Sunday, August 24, 2025
Google search engine
HomeUncategorizedಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ತನ್ವೀರ್ ಸೇಠ್ ಪ್ಲಾನ್ ಮಾಡಿದ್ರಾ? : ಛಲವಾದಿ ನಾರಾಯಣಸ್ವಾಮಿ

ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ತನ್ವೀರ್ ಸೇಠ್ ಪ್ಲಾನ್ ಮಾಡಿದ್ರಾ? : ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು : ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ತನ್ವೀರ್ ಸೇಠ್ ಪ್ಲಾನ್ ಮಾಡಿದ್ರಾ? ತನ್ವಿರ್ ಸೇಠ್ ಅಮಾಯಕರಾ? ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಗುಡುಗಿದ್ದಾರೆ. 

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಕಿ ಹಾಕಿದವರು ಅಮಾಯಕರು ಆದ್ರೆ, ಪತ್ರ ಬರೆದವರು ಅಮಾಯಕರಾ? ಡಿಜೆ ಹಳ್ಳಿ-ಕೆಜಿ ಹಳ್ಳಿ ಘಟನೆ ಇಡೀ ರಾಷ್ಟ್ರವೇ ಗಮನಿಸಿದೆ. ಕಾಂಗ್ರೆಸ್ ಶಾಸಕರ ಮನೆಗೆ ಬೆಂಕಿ ಹಾಕಿದ್ರು. ಅದು ಅಂದಿನ ದೊಡ್ಡ ಘಟನೆ ಎಂದು ಕುಟುಕಿದ್ದಾರೆ.

ಡಿಜೆ ಹಳ್ಳಿ-ಕೆಜಿ ಹಳ್ಳಿ ಕೇಸ್ ನ ಆರೋಪಿಗಳ ಮೇಲಿನ ಪ್ರಕರಣ ಕೈ ಬಿಡುವಂತೆ ತನ್ವೀರ್ ಸೇಠ್ ಪತ್ರ ಬರೆದಿದ್ದಾರೆ. ಈ ಘಟನೆಯಲ್ಲಿ ಕಾಂಗ್ರೆಸ್ ನಾಯಕರೇ ಇದ್ರು. ಅಂದಿನ ನಮ್ಮ ಸರ್ಕಾರ ಗುರುತಿಸಿ ಅವರು ವಿರುದ್ಧ ಕೇಸ್ ದಾಖಲಿಸಿ ಅರೆಸ್ಟ್ ಮಾಡಲಾಗಿತ್ತು. ಈಗ ಕೆಲವರು ಜಾಮೀನು ಪಡೆದು ಹೊರಗಡೆ ಬಂದಿದ್ದಾರೆ. ಬೊಮ್ಮಾಯಿ‌ ಅವರು ಹೇಳ್ತಾರೆ, ನನಗೂ ಆಗ ಕೆಲವರನ್ನು ಬಿಟ್ಟು ಬಿಡಿ ಅಂತ ಒತ್ತಡ ಇತ್ತು ಅಂತ ಎಂದು ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ : ಹಿಜಾಬ್ ವಿವಾದಕ್ಕೆ ಸುಪ್ರೀಂಕೋರ್ಟ್ ಹೋಗಿದ್ರು : ಸುನೀಲ್ ಕುಮಾರ್ ಕಿಡಿ

ಗೃಹ ಸಚಿವರು ಪಾಪ ಮಾಡಿದಂತೆ

ದಲಿತ ನಾಯಕನ ಮನೆ ಮೇಲೆ ಬೆಂಕಿ ಹಾಕಿದ್ರಿ. ಅವರು ಹೇಳಿದಂತೆ ಏನಾದರೂ ಗೃಹ ಸಚಿವರು ಕೇಳಿದ್ರೆ ಪಾಪ ಮಾಡಿದಂತೆ ಆಗುತ್ತೆ. ಶಾಸಕರು ಬರೆದ ಪತ್ರಕ್ಕೆ ಒಪ್ಪಿ ಕೇಸ್ ವಾಪಸ್ ಪಡೆದರೇ ಇದು ದ್ರೋಹ ಮಾಡಿದಂತೆ ಆಗುತ್ತದೆ. ಹಾಗೇನಾದರೂ ಮಾಡಿದ್ರೆ, ನಾವು ಇದನ್ನು ಸಿಬಿಐ ತನಿಖೆಗೆ ಕೊಡಬೇಕು ಅಂತ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.

ಎಲ್ಲರನ್ನೂ ಕೋರ್ಟ್ ಗೆ ಎಳೆಯುತ್ತೇನೆ

ಸುಮಟೋ ಮೂಲಕ ಸಿಬಿಐ ತನಿಖೆ ಆಗಬೇಕು ಅಂತ ಮನವಿ ಮಾಡುತ್ತೇನೆ. ನಮ್ಮ ಪಕ್ಷದ ಲೀಗಲ್ ಸೆಲ್ ಜೊತೆಗೆ ಮಾತನಾಡಿದ್ದೇನೆ. ಗೃಹ ಸಚಿವರು ಒಳಗೊಂಡಂತೆ ಎಲ್ಲರನ್ನೂ ಕೋರ್ಟ್ ಗೆ ಎಳೆಯುವ ಕೆಲಸ ಮಾಡುತ್ತೇನೆ. ಅಕಸ್ಮಾತ್ ಸರ್ಕಾರ ಇದನ್ನು ಮುಂದುವರಿಸಿದರೆ, ಅವರ ಗೃಹ ಖಾತೆ ಕಳಿಚಿ ಬೀಳುತ್ತೆ ಎಂದು ಎಚ್ಚರಿಕೆಯ ಸಂದೇಶ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments