Tuesday, August 26, 2025
Google search engine
HomeUncategorizedಹುಡುಗಿಯರನ್ನು ಚುಡಾಯಿಸುತ್ತಿದ್ದ ಪೋಲಿ ಅರೆಸ್ಟ್

ಹುಡುಗಿಯರನ್ನು ಚುಡಾಯಿಸುತ್ತಿದ್ದ ಪೋಲಿ ಅರೆಸ್ಟ್

ದಾವಣಗೆರೆ : ಬೈಕ್​ನಲ್ಲಿ ಫಾಲೋ ಮಾಡುತ್ತಾ ಹುಡುಗಿಯರನ್ನು ಚುಡಾಯಿಸುತ್ತಿದ್ದ ಪೋಲಿ ಯುವಕನನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ.

ಖಾದೀರ್ ಖಾನ್ ಬಂಧನ ಬಂಧಿತ ಯುವಕ. ಈತನು, ಬೈಕ್​ನಲ್ಲಿ ಹಿಂಬಾಲಿಸುತ್ತ ಯುವತಿಯರಿಗೆ ಚುಡಾಯಿಸುತ್ತಿದ್ದನು. ಈ ಬಗ್ಗೆ ಯುವತಿಯರು ಪೊಲೀಸರಿಗೆ ದೂರು ನೀಡಿದ್ದರು.

ಎಂಸಿಸಿ ಬಿ ಬ್ಲಾಕ್​ನಲ್ಲಿ ಯುವತಿಯರಿಗೆ ಚುಡಾಯಿಸುತ್ತಿದ್ದನು. ಅಲ್ಲದೆ, ಬೈಕ್​ನಲ್ಲಿ ಹಿಂಬಾಲಿಸಿ ಅವಾಚ್ಯ ಶಬ್ದಗಳನ್ನಾಡುತ್ತ ಕಿರುಕುಳ ನೀಡುತ್ತಿದ್ದನು. ಯುವಕನ ಕಾಟ ತಾಳಲಾರದೆ ಯುವತಿಯರು ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಕಿರುಕುಳ ನೀಡುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments