Saturday, August 23, 2025
Google search engine
HomeUncategorizedಅಕ್ಕಿ ಕೊಡಲು ಛತ್ತೀಸಗಢ ಸರ್ಕಾರ ಒಪ್ಪಿಗೆ ಸೂಚಿಸಿದೆ ; ಸಚಿವ ಡಾ.ಜಿ.ಪರಮೇಶ್ವರ

ಅಕ್ಕಿ ಕೊಡಲು ಛತ್ತೀಸಗಢ ಸರ್ಕಾರ ಒಪ್ಪಿಗೆ ಸೂಚಿಸಿದೆ ; ಸಚಿವ ಡಾ.ಜಿ.ಪರಮೇಶ್ವರ

ತುಮಕೂರು: ಕಾಂಗ್ರೆಸ್​ ಗ್ಯಾರಂಟಿಯಲ್ಲೊಂದು ಅನ್ನ ಭಾಗ್ಯಯೋಜನೆ ಈ ಯೋಜನೆಯಡಿಯಲ್ಲಿ 10ಕೆಜಿ ಅಕ್ಕಿ ನೀಡಲು ರಾಜ್ಯ ಸರ್ಕಾರ ಚಿಂತನೆ ನೆಡಿಸಿ ಅನ್ಯ ರಾಜ್ಯಗಳ ಮೊರೆ ಹೋಗಿತ್ತು. ಅಂದ್ರೆ ಇದೀಗ  ಅನ್ನ ಭಾಗ್ಯ ಯೋಜನೆಗೆ ಬೇಕಾದ 1.50 ಲಕ್ಷ ಟನ್ ಅಕ್ಕಿ ಕೊಡಲು ಛತ್ತೀಸಗಢ ಸರ್ಕಾರ ಒಪ್ಪಿಗೆ ಸೂಚಿಸಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.

ಹೌದು, ರಾಜ್ಯದಲ್ಲಿ ಅಕ್ಕಿ ರಾಜಕೀಯ ಶುರುವಾಗಿದ್ದು, ಅನ್ನಭಾಗ್ಯ ಯೋಜನೆಗೆ ಅಕ್ಕಿ ಪೂರೈಸಲು ಕೇಂದ್ರ ಸರ್ಕಾರ(Central Government) ನಿರಾಕರಿಸಿದೆ. ಬೇರೆ ರಾಜ್ಯಗಳಿಂದ ಅಕ್ಕಿ ಖರೀದಿ ಮಾಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿತ್ತು ಅದ್ರೆ ಇದೀಗ ಅನ್ನ ಭಾಗ್ಯ ಯೋಜನೆಗೆ ಬೇಕಾದ 1.50 ಲಕ್ಷ ಟನ್ ಅಕ್ಕಿ ಕೊಡಲು ಛತ್ತೀಸಗಢ ಸರ್ಕಾರ ಒಪ್ಪಿಗೆ ಸೂಚಿಸಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.

ಇದನ್ನೂ ಓದಿ: ಅಕ್ಕಿಗಾಗಿ ಅನ್ಯ ರಾಜ್ಯಗಳ ಮೊರೆ ಹೋದ ರಾಜ್ಯಸರ್ಕಾರ 

ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಜಿ. ಪರಮೇಶ್ವರ್​  ಛತ್ತೀಸಗಢ ಸರ್ಕಾರ ಅಕ್ಕಿ ಕೊಡಲು ಒಪ್ಪಿಗೆ ಸೂಚಿಸಿದ್ದು, ಅಲ್ಲಿಂದ ಸಾಗಣೆ ಮಾಡಲು ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

ಅನ್ನಭಾಗ್ಯ ಯೋಜನೆ ನಿಲ್ಲಿಸುವುದಿಲ್ಲ

ಯಾವುದೇ ಕಾರಣಕ್ಕೂ ಅನ್ನ ಭಾಗ್ಯ ಯೋಜನೆ ನಿಲ್ಲಿಸುವುದಿಲ್ಲ.ಅನ್ನ ಭಾಗ್ಯ ಯೋಜನೆಗೆ ಅಗತ್ಯದಷ್ಟು ಅಕ್ಕಿ ಒಂದು ರಾಜ್ಯದಲ್ಲಿ ಸಿಗುವುದಿಲ್ಲ. ಹಲವು ರಾಜ್ಯಗಳನ್ನು ಸಂಪರ್ಕಿಸಿ ಎಲ್ಲಿ ಅಕ್ಕಿ ಸಿಗುತ್ತೋ ಅಲ್ಲಿ ಖರೀದಿಸಲಾಗುವುದು. ರೈತರ ಬಳಿ ಇದ್ದರೂ ಖರೀದಿ ಮಾಡುತ್ತೀವಿ ಎಂದರು.

ಅಕ್ಕಿ ಜೊತೆಗೆ ಜೋಳ, ರಾಗಿ ಕೂಡಲು ಚಿಂತನೆ 

ಅಕ್ಕಿಯ ಜೊತೆಗೆ ರಾಗಿ,ಜೋಳ ಸಹಾ ನೀಡಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ.

ಇನ್ನೂ ಕೇಂದ್ರ ಸರ್ಕಾರ ಅಕ್ಕಿ ಕೊಡಲು ನಿರಾಕರಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಭಾರತ ಆಹಾರ ನಿಗಮದವರು (ಎಫ್‌ಸಿಐ) ಮೊದಲು ಅಕ್ಕಿ ಕೊಡಲು ಒಪ್ಪಿಕೊಂಡು ನಂತರ ನಿರಾಕರಿಸಿದರು. ಎಫ್‌ಸಿಐಗೆ ಈ ರೀತಿ ಸೂಚನೆ ಕೊಟ್ಟವರು ಯಾರು ಎಂದು ಪ್ರಶ್ನಿಸಿದರು.

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments