Sunday, August 24, 2025
Google search engine
HomeUncategorizedಚಾಮುಂಡೇಶ್ವರಿ ವರ್ಧಂತಿ : ಶ್ರೀರಂಗಪಟ್ಟಣದಲ್ಲಿ ದೇವಿಗೆ ಶಾಕಾಂಬರಿ ಅಲಂಕಾರ         

ಚಾಮುಂಡೇಶ್ವರಿ ವರ್ಧಂತಿ : ಶ್ರೀರಂಗಪಟ್ಟಣದಲ್ಲಿ ದೇವಿಗೆ ಶಾಕಾಂಬರಿ ಅಲಂಕಾರ         

ಮಂಡ್ಯ : ಚಾಮುಂಡೇಶ್ವರಿ ವರ್ಧಂತಿ ಹಿನ್ನಲೆಯಲ್ಲಿ ಶ್ರೀರಂಗಪಟ್ಟಣದ ಚಾಮುಂಡೇಶ್ವರಿ ದೇಗುಲದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.

ವರ್ಧಂತಿ ಪ್ರಯುಕ್ತ ಚಾಮುಂಡೇಶ್ವರಿ ದೇವಿಗೆ ಶಾಕಾಂಬರಿ ಅಲಂಕಾರ ಮಾಡಲಾಗಿತ್ತು. ಹಲವು ರೀತಿಯ ತರಕಾರಿ ಹಾಗೂ ಹೂವುಗಳನ್ನು ಬಳಸಿ ಚಾಮುಂಡೇಶ್ವರಿ ದೇವಿಯನ್ನು ಅಲಂಕರಿಸಿದ್ದರು. ಅಲಂಕೃತಕಂಡ ತಾಯಿಯನ್ನು ನೋಡಲು ಎರಡು ಕಣ್ಣು ಸಾಲದು ಎಂಬಂತೆ ಭಾಸವಾಗಿತ್ತು.

ಇದನ್ನು ಓದಿ: ಅನ್ನಭಾಗ್ಯ ಯೋಜನೆಗೆ ಇಂದು ದಶಕದ ಸಂಭ್ರಮ

ದೇವಾಲಯದ ಗರ್ಭಗುಡಿಯನ್ನು ಕ್ಯಾರೆಟ್, ಮೂಲಂಗಿ, ಹಾಗಲಕಾಯಿ ಸೇರಿದಂತೆ ವಿವಿಧ ತರಕಾರಿಗಳಿಂದ ವಿಶೇವಾಗಿ ಅಲಂಕರಿಸಲಾಗಿತ್ತು. ದೇಗುಲದ ಗರ್ಭಗುಡಿ ಮತ್ತು ಹೊರಂಗಾಣದಲ್ಲೂ ವಿವಿಧ ಹೂವುಗಳಿಂದ ಅಲಂಕರಿಸಲಾಗಿತ್ತು.

ತಾಯಿಯ ದರ್ಶನವನ್ನು ಮಾಡಲು ನೂರಾರು ಸಂಖ್ಯೆಯ ಭಕ್ತರು ದೇವಾಲಯಕ್ಕೆ ಆಗಮಿಸಿದ್ದರು. ಅಲಂಕೃತ ದೇವಿಯನ್ನು ಕಣ್ತುಂಬಿಕೊಂಡು ಪುನೀತರಾದರು. ದೇವಿಯ ದರ್ಶನದ ಬಳಿಕ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಚಾಮುಂಡೇಶ್ವರಿ ದರ್ಶನ ಬಳಿಕ ಪ್ರಸಾದವನ್ನು ಸ್ವೀಕರಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments