Monday, August 25, 2025
Google search engine
HomeUncategorizedಕನ್ನಡ ಭಾಷೆ ಬಳಸದ ಶಾಪಿಂಗ್ ಸ್ಟಾಲ್ ವಿರುದ್ಧ ಕರುನಾಡ ವಿಜಯ ಸೇನೆ ಪ್ರತಿಭಟನೆ

ಕನ್ನಡ ಭಾಷೆ ಬಳಸದ ಶಾಪಿಂಗ್ ಸ್ಟಾಲ್ ವಿರುದ್ಧ ಕರುನಾಡ ವಿಜಯ ಸೇನೆ ಪ್ರತಿಭಟನೆ

ಚಿತ್ರದುರ್ಗ : ಕನ್ನಡ ಭಾಷೆ ಬದಲು ಅನ್ಯ ಭಾಷೆ ಬಳಸಿದ ಹಿನ್ನಲೆಯಲ್ಲಿ ಕನ್ನಡ ಪರ ಕಾರ್ಯಕರ್ತರು ಶಾಪಿಂಗ್ ಸ್ಟಾಲ್ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

ಚಿತ್ರದುರ್ಗ ನಗರದ ಚೆನ್ನೈ ನ್ಯೂ ಶಾಪಿಂಗ್ ಸ್ಟಾಲ್​ನಲ್ಲಿ ಕನ್ನಡ ಮಾಯವಾಗಿತ್ತು. ಹಿಂದಿ, ಇಂಗ್ಲಿಷ್ ಹಾಗೂ ತಮಿಳು ಭಾಷೆಯ ಕರಪತ್ರ ಮತ್ತು ಬ್ಯಾನರ್ ಸದ್ದು ಮಾಡಿತ್ತು. ಇದರಿಂದ ಕೆರಳಿದ ಕಾರ್ಯಕರ್ತರು ಅಂಗಡಿ ಮಾಲೀಕರಿಗೆ ಹಿಗ್ಗಾಮುಗ್ಗ ಕ್ಲಾಸ್ ತೆಗೆದುಕೊಂಡಿದ್ದಾರೆ.

ನ್ಯೂ ಶಾಪಿಂಗ್ ಸ್ಟಾಲ್ ನಲ್ಲಿ ಅನ್ಯಭಾಷೆ ಮಾತ್ರ ಬಳಕೆಯ ಮಾಡಿರುವುದಕ್ಕೆ ಕನ್ನಡಪರ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಶಾಪಿಂಗ್ ಎದುರು ಕರುನಾಡ ವಿಜಯ ಸೇನೆ ಹಾಗೂ ಕನ್ನಡ ಪರ ಕಾರ್ಯಕರ್ತರು ಜಮಾವಣೆಗೊಂಡು ಆಕ್ರೋಶ ಹೊರಹಾಕಿದ್ದಾರೆ.

ಇದನ್ನು ಓದಿ :ಕಾಂಗ್ರೆಸ್ ಸರ್ಕಾರ ಬಂದ್ಮೇಲೆ ಪಾಕಿಸ್ತಾನ ಬಾವುಟ ಹಾರಾಡ್ತಿದೆ : ಯತ್ನಾಳ್ ಲೇವಡಿ

ಇದೇ ವೇಳೆ ಶಾಪಿಂಗ್ ಒಳಗೆ ಪ್ರವೇಶಿಸಿ ಶಾಪಿಂಗ್​ನಲ್ಲಿದ್ದ ಅನ್ಯಭಾಷೆಗಳನ್ನೊಳಗೊಂಡ ಎಲ್ಲಾ ಕರಪತ್ರ, ಬ್ಯಾನರ್​ಗಳನ್ನು ಆಚೆ ತಂದು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ. ಕನ್ನಡ ಭಾಷೆ ಬಳಕೆ ಮಾಡದಿರುವುದಕ್ಕೆ ಅಸಮಾಧಾನ ಹೊರಹಾಕಿದ್ದಾರೆ.

ಶಾಪಿಂಗ್ ಸ್ಟಾಲ್​ನಲ್ಲಿ ಕನ್ನಡ ಭಾಷೆ ಬಳಸುವ ತನಕ ನಮ್ಮ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments