Tuesday, August 26, 2025
Google search engine
HomeUncategorizedಪ್ರತಾಪ್ ಸಿಂಹ ಕಾಂಗ್ರೆಸ್ ಪ್ರೀತಿ ಬದಿಗಿಟ್ಟು ಬಿಜೆಪಿಗೆ ನಿಷ್ಠೆ ತೋರಲಿ : ಹೆಚ್.ಸಿ ಮಹದೇವಪ್ಪ

ಪ್ರತಾಪ್ ಸಿಂಹ ಕಾಂಗ್ರೆಸ್ ಪ್ರೀತಿ ಬದಿಗಿಟ್ಟು ಬಿಜೆಪಿಗೆ ನಿಷ್ಠೆ ತೋರಲಿ : ಹೆಚ್.ಸಿ ಮಹದೇವಪ್ಪ

ಬೆಂಗಳೂರು : ಪ್ರತಾಪ್ ಸಿಂಹ ಅವರು ಕಾಂಗ್ರೆಸ್ ಪ್ರೀತಿಯನ್ನು ಬದಿಗಿಟ್ಟು ಬಿಜೆಪಿಗೆ ನಿಷ್ಠೆ ತೋರಿಸಲಿ ಎಂದು ಸಚಿವ ಡಾ.ಹೆಚ್.ಸಿ ಮಹದೇವಪ್ಪ ಕುಟುಕಿದ್ದಾರೆ.

ನಾನೇ ಪೂರ್ಣಾವಧಿ ಸಿಎಂ ಎನ್ನುವ ಧೈರ್ಯ ಸಿದ್ದರಾಮಯ್ಯಗೆ ಇಲ್ಲ ಎಂದಿದ್ದ ಸಂಸದ ಪ್ರತಾಪ್ ಸಿಂಹಗೆ ಟ್ವೀಟ್ ಮೂಲಕ ಅವರು ತಿರುಗೇಟು ಕೊಟ್ಟಿದ್ದಾರೆ.

ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಸಚಿವ ಸಂಪುಟವೂ ರಚನೆಯಾಗಿ ಸರ್ಕಾರದ ಜನಪರ ಆಡಳಿತ ಪ್ರಾರಂಭವಾಗಿದೆ. 40% ಕಳಪೆ ಆಡಳಿತದ ಮೂಲಕ ಜನರಿಂದ ಅಧಿಕಾರ ಕಳೆದುಕೊಂಡು ಸಂಸದ ಪ್ರತಾಪ್ ಸಿಂಹ ಅವರು ಮತಿ ಭ್ರಮಣೆಗೆ ಒಳಗಾಗಿದ್ದಾರೆ. ಹೀಗಾಗಿ, ತಮ್ಮ ಅಪ್ರಬುದ್ಧ ಮಾತುಗಳನ್ನು ಮುಂದುವರಿಸಿದ್ದಾರೆ ಎಂದು ಛೇಡಿಸಿದ್ದಾರೆ.

ಇದನ್ನೂ ಓದಿ : ಸಿದ್ದರಾಮಯ್ಯಗೆ ಪುಕ್ಕಲತನ, ಉದಾರ ಮನಸ್ಸು ಇಲ್ಲ : ಪ್ರತಾಪ್ ಸಿಂಹ

2ರಿಂದ 3 ಜನ ಸಿಎಂ ಬದಲಿಸುವ ಕೆಟ್ಟಚಾಳಿ

ಬಿಜೆಪಿ ನಾಯಕರು ಇನ್ನು ಸೋಲಿನ ಸುಳಿಯಲ್ಲಿ ಕಂಗಾಲಾಗಿದ್ದಾರೆ. ಇಷ್ಟು ದಿನವಾದರೂ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಅವರ ದುರ್ಬಲತೆಯ ಸಂಕೇತವಾಗಿದೆ. ಅಧಿಕಾರ ಬಂತು ಎಂದರೆ 2 ರಿಂದ 3 ಜನ ಮುಖ್ಯಮಂತ್ರಿಗಳನ್ನು ಬದಲಿಸುವ ಕೆಟ್ಟಚಾಳಿಯನ್ನು ಬಿಜೆಪಿ ಇಟ್ಟುಕೊಂಡಿದೆ. ಅವರಿಗೆ ಪೂರ್ಣಾವಧಿ ಸಿಎಂ ಎಂಬ ಪದ ಬಳಸುವ ನೈತಿಕತೆ ಇಲ್ಲ ಎಂದು ಚಾಟಿ ಬೀಸಿದ್ದಾರೆ.

ಕೈನಾಯಕರ ಬೆನ್ನು ಕೆರೆಯುವ ಕೆಲಸ ಬೇಡ

ಪ್ರತಾಪ್ ಸಿಂಹ ಅವರು ಅನಗತ್ಯವಾಗಿ ಕಾಂಗ್ರೆಸ್ ಪಕ್ಷದ ನಾಯಕರ ಬೆನ್ನು ಕೆರೆಯುವ ಕೆಲಸ ಮಾಡುತ್ತಿದ್ದಾರೆ. ತಮ್ಮ ಈ ಕಾಂಗ್ರೆಸ್ ಪ್ರೀತಿಯನ್ನು ಬದಿಗಿಟ್ಟು, ಬಿಜೆಪಿ ಪಕ್ಷಕ್ಕೆ ನಿಷ್ಠೆ ತೋರಲಿ ಎಂದು ಈ ಮೂಲಕ ಹೇಳಲು ಬಯಸುತ್ತೇನೆ ಅಂತ ಹೆಚ್.ಸಿ ಮಹದೇವಪ್ಪ ನಯವಾಗಿಯೇ ಬುದ್ಧಿವಾದ ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments