Saturday, August 23, 2025
Google search engine
HomeUncategorizedಡಿಕೆಶಿ ಆಲೂಗಡ್ಡೆ ಹಾಕಿ ಚಿನ್ನ ತೆಗೆದಿದ್ರೆ ತಿಳಿಸಲಿ : ಸಿ.ಟಿ. ರವಿ ವ್ಯಂಗ್ಯ

ಡಿಕೆಶಿ ಆಲೂಗಡ್ಡೆ ಹಾಕಿ ಚಿನ್ನ ತೆಗೆದಿದ್ರೆ ತಿಳಿಸಲಿ : ಸಿ.ಟಿ. ರವಿ ವ್ಯಂಗ್ಯ

ಬೆಂಗಳೂರು : ಡಿ.ಕೆ. ಶಿವಕುಮಾರ್ ಅವರ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಸಿಬಿಐ ತನಿಖೆ ಅಮಾನತು ವಿಚಾರ ಸಂಬಂಧ ಮಾಜಿ ಸಚಿವ ಸಿ.ಟಿ. ರವಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಡಿ.ಕೆ. ಶಿವಕುಮಾರ್ ಅವರು ಆಲೂಗಡ್ಡೆ ಹಾಕಿ‌ ಚಿನ್ನ ತೆಗೆದಿದ್ರೆ ಜನಸಾಮಾನ್ಯರಿಗೆ ತಿಳಿಸಲಿ ಎಂದು ವ್ಯಂಗ್ಯವಾಡಿದ್ದಾರೆ.

2020ರಲ್ಲಿ ಸಿಬಿಐ ಎಫ್​ಐಆರ್ ಹಾಕಿದೆ. ಇದನ್ನ ಚಾಲೆಂಜ್ ಮಾಡಿ ಡಿಕೆಶಿ‌ ಹೈಕೋರ್ಟ್ ಮೊರೆ ಹೋಗಿದ್ದರು. ಮೂರು ತಿಂಗಳ ಒಳಗೆ ಸಿಬಿಐ ಫೈನಲ್ ರಿಪೋರ್ಟ್ ಸಬ್​ಮಿಟ್ ಮಾಡಲು ಹೇಳಿತ್ತು. ಈ ಹಂತದಲ್ಲಿ ‌ವಾಪಸ್ ಪಡೆದಿದ್ದಾರೆ. ವಿತ್ ಡ್ರಾ ಮಾಡಲು‌ ಬರುವುದಿಲ್ಲ. ಒಬ್ಬ ಭ್ರಷ್ಟ‌ ಆರೋಪಿಯ ರಕ್ಷಣೆಗೆ ನಿಲ್ಲೋದು ಪ್ರಜಾಪ್ರಭುತ್ವದ ಮೇಲೆ ವಿಶ್ವಾಸ ಇಟ್ಟವರು ಮಾಡುವ ಕೆಲಸವಲ್ಲ ಎಂದು ಕಿಡಿಕಾರಿದ್ದಾರೆ.

ನಮ್ಮವರ ಮೇಲೂ ಆರೋಪ ಇದ್ದವು

ಸರ್ಕಾರದ ಮುಖ್ಯ ಕಾರ್ಯದರ್ಶಿ, ಹೋಂ ಸೆಕ್ರೆಟರಿಗೆ ಪ್ರಶ್ನೆ ಮಾಡುತ್ತೇನೆ. ಯಾವ ಆಧಾರದ ಮೇಲೆ ಕ್ಯಾಬಿನೆಟ್‌ಗೆ‌ ತಂದ್ರಿ ಈ ವಿಚಾರವನ್ನು? ನೀವು ಮಾಡಿರೋದು ಸಂವಿಧಾನದ ‌ವಿರೋಧಿ. ನಮ್ಮವರ ಮೇಲೂ ಆರೋಪ ಇದ್ವು. ಅವರು ಕೇಸ್ ವಿತ್ ಡ್ರಾ‌ ಬಂಡತನಕ್ಕೆ ಕೈ‌ ಹಾಕಲಿಲ್ಲ. ಬದಲಿಗೆ ನ್ಯಾಯಾಲಯಕ್ಕೆ ಹೋದರು. ತಮ್ಮ ಅಕ್ರಮಕ್ಕೆ ಸಂಪುಟವನ್ನ‌ ಬಳಸಿಕೊಳ್ಳಲಾಗಿದೆ ಎಂದು ಹರಿಹಾಯ್ದಿದ್ದಾರೆ.

ನಗೆ ಪಾಟಲಿನ ಕೆಲಸ ಮಾಡಿದ್ದೀರಿ

ಬ್ಲಾಕ್​ಮೇಲ್ ಪಾಲಿಟಿಕ್ಸ್ (Blackmail politics) ನಡೆದಿದೆ. ರಾಜ್ಯಪಾಲರು ಮಧ್ಯೆ ಪ್ರವೇಶಿಸಬೇಕು. ಲಾಲೂ ಪ್ರಸಾದ್ ಯಾದವ್ ಅವರನ್ನೂ ಮೀರಿಸಿದ್ದೀರಿ. ಸರ್ಕಾರದ ಮುಖ್ಯ ಕಾರ್ಯದರ್ಶಿ ಆಡಳಿತಾತ್ಮಕ ಜವಾಬ್ದಾರಿ ನಿಭಾಯಿಸಿಲ್ಲ. ನೀವು ಮಾಡಿರೋದು ನಗೆ ಪಾಟಲಿನ ಕೆಲಸ ಎಂದು ಸಿ.ಟಿ. ರವಿ ವಾಗ್ದಾಳಿ ನಡೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments