Monday, August 25, 2025
Google search engine
HomeUncategorizedಜಾತಿ ಗಣತಿಗೆ ನಮ್ಮನ್ನ ಯಾರು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ : ಎಸ್.ಟಿ. ಸೋಮಶೇಖರ್

ಜಾತಿ ಗಣತಿಗೆ ನಮ್ಮನ್ನ ಯಾರು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ : ಎಸ್.ಟಿ. ಸೋಮಶೇಖರ್

ಬೆಂಗಳೂರು : ಜಾತಿ ಜನಗಣತಿಗೆ ನಮ್ಮ ಯಾರು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ವೈಯಕ್ತಿಕವಾಗಿ ಜಾತಿ ಗಣತಿ ಸರ್ವೆ ಮಾಡಿಲ್ಲ ಎಂದು ಮಾಜಿ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸಮಾಜದ ನಿರ್ಮಲಾನಂದನಾಥ ಸ್ವಾಮೀಜಿಗಳು ಒಕ್ಕಲಿಗರ ಸಭೆ ಕರೆದಿದ್ದರು. ಲೋಕಸಭಾ ಸದಸ್ಯರು, ಶಾಸಕರು, ಎಂಎಲ್​ಸಿಗಳು ಪಕ್ಷಾತೀತವಾಗಿ ಸಭೆಯಲ್ಲಿ ಭಾಗವಹಿಸಿದ್ದರು ಎಂದು ತಿಳಿಸಿದರು.

ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಕೊಡಬೇಕು ಎಂದು ಸಭೆಯಲ್ಲಿ ತೀರ್ಮಾನ ಆಯ್ತು. ಸ್ವಾಮೀಜಿಗಳ ತೀರ್ಮಾನದಂತೆ ಎಲ್ಲಾ ಪಕ್ಷದಲ್ಲಿರುವವರು ಪಕ್ಷಾತೀತವಾಗಿ ಸಹಿ ಮಾಡಿದ್ರು. ಸಿಎಂ, ಡಿಸಿಎಂ ಅಂತಾ ಕರೆಸಿಲ್ಲ. ಸಮಾಜದ ಎಲ್ಲಾ ಗಣ್ಯರನ್ನ ಕರೆಸಿದ್ರು. ಸಮಾಜದ ಒಳಿತಿಗಾಗಿ ಸಹಿ ಮಾಡಲಾಗಿದೆ. ಯಾಕೆ ಸೈನ್ ಮಾಡಿದ್ರು ಎಂಬ ಪ್ರಶ್ನೆ ಯಾಕಾಗುತ್ತೆ? ಏನು ಸರಿಪಡಿಸಬೇಕು ಅದನ್ನ ಸ್ವಾಮಿಜಿ ಹೇಳಿದ್ರು. ಅವರು ಏನು ಹೇಳಿದ್ದಾರೆ ಅದನ್ನು ನಾವು ಮಾಡಿದ್ದೇವೆ ಎಂದು ಹೇಳಿದರು.

ಹಿಂದುಳಿದ, ದಲಿತರ ಬಗ್ಗೆ ಸಿಎಂಗೆ ಕಾಳಜಿಯಿದೆ

ನಮ್ಮ ಸಮಾಜ ಹಾಗೂ ಲಂಬಾಣಿ ಸಮಾಜಕ್ಕೆ ಆಗಾಗ ಆತಂಕ ಉಂಟಾಗುತ್ತಿದೆ ಎಂದು ಅರವಿಂದ ಲಿಂಬಾವಳಿ ಹೇಳಿದರು. ಬಾಗಲಕೋಟೆಯ ಬೋವಿ ಸಮಾಜದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇನ್ನು ಹಿಂದುಳಿದ, ದಲಿತರ ಬಗ್ಗೆ ಸಿಎಂ ಸಿದ್ದರಾಮಯ್ಯಗೆ ಅತ್ಯಂತ ಕಾಳಜಿ ಇದೆ. ದೇಶದಲ್ಲಿ ನರೇಂದ್ರ ಮೋದಿ, ಕರ್ನಾಟಕದಲ್ಲಿ ಸಿದ್ದರಾಮಯ್ಯ , ಇಬ್ಬರೂ ಹಿಂದುಳಿದವರಿಗೆ, ದಲಿತರಿಗೆ ನ್ಯಾಯ ಕೊಡುತ್ತಾರೆ ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments