Tuesday, August 26, 2025
Google search engine
HomeUncategorizedಶ್ರೀದೇವಿ 60ನೇ ಜನ್ಮದಿನಕ್ಕೆ ಗೂಗಲ್​ ಡೂಡಲ್​ ಗೌರವ

ಶ್ರೀದೇವಿ 60ನೇ ಜನ್ಮದಿನಕ್ಕೆ ಗೂಗಲ್​ ಡೂಡಲ್​ ಗೌರವ

ಬೆಂಗಳೂರು : ಬಾಲಿವುಡ್ ಲೇಡಿ ಸೂಪರ್ ಸ್ಟಾರ್ ಶ್ರೀದೇವಿ ಅಗಲಿ ವರ್ಷಗಳೇ ಉರುಳಿವೆ. ಆದರೂ, ಅವರ ಚಿತ್ರಗಳ ಮೂಲಕ ಅವರು ಜೀವಂತವಾಗಿದ್ದಾರೆ.

ಹೌದು, ಬಾಲಿವುಡ್ ನಟಿ ಶ್ರೀದೇವಿ ಅವರು ಬದುಕಿದ್ದರೆ ಇಂದಿಗೆ 60 ವರ್ಷ ಪೂರೈಸುತ್ತಿದ್ದರು. ಇಂದು ಅವರ ಹುಟ್ಟುಹಬ್ಬವಾಗಿದ್ದು, ಗೂಗಲ್ ಡೂಡಲ್​ ವಿಶೇಷ ಗೌರವ ಸಲ್ಲಿಸಿದೆ. ವರ್ಣರಂಜಿತ ಮತ್ತು ವಿಶಿಷ್ಟವಾದ ಚಿತ್ರ ಪ್ರದರ್ಶಿಸಿ ನಟಿಯನ್ನು ಸ್ಮರಿಸಿದೆ.

ಭಾರತೀಯ ಚಿತ್ರರಂಗದ ಮೊದಲ ಲೇಡಿ ಸೂಪರ್ ಸ್ಟಾರ್ ಎಂಬ ಬಿರುದನ್ನು ಪಡೆದಿರುವ ನಟಿ ಶ್ರೀದೇವಿ, ದಕ್ಷಿಣ ಭಾರತದಿಂದ ಸಿನಿ ಜರ್ನಿ ಆರಂಭಿಸಿ ಬಾಲಿವುಡ್‌ನಲ್ಲಿ ನೆಲೆ ಕಂಡುಕೊಂಡರು. 1963ರಲ್ಲಿ ತಮಿಳುನಾಡಿನಲ್ಲಿ ಜನಿಸಿದ ಶ್ರೀದೇವಿ ತಮ್ಮ ವೃತ್ತಿಜೀವನದ ನಾಲ್ಕು ದಶಕಗಳ ಅವಧಿಯಲ್ಲಿ ಸುಮಾರು 300 ಚಲನಚಿತ್ರಗಳಲ್ಲಿ ನಟಿಸಿದ್ದಾರೆ.

ಚಲನಚಿತ್ರ ನಿರ್ಮಾಪಕ ಬೋನಿ ಕಪೂರ್ ಅವರನ್ನು ಮದುವೆಯಾಗಿದ್ದು, ಇವರಿಗೆ ಜಾನ್ವಿ ಮತ್ತು ಖುಷಿ ಕಪೂರ್ ಎಂಬ ಮುದ್ದು ಹೆಣ್ಣುಮಕ್ಕಳಿದ್ದಾರೆ. 2018 ರಲ್ಲಿ ಶ್ರೀದೇವಿ ದುಬೈನಲ್ಲಿ ಬಾತ್​ರೂಮ್​ನಲ್ಲಿ ಬಿದ್ದು ಅಕಾಲಿಕ ಮರಣವನ್ನಪ್ಪಿದರು.

ಶ್ರೀದೇವಿ ನಟಿಸಿರುವ ಕನ್ನಡ ಚಿತ್ರಗಳು

  • ಭಕ್ತ ಕುಂಬಾರ : 1974
  • ಹೆಣ್ಣು ಸಂಸಾರದ ಕಣ್ಣು : 1975
  • ಬಾಲ ಭಾರತ : 1975
  • ಯಶೋಧ ಕೃಷ್ಣ : 1975
  • ಪ್ರಿಯಾ : 1979
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments