ಬೆಂಗಳೂರು : ನಟ ಡಾಲಿ ಧನಂಜಯ ಅವರು ಅಭಿಮಾನಿಗಳ ನಂತರ ಸ್ಯಾಂಡಲ್ವುಡ್ ನಟ-ನಟಿಯರ ಜೊತೆಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.
ಡಾಲಿ ಆತ್ಮೀಯ ಆಹ್ವಾನಕ್ಕೆ ಚಂದನವನದ ಸಾಕಷ್ಟು ತಾರೆಯರು ಬರ್ತ್ ಡೇ ಪಾರ್ಟಿಯಲ್ಲಿ ಭಾಗಿಯಾಗಿ ಧನಂಜಯಗೆ ಮನದುಂಬಿ ಹಾರೈಸಿದ್ದಾರೆ.

ರಾಕಿ ಭಾಯ್ ನಟ ಯಶ್, ರಕ್ಷಿತ್ ಶೆಟ್ಟಿ, ಪ್ರಜ್ವಲ್ ದೇವರಾಜ್, ನಿಖಿಲ್ ಕುಮಾರಸ್ವಾಮಿ, ಲೂಸ್ ಮಾದ ಯೋಗಿ, ರಮೇಶ್ ಅರವಿಂದ್, ಸತೀಶ್ ನಿನಾಸಂ, ಯೋಗರಾಜ್ ಭಟ್ ಸೇರಿದಂತೆ ಸಾಕಷ್ಟು ಕಲಾವಿದರು, ಕಿರುತೆರೆಯ ಕಲಾವಿದರು ಪಾರ್ಟಿಯಲ್ಲಿ ಭಾಗವಹಿಸಿದ್ದರು.

ನಿರ್ದೇಶಕ ಯೋಗರಾಜ್ ಭಟ್ ಹಾಗೂ ಸತೀಶ್ ನೀನಾಸಂ ಅವರೊಂದಿಗೆ ಡಾಲಿ ಧನಂಜಯ.

ನಟ ದುನಿಯಾ ವಿಜಯ್ ಅವರು ಡಾಲಿ ಬರ್ತ್ ಡೇ ಪಾರ್ಟಿಯಲ್ಲಿ ಭಾಗವಹಿಸಿ ಶುಭ ಕೋರಿದರು.

ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮ ಅವರು ಡಾಲಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು.

ನಟ ಪ್ರಜ್ವಲ್ ದೇವರಾಜ್ ದಂಪತಿ ಹಾಗೂ ಸಹೋದರ ಧನಂಜಯಗೆ ವಿಶ್ ಮಾಡಿದರು.

ನಟ ರಕ್ಷಿತ್ ಶೆಟ್ಟಿ ಅವರು ನಟ ಡಾಲಿಗೆ ಕೇಕ್ ತಿನ್ನಿಸುವ ಮೂಲಕ ಹುಟ್ಟುಹಬ್ಬದ ಶುಭಾಶಯ ಕೋರಿದರು.


ನಟ ರಮೇಶ್ ಅರವಿಂದ್ ಅವರು ಡಾಲಿ ಬರ್ತ್ ಡೇ ಪಾರ್ಟಿಯಲ್ಲಿ ಭಾಗವಹಿಸಿದ್ದರು.


