Tuesday, August 26, 2025
Google search engine
HomeUncategorizedವಿದ್ಯಾರ್ಥಿಗಳ ಗಮನಕ್ಕೆ: SSLC ಮತ್ತು PUC ಪರೀಕ್ಷೆಯಲ್ಲಿ ಮಹತ್ವದ ಬದಲಾವಣೆ!

ವಿದ್ಯಾರ್ಥಿಗಳ ಗಮನಕ್ಕೆ: SSLC ಮತ್ತು PUC ಪರೀಕ್ಷೆಯಲ್ಲಿ ಮಹತ್ವದ ಬದಲಾವಣೆ!

ಬೆಂಗಳೂರು: 2023-24ನೇ ಶೈಕ್ಷಣಿಕ ವರ್ಷದಿಂದ ರಾಜ್ಯದಲ್ಲಿ SSLC ಮತ್ತು ಪಿಯುಸಿ ಪರೀಕ್ಷಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳನ್ನು ತರಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಮೂರು ಪ್ರಯತ್ನಗಳ ಅಡಿಯಲ್ಲಿ ಒಬ್ಬ ವಿದ್ಯಾರ್ಥಿಯು ಅತ್ಯುತ್ತಮ ಅಂಕಗಳನ್ನು ಉಳಿಸಿಕೊಳ್ಳಬಹುದಾಗಿದೆ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ಇಂದು ಪರಿಷ್ಕೃತ ಪರೀಕ್ಷಾ ವ್ಯವಸ್ಥೆಯ ‘ಪೂರಕ ಪರೀಕ್ಷೆ’ ಯನ್ನು ವಾರ್ಷಿಕ ಪರೀಕ್ಷೆ 1, 2 ಮತ್ತು 3 ಎಂದು ಮರುನಾಮಕರಣ ಮಾಡುತ್ತಿದೆ. ಈ ಮೂಲಕ ವಿದ್ಯಾರ್ಥಿಗಳಿಗೆ ಮೂರು ಅವಕಾಶಗಳನ್ನು ಒದಗಿಸುತ್ತದೆ. ಇದು ಬದಲಾಗುತ್ತಿರುವ ವೇಗವನ್ನು ಗಣನೆಗೆ ತೆಗೆದುಕೊಳ್ಳುತ್ತದೆ ಎಂದು ಹೇಳಿದೆ.

ನಾವು ಪರಿಷ್ಕೃತ ಪರೀಕ್ಷಾ ವ್ಯವಸ್ಥೆಯನ್ನು ಅಳವಡಿಸಿಕೊಂಡರೆ, 1, 2 ಮತ್ತು 3ನೇ ಪರೀಕ್ಷೆಗಳಲ್ಲಿ ಗಳಿಸಿದ ಅತ್ಯುತ್ತಮ ಅಂಕಗಳನ್ನು ವಿದ್ಯಾರ್ಥಿಗಳು ಉಳಿಸಿಕೊಳ್ಳುವ ಮೂಲಕ ಅಂಕಗಳನ್ನು ಸುಧಾರಿಸಲು ಅವಕಾಶವನ್ನು ಒದಗಿಸುತ್ತದೆ. ಅಲ್ಲದೆ ಹೆಚ್ಚಿನ ಅಧ್ಯಯನ ಅಥವಾ ಉದ್ಯೋಗದ ಆಯ್ಕೆ ಪ್ರಕ್ರಿಯೆಯಲ್ಲಿ ಪ್ರಯೋಜನವಾಗಲಿದೆ ಎಂದು KSEAB ಹೇಳಿದೆ.

SSLC ಸಂಭವನೀಯ ಪರೀಕ್ಷಾ ವೇಳಾಪಟ್ಟಿ
ಪರೀಕ್ಷೆ 1 –ಮಾರ್ಚ್ 1ರಿಂದ 25ರವರೆಗೆ ನಡೆಯಲಿದ್ದು, ಏಪ್ರಿಲ್ 22ಕ್ಕೆ ಫಲಿತಾಂಶ ಹೊರಬೀಳುವ ಸಾಧ್ಯತೆ ಇದೆ.
ಪರೀಕ್ಷೆ 2 ಮೇ 15ರಿಂದ ಜೂನ್ 5ರವರೆಗೆ ನಡೆಯಲಿದ್ದು, ಫಲಿತಾಂಶ ಜೂನ್ 21ರಂದು ಹೊರಬೀಳಲಿದೆ.
ಪರೀಕ್ಷೆ 3 ಜುಲೈ 12ರಿಂದ ಜುಲೈ 30ರವೆರೆಗೆ ನಡೆಯಲಿದ್ದು, ಆಗಸ್ಟ್16ರಂದು ಫಲಿತಾಂಶ ಹೊರಬರಲಿದೆ.

ಪಿಯುಸಿ ಸಂಭವನೀಯ ಪರೀಕ್ಷಾ ವೇಳಾಪಟ್ಟಿ
ಪರೀಕ್ಷೆ 1 ಮಾರ್ಚ್ 30ರಿಂದ ಏಪ್ರಿಲ್ 15ರವರೆಗೆ ನಡೆಯಲಿದ್ದು, ಮೇ 8ರಂದು ಫಲಿತಾಂಶ ಬರಲಿದೆ.
ಪರೀಕ್ಷೆ 2 ಜೂನ್ 12ರಿಂದ ಜೂನ್ 19ರವರೆಗೆ ನಡೆಯಲಿದ್ದು, ಜೂನ್ 29ರಂದು ಫಲಿತಾಂಶ ಬಿಡಲಾಗುತ್ತದೆ.
ಪರೀಕ್ಷೆ 3 ಜುಲೈ 29ರಿಂದ ಆಗಸ್ಟ್ 5ರವೆರೆಗ ನಡೆಯಲಿದ್ದು, ಆಗಸ್ಟ್ 19ರಂದು ಫಲಿತಾಂಶ ಹೊರಬೀಳೋ ಸಾಧ್ಯತೆ ಇದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments