Tuesday, September 2, 2025
HomeUncategorizedಸಿದ್ಧಗಂಗಾ ಮಠದಲ್ಲಿ ರಾಜಕಾರಣ ಮಾಡಿದ್ದಾರೆ : ಸೋಮಣ್ಣ ವಿರುದ್ಧ ರೇಣುಕಾಚಾರ್ಯ ಕೆಂಡಾಮಂಡಲ

ಸಿದ್ಧಗಂಗಾ ಮಠದಲ್ಲಿ ರಾಜಕಾರಣ ಮಾಡಿದ್ದಾರೆ : ಸೋಮಣ್ಣ ವಿರುದ್ಧ ರೇಣುಕಾಚಾರ್ಯ ಕೆಂಡಾಮಂಡಲ

ದಾವಣಗೆರೆ : ಸಿದ್ಧಗಂಗಾ ಶ್ರೀಗಳ ಮುಂದೆ ಅಸಮಾಧಾನ ವ್ಯಕ್ತಪಡಿಸಿರುವ ಮಾಜಿ ಸಚಿವ ವಿ. ಸೋಮಣ್ಣ ನಡೆಗೆ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಕೆಂಡಾಮಂಡಲವಾಗಿದ್ದಾರೆ.

ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮಠದಲ್ಲಿ ಮಾತನಾಡುವ ಅವಶ್ಯಕತೆ ಇತ್ತಾ? ಸಿದ್ಧಗಂಗಾ ಮಠದಲ್ಲಿ ರಾಜಕಾರಣ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ದೆಹಲಿಗೆ ಹೋಗ್ತಾರಾ ಹೋಗಲಿ, ಅದೇನು ಚಾಡಿ ಹೇಳುತ್ತಾರೋ ಹೇಳಲಿ. ನಮಗೂ ದೆಹಲಿ ನಾಯಕರು ಗೊತ್ತು, ನಾವು ದೆಹಲಿಗೆ ಹೋಗ್ತಿವಿ. ಬಿ.ಎಸ್. ಯಡಿಯೂರಪ್ಪನವರ ಬಗ್ಗೆ ಮಾತನಾಡಿದರೆ ಸುಮ್ಮನೆ ಇರಲ್ಲ. ಬಿಎಸ್​ವೈ ಕರೆದು ಹೊಡೆದರು ಪರವಾಗಿಲ್ಲ, ನಾನು ಮಾತನಾಡುತ್ತೇನೆ. ವಿನಾಕಾರಣ ಬಿಎಸ್​ವೈ ಬಗ್ಗೆ ಮಾತನಾಡೋದು ಸರಿಯಲ್ಲ ಎಂದು ಗುಡುಗಿದ್ದಾರೆ.

ಬಿಎಸ್​ವೈ ರೆಡಿ ಮೇಡ್ ಫುಡ್ ಅಲ್ಲ

ವಿಧಾನಸಭೆ ಸೋಲಿನ ಹೊಡೆತವನ್ನು ವರಿಷ್ಠರು ನೋಡಿದ್ದಾರೆ. ಹೀಗಾಗಿ, ಬಿ.ವೈ. ವಿಜಯೇಂದ್ರರನ್ನು ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದಿದ್ದೇ ಯಡಿಯೂರಪ್ಪ. ಬಿಎಸ್​ವೈ ರೆಡಿ ಮೇಡ್ ಫುಡ್ ಅಲ್ಲ. ಸೋಮಣ್ಣ ಬಂದಿದ್ದು ಕಾಂಗ್ರೆಸ್ ಪಕ್ಷದಿಂದ. ನಿಮ್ಮಿಂದ ಬಿಜೆಪಿ ಅಧಿಕಾರಕ್ಕೆ ಬಂದಿಲ್ಲ. ಕಾಂಗ್ರೆಸ್ ನಿಂದ ಬಂದು ಅಧಿಕಾರ ಅನುಭವಿಸಿದ್ದೀರಿ. ಸೋತರು ಸಹ ಎಂಎಲ್​ಸಿ ಆಗಿ ಅಧಿಕಾರ ಅನುಭವಿಸಿದ್ದೀರಿ. ನಿಮ್ಮನ್ನೂ ಯಡಿಯೂರಪ್ಪ ಸಚಿವರನ್ನಾಗಿ ಮಾಡಿದ್ದು ತಪ್ಪಾ? ಎಂದು ಹರಿಹಾಯ್ದಿದ್ದಾರೆ.

ವಿಜಯೇಂದ್ರ ಪಾರ್ಟಿ ಕಟ್ಟಿಲ್ವಾ?

ಕಾಂಗ್ರೆಸ್ ನಿಂದ ಬಂದು ಸಚಿವರಾಗಲಿಲ್ಲವೇ? ಆಗ ನಮಗೇನು ಸಾಮಾರ್ಥ್ಯ ಇರಲಿಲ್ಲವೇ? ನಿರಂತರವಾಗಿ ಅಧಿಕಾರ ಅನುಭವಿಸಿ ಈಗ ಯಡಿಯೂರಪ್ಪ ವಿರುದ್ಧ ಮಾತನಾಡುತ್ತೀರಾ? ಕೀಳು ಮಟ್ಟದ ಭಾಷೆ ಬಳಸುತ್ತೀರಾ? ವಿಜಯೇಂದ್ರ ಪಾರ್ಟಿ ಕಟ್ಟಿಲ್ವಾ? ರಾಷ್ಟ್ರೀಯ ನಾಯಕರಿಗೆ ಅಪಮಾನ ಮಾಡುತ್ತಿದ್ದೀರಿ. ಬಾಯಿಗೆ ಬೀಗ ಹಾಕಿ ಸುಮ್ಮನೇ ಇದ್ದೆ ಎಂದು ಸೋಮಣ್ಣ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments