ಶಿವಮೊಗ್ಗ : ದೇಶದಲ್ಲಿ ವಿಶ್ವಕಪ್ ಜ್ವರ ಜೋರಾಗಿದೆ. ಕ್ರಿಕೆಟ್ ಪ್ರೇಮಿಗಳು, ಕಾಲೇಜು ವಿದ್ಯಾರ್ಥಿನಿಯರು, ಕಾಲೇಜಿನ ಕ್ಯಾಂಪಸ್ ನಲ್ಲಿ ಭಾರತಕ್ಕೆ ಚಿಯರ್ ಅಪ್ ಮಾಡಿ ವಿಷಸ್ ಮಾಡುತ್ತಿದ್ದರೆ. ಇತ್ತ, ದರ್ಗಾದಲ್ಲೂ ಕೂಡ ಅಲ್ಲಾಹನನ್ನು ನೆನೆದು, ಭಾರತ ವಿಶ್ವಕಪ್ ಗೆಲ್ಲಲಿ ಎಂದು ಮುಸ್ಲಿಂ ಬಾಂಧವರು ಪ್ರಾರ್ಥಿಸಿದ್ದಾರೆ.
ಶಿವಮೊಗ್ಗದ ಮಹಾವೀರ ವೃತ್ತದಲ್ಲಿರುವ ಷಾ ಆಲೀಂ ದಿವಾನ್ ದರ್ಗಾದಲ್ಲಿ, ಚಾದರ್ ಹೊದಿಸಿ, ಪುಷ್ಪಾರ್ಚನೆ ನೆರವೇರಿಸಿದ್ದಾರೆ. ಜೊತೆಗೆ, ಅತ್ತರ್ ಸಿಂಪಡಿಸಿ ಪ್ರಾರ್ಥಿಸಲಾಯಿತು. ಭಾರತ ತಂಡ ಈಗಾಗಲೇ, ಹತ್ತಕ್ಕೆ ಹತ್ತು ಪಂದ್ಯಗಳನ್ನು ಗೆದ್ದು ಬೀಗುತ್ತಿದ್ದು, ನಾಳೆ ನಡೆಯುವ ಕೊನೆಯ ಫೈನಲ್ ಪಂದ್ಯವನ್ನು ಗೆದ್ದು ಭಾರತ ಮೂರನೇ ವಿಶ್ವಕಪ್ ಮುಡಿಗೇರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದರು.
ಮುಸಲ್ಮಾನ್ ಬಾಂಧವರು ಟೀಂ ಇಂಡಿಯಾ ಪರವಾಗಿ ಘೋಷಣೆಗಳನ್ನು ಸಹ ಕೂಗಿ ‘ಈ ಬಾರಿ ವಿಶ್ವಕಪ್ ನಮ್ದೆ’ ಎಂದು ಘೋಷಣೆ ಕೂಗಿದರು. ನಾವೆಲ್ಲರೂ ಭಾನುವಾರ ಎಲ್ಲಿಯೂ ತೆರಳದ ಹಾಗೆ, ಟಿವಿ ಮುಂದೆ ಕೂತು ಎಲ್ಲಾ ಸಭೆಗಳನ್ನು ಮೊಟಕುಗೊಳಿಸಿ ಭಾರತ ಹಾಗೂ ಆಸ್ಟ್ರೇಲಿಯಾ ಪಂದ್ಯವನ್ನು ವೀಕ್ಷಣೆ ಮಾಡುತ್ತೆವೆ. ಭಾರತ ಕಪ್ ಗೆದ್ದು ನಾವೆಲ್ಲರೂ ಸಂಭ್ರಮಿಸೋಣ ಎಂದು ಮುಸಲ್ಮಾನ್ ಬಾಂಧವರು ಕರೆ ನೀಡಿದರು.
It all comes down to ??? ??? ?#CWC23 #INDvAUS pic.twitter.com/yCJAxRoDCK
— ICC (@ICC) November 18, 2023