಿಲ್ಲೆಯಾಗಿ ಮುಂದುವರೆಯಲಿ. ಅಥಣಿಗೆ ಪಕ್ಕದ ಕ್ಷೇತ್ರಗಳ ಕಾಗವಾಡ, ಕುಡಚಿ, ರಾಯಬಾಗ, ಹಾರುಗೇರಿಗಳ ಜೊತೆಗೆ ಬಾಗಲಕೋಟೆ ಜಿಲ್ಲೆಯ ಎರಡು ಕೇತ್ರಗಳನ್ನು ಸೇರಿಸಿಕೊಂಡು ಅಥಣಿ ಪ್ರತ್ಯೇಕ ಜಿಲ್ಲೆಯಾಗಿ ಮಾಡಿದಲ್ಲಿ ಈ ಭಾಗದ ಜನರು ತಮ್ಮ ಕೆಲಸ ಕಾರ್ಯಗಳಿಗೆ ಬೆಳಗಾವಿಗೆ 200 ಕಿ.ಮೀ ದೂರ ಹೋಗಿ ಬರುವ ಬವಣೆ ನೀಗಲಿದೆ.
ಆಡಳಿತ್ಮಕವಾಗಿ ದೃಷ್ಟಿಯಿಂದ ಆಡಳಿತ ಜನರ ಸಮೀಪ ತರುವುದಕ್ಕೆ ಅಥಣಿ ಅನುಕೂಲರವಾಗಲಿದೆ. ಈ ಕುರಿತು ನಾನು ಬೆಳಗಾವಿ ಅಧಿವೇಶನದಲ್ಲಿ ಧ್ವನಿ ಎತ್ತುವೆ’ ಎಂದರು.


