Tuesday, August 26, 2025
Google search engine
HomeUncategorizedಅರಮನೆಗೆ 'ಗಜಪಡೆ' : ಅಭಿಮನ್ಯು ಅಂಡ್ ಟೀಂಗೆ ಅದ್ದೂರಿ ಸ್ವಾಗತ

ಅರಮನೆಗೆ ‘ಗಜಪಡೆ’ : ಅಭಿಮನ್ಯು ಅಂಡ್ ಟೀಂಗೆ ಅದ್ದೂರಿ ಸ್ವಾಗತ

ಮೈಸೂರು : ಮೈಸೂರು ದಸರಾ ಮಹೋತ್ಸವಕ್ಕೆ ಅರಮನೆ ನಗರಿ ಸಜ್ಜಾಗುತ್ತಿದೆ. ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಗಜಪಡೆ ಈಗಾಗಲೇ ಮೈಸೂರು ತಲುಪಿವೆ.

ಇಂದು ಅಧಿಕೃತವಾಗಿ ಅಂಬಾರಿ ಹೊರುವ ಅಭಿಮನ್ಯು ನೇತೃತ್ವದಲ್ಲಿ 9 ಆನೆಗಳು ಅರಮನೆ ಅವರಣ ತಲುಪಿವೆ. ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 9 ಆನೆಗಳು ಅರಮನೆ ಅಂಗಳಕ್ಕೆ ಕಾಲಿಟ್ಟಿವೆ. ಗಜಪಡೆಯನ್ನು ಸಾಂಪ್ರದಾಯಿಕ ಪೂಜೆಯೊಂದಿಗೆ ಅರಮನೆ ಆವರಣಕ್ಕೆ ಬರಮಾಡಿಕೊಳ್ಳಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಆನೆಗಳಿಗೆ ಕಬ್ಬು, ಬೆಲ್ಲ ವಿತರಿಸಿ ಆನೆಗಳಿಗೆ ಸ್ವಾಗತ ಕೋರಿದರು. ಹೀಗೆ ಅಭಿಮನ್ಯು, ಅರ್ಜುನ, ಧನಂಜಯ, ಮಹೇಂದ್ರ, ಭೀಮ, ವಿಜಯ, ಗೋಪಾಲಸ್ವಾಮಿ, ಕಂಜನ್, ಗೋಪಿ, ವರಲಕ್ಷ್ಮೀ ಆನೆಗಳಿಗೆ ಪುಷ್ಪಾರ್ಚನೆ ಮಾಡಿ, ಫಲತಾಂಬೂಲ ನೀಡಲಾಯಿತು.

ಅರಣ್ಯ ಭವನದಲ್ಲಿ ಗಜಪಡೆಗೆ ಪೂಜೆ

ಅರಮನೆಯ ಜಯಮಾರ್ತಾಂಡ ಗೇಟ್ ಬಳಿ ಆನೆಗಳಿಗೆ ಜಿಲ್ಲಾಡಳಿತ ಸಾಂಪ್ರದಾಯಿಕ ಸ್ವಾಗತ ಕೋರಿತು. ಪೊಲೀಸರು ಗೌರವ ವಂದನೆ ಸಲ್ಲಿಸಿದರು. ಇದಕ್ಕೂ ಮೊದಲು ಅಶೋಕಪುರಂನಲ್ಲಿರುವ ಅರಣ್ಯ ಭವನದಲ್ಲಿ ಆನೆಗಳಿಗೆ ಪೂಜೆ ಸಲ್ಲಿಸಲಾಯ್ತು. CF ಮಾಲತಿ ಪ್ರಿಯಾ, DCF ಸೌರಭ್ ಕುಮಾರ್ ಆನೆಗಳಿಗೆ ಪೂಜೆ ಸಲ್ಲಿಸಿದ್ರು.

.24ರಂದು ಜಂಬೂ ಸವಾರಿ

ಬಳಿಕ ಅಶೋಕಪುರಂ ಮುಖ್ಯರಸ್ತೆ, ಬಲ್ಲಾಳ ವೃತ್ತ, ರಾಮಸ್ವಾಮಿ ವೃತ್ತ, ಚಾಮರಾಜ ಜೋಡಿ ರಸ್ತೆ, ಬಸವೇಶ್ವರ ವೃತ್ತದಲ್ಲಿ ಆನೆಗಳು ಸಾಲಾಗಿ ಸಾಗಿದವು. ಸಾವಿರಾರು ಜನ ಮಕ್ಕಳೊಂದಿಗೆ ಆನೆಗಳನ್ನು ನೋಡಿ ಖುಷಿಪಟ್ಟರು. ಆನೆಗಳ ಸ್ವಾಗತಕ್ಕೆ ಕಲಾ ತಂಡಗಳು ಸಾಥ್ ನೀಡಿದವು.

ಅರಮನೆ ಕಟ್ಟಡದ ಬಳಿ ಆನೆಗಳಿಗೆ ಪುಷ್ಪಾರ್ಚನೆ ಮಾಡಲಾಯ್ತು. ಅಕ್ಟೋಬರ್ 24ರಂದು ವಿಶ್ವವಿಖ್ಯಾತ ಜಂಬೂ ಸವಾರಿ ನಡೆಯಲಿದೆ. ಐತಿಹಾಸಿಕ ಉತ್ಸವಕ್ಕಾಗಿ ಆನೆಗಳು ಶೀರ್ಘದಲ್ಲೇ ತಾಲೀಮು ನಡೆಸಲಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments