Monday, August 25, 2025
Google search engine
HomeUncategorizedಈ ಸಾವು ನ್ಯಾಯವೇ! : ಪುಟ್ಟ ಕಂದಮ್ಮನ ಉಸಿರು ಕಸಿದ ಯಮರೂಪಿ ಟಿಪ್ಪರ್

ಈ ಸಾವು ನ್ಯಾಯವೇ! : ಪುಟ್ಟ ಕಂದಮ್ಮನ ಉಸಿರು ಕಸಿದ ಯಮರೂಪಿ ಟಿಪ್ಪರ್

ದಾವಣಗೆರೆ : ದೇವರೇ ನೀನೆಷ್ಟು ಕ್ರೂರಿ! ನಿನಗೆ ಕಣ್ಣೇ ಇಲ್ಲವೇ! ನನ್ನನ್ನ ನಿನ್ನ ಬಳಿ ಕರೆದುಕೊಂಡು ಬಿಡು, ನನ್ನ ಕಂದನನ್ನ ಮರಳಿ ಕೊಟ್ಟು ಬಿಡು! ನನ್ನ ಕಂದ ನಿನಗೇನು ಅನ್ಯಾಯ ಮಾಡಿದ್ದಳು.

ಹೀಗೆ, ತನ್ನ 2 ವರ್ಷದ ಮುದ್ದು ಕಂದನನ್ನ ಕಳೆದುಕೊಂಡ ಪೋಷಕರು ಗೋಳಾಡುತ್ತಿದ್ದ ದೃಶ್ಯ ಎಂಥವರ ಕಣ್ಣಂಚಲ್ಲೂ ನೀರು ತರಿಸುವಂತಿತ್ತು.

ಯಮನಂತೆ ಬಂದ ಟಿಪ್ಪರ್ ಲಾರಿ(ಎಂ ಸ್ಯಾಂಡ್ ಟಿಪ್ಪರ್)ಯೊಂದು 2 ವರ್ಷದ ಮುದ್ದಾದ ಕಂದನ ಮೇಲೆ ಹರಿದು ಆಕೆಯ ಪ್ರಾಣ ಪಕ್ಷಿಯನ್ನು ಕಸಿದುಕೊಂಡಿದೆ. ಈ ಘಟನೆ ಬೆಣ್ಣೆನಗರಿ ದಾವಣಗೆರೆಯ ಹಳೇ ಕುಂದುವಾಡದಲ್ಲಿ ನಡೆದಿದೆ.

ಎರಡುವರೆ ವರ್ಷದ ಚರಸ್ವಿ ಮೃತಪಟ್ಟ ಬಾಲಕಿ. ಈಕೆ ಕುಂದುವಾಡ ಗ್ರಾಮದ ನಿವಾಸಿ ಗಣೇಶ್ ಎಂಬವರ ಮಗಳು. ಅಂಗನವಾಡಿ ಮುಗಿಸಿ ತನ್ನ ಅಜ್ಜಿ ಜೊತೆ ಮರಳಿ ಮನೆಗೆ ಬರುತ್ತಿರುವಾಗ ಟಿಪ್ಪರ್ ಲಾರಿ ಈ ಕಂದನ ಮೇಲೆ ಹರಿದಿದೆ. ಪರಿಣಾಮ ಸ್ಥಳದಲ್ಲೇ ಚರಸ್ವಿ ಪ್ರಾಣಪಕ್ಷಿ ಬಾರದ ಲೋಕದತ್ತ ಪಯಣ ಬೆಳೆಸಿದೆ.

ಇದನ್ನೂ ಓದಿ : ಜೋಕಾಲಿ ಸೀರೆ ಕುತ್ತಿಗೆಗೆ ಸಿಲುಕಿ ಬಾಲಕಿ ಸಾವು

ಗೊಂಬೆಯನ್ನೂ ನಾಚಿಸುವಂಥ ಚೆಲುವು

ಗೊಂಬೆಯನ್ನೂ ನಾಚಿಸುವಂಥ ಚೆಲುವನ್ನು ಹೊಂದಿದ್ದ ಆ ಕಂದನನ್ನ ಕಳೆದುಕೊಂಡ ಹೆತ್ತ ತಾಯಿಯ ಆಕ್ರಂದನ ಹೇಳತೀರದು. ಚಾಲಕನ ಅಜಾಗರೂಕತೆಯೇ ಅಪಘಾತಕ್ಕೆ ಕಾರಣ ಅಂತ ಪೋಷಕರು ಆಕ್ರೋಶ ಹೊರಹಾಕಿದರು. ಅಪಘಾತ ಸ್ಥಳಕ್ಕೆ ಜಮಾಯಿಸಿದ ಗ್ರಾಮಸ್ಥರು ರಸ್ತೆಯಲ್ಲೇ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮಸ್ಥರು ಲಾರಿ ಚಾಲಕ ಹಾಗೂ ಮಾಲೀಕನ ಬಂಧನಕ್ಕೆ ಆಗ್ರಹಿಸಿದರು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ದಕ್ಷಿಣ ಸಂಚಾರಿ ಠಾಣೆ ಹಾಗೂ ವಿದ್ಯಾನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments