Monday, August 25, 2025
Google search engine
HomeUncategorizedನಿರಂತರ ಮಳೆಯಿಂದ ಮಿಂದೆದ್ದು ಧುಮ್ಮಿಕ್ಕುತ್ತಿರುವ ಹುಲಿಕಲ್ ನ ಬಾಳಬರೆ ಜಲಪಾತ

ನಿರಂತರ ಮಳೆಯಿಂದ ಮಿಂದೆದ್ದು ಧುಮ್ಮಿಕ್ಕುತ್ತಿರುವ ಹುಲಿಕಲ್ ನ ಬಾಳಬರೆ ಜಲಪಾತ

ಶಿವಮೊಗ್ಗ : ಕಳೆದೊಂದು ವಾರದಿಂದ ನಿರಂತರ ವರ್ಷಧಾರೆ ಹಿನ್ನೇಲೆ, ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಭಾಗದ ಹುಲಿಕಲ್ ನ ಬಾಳಬರೆ ಜಲಪಾತ ಮಳೆಯ ಅಬ್ಬರಕ್ಕೆ ಮಿಂದೆದ್ದು ಹಾಲಿನ ನೊರೆಯಂತೆ ಧುಮ್ಮಿಕ್ಕುತಿರುವ ಪರಿ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಜಲಪಾತ.

ಮಳೆಗಾಲ ಶುರುವಾದರೆ ಅದೊಂದು ಸ್ವರ್ಗಾನುಬವವೇ ಸರಿ, ಅಷ್ಡೇ ಅಲ್ಲ ಜಲಪಾತಗಳ ವೈಭವವನ್ನು ನೋಡಲು ಎರಡು ಕಣ್ಣು ಸಾಲದಗಿರುತ್ತದೆ. ಬೇಸಿಗೆಯಲ್ಲಿ ಮಳೆಯಿಲ್ಲದೆ ಬರಡಾಗಿದ್ದ ಜಲಪಾತಗಳು, ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜಲಪಾತಗಳು ಉಕ್ಕಿ ಹರಿಯುತ್ತಿವೆ.

ಜೂನ್ ತಿಂಗಳಿನಲ್ಲಿ ಆತಂಕ ಮೂಡಿಸಿದ್ದ ಮಳೆರಾಯ, ಜುಲೈ ಆರಂಭದಿಂದಲೇ ಭರ್ಜರಿ‌ ಎಂಟ್ರಿ‌ ಕೊಟ್ಟಿದ್ದಾನೆ. ಅತಿಯಾದ ಮಳೆಯಾಗುತ್ತಿರುವ ಹಿನ್ನೇಲೆ ಹುಲಿಕಲ್ ನ ಬಾಳಬರೆ ಜಲಪಾತವು ಮೈದುಂಬಿ ಹರಿಯುತ್ತಿದೆ.

ಇದನ್ನು ಓದಿ : ವರುಣಾನ ಅರ್ಭಟಕ್ಕೆ ಚಾರ್ಮಾಡಿ ಘಾಟ್ ನಲ್ಲಿ ಮಣ್ಣು ಕುಸಿತ

300 ಅಡಿಗೂ ಎತ್ತರದಿಂದ ಪುಟಿಯುತ್ತಿರುವ ಜಲಧಾರೆ.

ಹೌದು ಈ ಜಲಪಾತದ ವೈಭವವನ್ನು ನೋಡಲು ಪ್ರವಾಸಿಗರ ದಂಡೆ ಬರುತ್ತಿದೆ. 300 ಅಡಿಗೂ ಹೆಚ್ಚು ಎತ್ತರದ ಬಂಡೆಗಳ ಮೇಲಿಂದ ಪುಟಿಯುತ್ತ ಇಳಿಯುತ್ತಿರುವ ಜಲಧಾರೆ, ಹೊಸನಗರದಿಂದ ಉಡುಪಿಗೆ ತೆರಳುವ ಮಾರ್ಗದಲ್ಲಿ ಈ ಜಲಪಾತವಿದ್ದು ಮಳೆಗಾಲದಲ್ಲಿ ಈ ಜಲಪಾತ ತನ್ನ ವಯ್ಯಾರದಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಅದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವ ಜನರು ಹುಲಿಕಲ್ ನ ಬಾಳಬರೆ ಜಲಪಾತದ ವೈಭವವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments