Wednesday, August 27, 2025
Google search engine
HomeUncategorizedಹೆಂಡ್ತಿ ಸೌಂದರ್ಯವತಿಯಾಗಿದ್ದಕ್ಕೆ ಕೊಲೆಗೈದ ಪತಿರಾಯ

ಹೆಂಡ್ತಿ ಸೌಂದರ್ಯವತಿಯಾಗಿದ್ದಕ್ಕೆ ಕೊಲೆಗೈದ ಪತಿರಾಯ

ಕೋಲಾರ: ತನ್ನ ಹೆಂಡತಿ ನೋಡೋಕೆ ಸುಂದರವಾಗಿದ್ದಾಳೆ ಅಂತ ನಿನ್ನಷ್ಟೇ ಸುಂದರವಾದ ಆಭರಣ ಹಾಗೂ ಹಣವನ್ನು ನಿನ್ನ ತವರು ಮನೆಯಿಂದ ತರಬೇಕು ಎಂದು ವರದಕ್ಷಿಣೆ ಕಿರುಕುಳ ಕೊಟ್ಟ ಗಂಡ, ತನ್ನ ಮುದ್ದಾದ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ಕೋಲಾರದಲ್ಲಿ ನಡೆದಿದೆ.

ಮೃತಳನ್ನು ಮಾಹೇನೂರ್ (22) ಎಂದು ಗುರುತಿಸಲಾಗಿದೆ. ಮಿಲ್ಲತ್ ನಗರದಲ್ಲಿ ಯುವತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ.

ಘಟನೆಯ ವಿವರ

2 ವರ್ಷಗಳ ಹಿಂದಷ್ಟೇ ಸಯ್ಯದ್ ಮತ್ತು ಮಾಹೇನೂರ್ ಮದುವೆಯಾಗಿದ್ದರು. ಕಳೆದ ಕೆಲವು ತಿಂಗಳಿನಿಂದ ಹಣ-ಆಸ್ತಿ ಹಾಗೂ ಬುಲೆಟ್ ಬೈಕ್‍ಗಾಗಿ ತವರಿನಿಂದ ಹಣ ತರುವಂತೆ ಪತ್ನಿಗೆ ಪೀಡಿಸುತ್ತಿದ್ದ ಅಂತಾ ಸಯ್ಯದ್ ವಿರುದ್ಧ ಮೃತಳ ಸಂಬಂಧಿಕರು ಆರೋಪಿಸಿದ್ದಾರೆ.

ಇದನ್ನೂ ಓದಿ: ಉಗ್ರರ ವಿರುದ್ದ ಎನ್​ಕೌಂಟರ್ : ಕರ್ನಾಟಕದ ಯೋಧ ಪ್ರಾಂಜಲ್‌ ಸೇರಿ ನಾಲ್ವರು ಹುತಾತ್ಮ 

ಇವನು ಈಗಾಗಲೇ 3 ಬಾರಿ ನ್ಯಾಯ ಪಂಚಾಯ್ತಿ ಮಾಡಿದರೂ ಪ್ರಯೋಜನವಾಗಿಲ್ಲ. ತವರಿನಿಂದ ಹಣ ತರುವಂತೆ ಪತ್ನಿಗೆ ಸಯ್ಯದ್ ಪೀಡಿಸುತ್ತಿದ್ದನಂತೆ. ಪತಿ-ಪತ್ನಿಯ ನಡುವೆ ಇದೇ ವಿಚಾರವಾಗಿ ಜಗಳವಾಗಿದ್ದು, ಬಳಿಕ ಆಕೆಯ ಕತ್ತುಹಿಸುಕಿ ಹತ್ಯೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಪತಿಯೇ ನಾಟಕವಾಡುತ್ತಿದ್ದಾನೆ ಅಂತಾ ಸಂಬಂಧಿಕರು ಹೇಳಿಕೊಂಡಿದ್ದಾರೆ.

ಘಟನಾ  ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು,ಸಯ್ಯದ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಈ ಸಂಬಂಧ ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments