ಇಸ್ರೇಲ್​ ಯುದ್ದದಿಂದ ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರ ಮಾಹಿತಿ ನೀಡಿ: ಮೈಸೂರು ಡಿಸಿ!

ಮೈಸೂರು: ಇಸ್ರೇಲ್​ ಮತ್ತು ಹಮಾಸ್​ ನಡುವೆ ನಡೆಯುತ್ತಿರುವ ಯುದ್ದದಿಂದ ಸಂಕಷ್ಟಕ್ಕೆ ಸಿಲುಕಿದ್ದರೆ ಕನ್ನಡಿಗರು ಯಾರಾದರು ಇದ್ದಲ್ಲಿ ಮಾಹಿತಿ ನೀಡಿ ಎಂದು ಮೈಸೂರು ಜಿಲ್ಲಾಧಿಕಾರಿ ಕೆ.ವಿ ರಾಜೇಂದ್ರ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿರಿವ ಅವರು ಈಗಾಗಲೇ ಇಸ್ರೇಲ್​ ವಿವಿಧ ಕಾರಣಗಳಿಂದ ನೆಲೆಸಿರುವ ಕನ್ನಡಿಗರು ಸದ್ಯ ಸಂಕಷ್ಟಕ್ಕೆ ಸಿಲುಕಿರುವ ಕುರಿತು ಯಾವುದೇ ಮಾಹಿತಿ ಬಂದಿಲ್ಲ, ಈ ಸಂಬಂಧ ರಾಯಭಾರ ಕಚೇರಿಗಳ ಜೊತೆ ಸಂಹವನ ನಡೆಸಲಾಗುತ್ತಿದೆ.

ಇದನ್ನೂ ಓದಿ: ನೀರಿನ ಹೊಂಡಕ್ಕೆ ಬಿದ್ದು ಬಾಲಕರು ಸಾವು!

ಜಿಲ್ಲೆಯ ಜನತೆ ಅಥವಾ ಕನ್ನಡಿಗರು ಯಾರೇ ಸಮಸ್ಯೆಗೀಡಾಗಿದ್ದರೇ ಅಥವ ಸಂಕಷ್ಟಕ್ಕೆ ಸಿಲುಕಿದ್ದರೇ ಕೂಡಲೇ 1128ಗೆ ಕರೆ ಮಾಡಿ ಮಾಹಿತಿ ನೀಡಬಹುದು. ಅದಕ್ಕೆ ತಕ್ಕ ಕ್ರಮವನ್ನು ನಾವು ಕೈಗೊಳ್ಳಲಿದ್ದೇವೆ ಎಂದು ಅವರು ಹೇಳಿದರು.

RELATED ARTICLES

Related Articles

TRENDING ARTICLES