Sunday, August 24, 2025
Google search engine
HomeUncategorizedಗೃಹಲಕ್ಷ್ಮೀ ಹೆಸರಲ್ಲಿ ನಕಲಿ ಆ್ಪಪ್​ಗಳ ಹಾವಳಿ : ಜನರಲ್ಲಿ ಹೆಚ್ಚಿದ ಆತಂಕ

ಗೃಹಲಕ್ಷ್ಮೀ ಹೆಸರಲ್ಲಿ ನಕಲಿ ಆ್ಪಪ್​ಗಳ ಹಾವಳಿ : ಜನರಲ್ಲಿ ಹೆಚ್ಚಿದ ಆತಂಕ

ಬೆಂಗಳೂರು :- ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಗೃಹಲಕ್ಷ್ಮೀಯು ಜನರ ಮನೆಗಳಿಗೆ ಬರುವಲ್ಲಿ ಒಂದಲ್ಲ ಒಂದು ರೀತಿಯ ಕಾರಣದಿಂದ ವಿಳಂಬವಾಗುತ್ತಿದೆ.

ಇದರ ಬೆನ್ನಲ್ಲೆ ಈಗ ಸಾರ್ವಜನಿಕರಿಗೆ ಮತ್ತೊಂದು ಚಿಂತೆ ಶುರುವಾಗಿದ್ದು, ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸುವ ಮುನ್ನವೇ ರಾಜ್ಯದಲ್ಲಿ ಯೋಜನೆಯ ಹೆಸರಲ್ಲಿ ನಕಲಿ ಆ್ಯಪ್ ಗಳ ಹಾವಳಿ ಜೋರಾಗಿದೆ.

ಪ್ಲೇ ಸ್ಟೋರ್​ನಲ್ಲಿ ನಕಲಿ ಅ್ಯಪ್​ಗಳು ಸೃಷ್ಟಿಯಾಗಿದ್ದು ಇವುಗಳನ್ನು ಡೌನ್​ಲೋಡ್ ಮಾಡಿಕೊಂಡರೆ ನಿಮ್ಮ ಖಾತೆ ಹ್ಯಾಕ್​ ಆಗುತ್ತದೆ. ಅದಕ್ಕಾಗಿ ಸಾರ್ವಜನಿಕರ ಖಾತೆಗೆ ಕನ್ನ ಹಾಕುವ ಇಂತಹ ಆ್ಪಪ್​ಗಳ ಬಗ್ಗೆ ಎಚ್ಚರವಹಿಸಬೇಕು ತಪ್ಪಿದರೆ ಅಪಾಯ ಗ್ಯಾರಂಟಿಯಾಗಿದೆ…!

ಇದನ್ನೂ ಓದಿ : Aadhaar-PAN link: ಆಧಾರ್‌-ಪಾನ್‌ ಲಿಂಕ್‌ಗೆ ಇಂದೇ ಕೊನೆ ದಿನ

ಅಲ್ಲದೆ ಸರ್ಕಾರವು ಈ ಯೋಜನೆಯನ್ನು ಅತ್ಯಂತ ಯಶಸ್ವಿಯಾಗಿಸಲು ಪಣ ತೊಟ್ಟಿದ್ದು, ಈ ಮೂಲಕ ವಿಪಕ್ಷಗಳ ಬಾಯಿ ಮುಚ್ಚಿಸಲು ಎಲ್ಲಿಲ್ಲದ ಕಸರತ್ತು ನಡೆಸಿದೆ. ಆದರೆ ಈ ರೀತಿಯ ಘಟನೆಗಳಿಂದ ಹಿನ್ನಡೆ ಅನುಭವಿಸುತ್ತಿದೆ.

ಗೃಹಲಕ್ಷ್ಮೀಗಾಗಿ ಪ್ರತ್ಯೇಕ ಆ್ಯಪ್​ ಸಿದ್ದಪಡಿಸಿರುವ ಸರ್ಕಾರ ಇದರಿಂದಲೇ ಯೋಜನೆಯನ್ನು ಜನರಿಗೆ ತಲುಪಿಸಲು ತಯಾರಿ ನಡೆಸಿರುವ ಸಮಯದಲ್ಲೇ ಸೈಬರ್ ಖದೀಮರ ಹಾವಳಿ ಹೆಚ್ಚಾಗಿರುವುದು ಸರ್ಕಾರಕ್ಕೆ ತಲೆನೋವಾದರೆ,ಸಾರ್ವಜನಿಕರಲ್ಲಿ ಆತಂಕ ಹೆಚ್ಚಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments