Monday, August 25, 2025
Google search engine
HomeUncategorizedಬಸವ ತತ್ವ ಪಾಲನೆ ಮಾಡುವವರು ಸಿದ್ದರಾಮಯ್ಯ : ಬಸವರಾಜ ರಾಯರೆಡ್ಡಿ

ಬಸವ ತತ್ವ ಪಾಲನೆ ಮಾಡುವವರು ಸಿದ್ದರಾಮಯ್ಯ : ಬಸವರಾಜ ರಾಯರೆಡ್ಡಿ

ಬೆಂಗಳೂರು : ಸಿದ್ದರಾಮಯ್ಯ ಸರ್ಕಾರ ಲಿಂಗಾಯತರಿಗೆ ಅನ್ಯಾಯ ಮಾಡಿದೆ ಎಂಬುದನ್ನು ನಾನು ಒಪ್ಪಲ್ಲ. ಬಸವ ತತ್ವ ಪಾಲನೆ ಮಾಡುವವರು ಸಿದ್ದರಾಮಯ್ಯ ಎಂದು ಶಾಸಕ ಬಸವರಾಜ ರಾಯರೆಡ್ಡಿ ಹೇಳಿದರು.

ಲಿಂಗಾಯತ ಅಧಿಕಾರಿಗಳ ಕಡಗಣನೆ ವಿಚಾರವಾಗಿ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವೇಶ್ವರರ ಫೋಟೋ ಹಾಕುವಂತೆ ಕಡ್ಡಾಯ ಮಾಡಿದವರು ಸಿದ್ದರಾಮಯ್ಯ. ಹಿಂದೆ ಸಿಎಂ ಆದವರು ಯಾಕೆ ಈ ಆದೇಶ ಮಾಡಿರಲಿಲ್ಲ? ಎಂದು ಪ್ರಶ್ನಿಸಿದರು.

ಅಕ್ಕಮಹಾದೇವಿ ಯುನಿವರ್ಸಿಟಿ ಅಂತ ಹೆಸರಿಟ್ಟಿದ್ದು ನಮ್ಮ ಸರ್ಕಾರ. ಬಸವೇಶ್ವರ ಯುನಿವರ್ಸಿಟಿ ಅಂತ ಹಿಂದಿನ ಬಿಜೆಪಿ ಸರ್ಕಾರ ಯಾವುದಕ್ಕೂ ಹೆಸರಿಡಲಿಲ್ಲ. ಜಾತಿ ಹೆಸರಲ್ಲಿ ಬೆಂಕಿ ಹಚ್ಚುವ ಕೆಲಸ ಯಾರೂ ಮಾಡಬಾರದು. ಲಿಂಗಾಯತ ವಿರೋಧಿ ಆಗಿದ್ರೆ ಇದೆಲ್ಲ ಆಗ್ತಿರಲಿಲ್ಲ. ನಾನು ಕೂಡ ಲಿಂಗಾಯತ ಸಮುದಾಯದ ಶಾಸಕ ಎಂದು ಬಿಜೆಪಿ ನಾಯಕರ ಹೇಳಿಕೆಗೆ ತಿರುಗೇಟ ನೀಡಿದರು.

ಶಾಮನೂರುಗೆ ಮಾಹಿತಿ ಕೊರತೆ ಇದೆ

ಸಿದ್ದರಾಮಯ್ಯ ಎಲ್ಲಾ ಜಾತಿಗಳ ಪರವಾಗಿದ್ದಾರೆ. ಲಿಂಗಾಯತ ಸಮಯದಾಯ ಡಾಮಿನೇಟೇಡ್ ಕ್ಲಾಸ್. ಶೋಷಿತರ ಪರವಾಗಿ ಸಿದ್ದರಾಮಯ್ಯ ಇರಬಹುದು. ಆದರೆ, ಸಿದ್ದರಾಮಯ್ಯ ಲಿಂಗಾಯತ ವಿರೋಧಿ ಅಲ್ಲ. ಮೂವರು ಡಿಸಿಗಳು ಲಿಂಗಾಯತ ರಿದ್ದಾರೆ. ಬೆಳಗಾವಿ ಡಿಸಿ ನಿತೇಶ್ ಪಾಟೀಲ್ ವಿಜಯನಗರ ಡಿಸಿ ದಿವಾಕರ್ ಲಿಂಗಾಯತ. ಶಾಮನೂರು ಶಿವಶಂಕರಪ್ಪಗೆ ಮಾಹಿತಿ ಕೊರತೆ ಇದೆ. ದಾವಣಗೆರೆಯಲ್ಲಿ ಜಿಪಂ ಸಿಇಓ ಲಿಂಗಾಯತ ಸಮುದಾಯದವರು ಎಂದು ಶಾಮನೂರು ಶಿವಶಂಕರಪ್ಪಗೆ ಚಾಟಿ ಬೀಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments