Saturday, August 23, 2025
Google search engine
HomeUncategorized6ನೇ ಭಾಗ್ಯವಾಗಿ ರೈತರಿಗೆ ಜಲಭಾಗ್ಯ ತರಬೇಕು : ಸಿರಿಗೆರೆ ಶ್ರೀ

6ನೇ ಭಾಗ್ಯವಾಗಿ ರೈತರಿಗೆ ಜಲಭಾಗ್ಯ ತರಬೇಕು : ಸಿರಿಗೆರೆ ಶ್ರೀ

ಚಿತ್ರದುರ್ಗ : ರಾಜ್ಯ ಸರ್ಕಾರದಿಂದ ರೈತರಿಗೆ ಆರನೇ ಭಾಗ್ಯವಾಗಿ ಜಲಭಾಗ್ಯ ತರಬೇಕು. ನೀರನ್ನು ನಾವು ಕೊಟ್ಟೇ ಕೊಡ್ತೀವೆಂಬ ಭಾಗ್ಯ ಜಲಭಾಗ್ಯ ಎಂದು ಸಿರಗೆರೆ ತರಳುಬಾಳು ಮಠದ ಶಿವಮೂರ್ತಿ‌ ಶಿವಾಚಾರ್ಯ ಶ್ರೀಗಳು ಹೇಳಿದರು.

ಸಿರಿಗೆರೆ ತರಳುಬಾಳು ಮಠದ ಶಿವಕುಮಾರ ಶ್ರೀಗಳ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ನೀರಾವರಿ ಯೋಜನೆಗಾಗಿ ಕೇವಲ 1,200 ಕೋಟಿ ಮಂಜೂರಾಗಿದೆ. ಸಿದ್ದರಾಮಯ್ಯನವರಿಂದ ಯಡಿಯೂರಪ್ಪವರೆಗೆ ಯೋಜನೆ ಮುಂದುವರೆದಿವೆ ಎಂದರು.

ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳನ್ನು ನಾವು ವಿರೋಧಿಸಲ್ಲ. ಅದೊಂದಿದೆ ಹೆಣ್ಮಕ್ಕಳಿಗೆ ಇನ್ನು 2,000 ರೂ. ಕೊಟ್ಟರೆ ಒಳ್ಳೆಯದು ಅನ್ನಿಸಿದೆ. ಇಡೀ ಮನೆತನವನ್ನು ಮಹಿಳೆ‌ ನಡೆಸಲಿದ್ದಾರೆ. ಗೃಹಲಕ್ಷ್ಮಿ ಹಣ ಎಟಿಎಂ ಮೂಲಕ ಮದ್ಯದ ಅಂಗಡಿಯಲ್ಲಿ ಗಂಡ ಡ್ರಾ ಮಾಡದಂತೆ ಕಾನೂನು ತರಬೇಕು. ಯುವಶಕ್ತಿ ಯೋಜನೆಯಡಿ ಹಣ ಪಡೆಯುವ ಯುವಕರನ್ನು ರಾಜ್ಯದ ಅಭಿವೃದ್ಧಿಗೆ ಬಳಕೆ ಮಾಡಿಕೊಳ್ಳಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದರು.

ಕಾವೇರಿ ವಿವಾದ ಇಂದು ನಿನ್ನೆಯದಲ್ಲ

ಕಾವೇರಿ ವಿವಾದ ಇಂದು ನಿನ್ನೆಯದಲ್ಲ. ಇದು ಬಹಳ ವರ್ಷಗಳ ಸಮಸ್ಯೆಯಾಗಿದೆ. ಇದನ್ನ ಬಗೆಹರಿಸಲು ಕೇವಲ ಕರ್ನಾಟಕ, ತಮಿಳುನಾಡು ರಾಜ್ಯ ಸರ್ಕಾರಗಳಷ್ಟೇ ಅಲ್ಲ. ದೇಶದ ಎಲ್ಲಾ ರಾಜ್ಯ ಸರ್ಕಾರಗಳು ಸಮಸ್ಯೆ ಪರಿಹಾರಕ್ಕೆ ಹೊಸ ಚಿಂತನೆ ನಡೆಸಬೇಕು ಎಂದು ಶ್ರೀಗಳು ಅಭಿಪ್ರಾಯಪಟ್ಟರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments