Monday, August 25, 2025
Google search engine
HomeUncategorizedಫ್ರೀ ಬಸ್ ಸೇವೆಯಿಂದ ನಮ್ಮ ಸಂಸ್ಥೆಯ ಮೇಲೆ ಯಾವುದೇ ಹೊರೆಯಾಗಲ್ಲ; ರಾಮಲಿಂಗಾ ರೆಡ್ಡಿ

ಫ್ರೀ ಬಸ್ ಸೇವೆಯಿಂದ ನಮ್ಮ ಸಂಸ್ಥೆಯ ಮೇಲೆ ಯಾವುದೇ ಹೊರೆಯಾಗಲ್ಲ; ರಾಮಲಿಂಗಾ ರೆಡ್ಡಿ

ಬೆಂಗಳೂರು: ಫ್ರೀ ಬಸ್ ಸೇವೆಯಿಂದ ವಿದ್ಯಾರ್ಥಿಗಳಿಗೆ ಕೆಲಸಕ್ಕೆ ಹೋಗುವವರಿಗೆ ಈ ಯೋಜನೆ ನೆರವಾಗಿದೆ. ಇದರಿಂದ ನಮ್ಮ ಸಂಸ್ಥೆಗಳಿಗೆ ಯಾವುದೇ ಆರ್ಥಿಕ ಹೊರೆಯಾಗುವುದಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಹೇಳಿಕೆ ನೀಡಿದ್ದಾರೆ.

ಹೌದು, ಈ ಯೋಜನೆಯಿಂದ ರಾಜ್ಯದ ಮಹಿಳೆಯರಿಗೆ ಅನುಕೂಲ ಆಗಲಿ ಅಂತ ಈ ಯೋಜನೆ ಜಾರಿಗೆ ತಂದೆವು. ಅನುಕೂಲ ಆಗ್ತಿದೆ. ಧಾರ್ಮಿಕ ಕ್ಷೇತ್ರಗಳಿಗೆ ಒಟ್ಟಿಗೆ ಹೋಗ್ತಿದ್ದಾರೆ. ಅದಕ್ಕೆ ಕೆಲ ಬಸ್‍ಗಳು ರಶ್ ಆಗ್ತಿವೆ. 15 ದಿನದೊಳಗೆ ಒಂದು ಹಂತಕ್ಕೆ ಬರುತ್ತೆ. ಇನ್ನೂ ರಾಜ್ಯದಲ್ಲಿ ಶಕ್ತಿ ಯೋಜನೆ (Shakti Scheme) ಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಉಚಿತ ಪ್ರಯಾಣ ಮಾಡುತ್ತಿರುವ ಮಹಿಳಾ ಪ್ರಯಾಣಿಕರಿಗೆ ಈ ಯೋಜನೆಯಿಂದ ಖುಷಿಯಾಗಿದ್ದಾರೆ.

ಕೆಲವು ಬಸ್ ಗಳಲ್ಲಿ ನಕಲಿ ಆಧಾರ್ (Adhar Card) ತೋರಿಸಿ ಪ್ರಯಾಣ ಮಾಡ್ತಿರೋ ಬಗ್ಗೆಯೂ ಮಾತನಾಡಿದ ಸಚಿವರು, ನಮ್ಮ ಅಧಿಕಾರಿಗಳು ಅಲರ್ಟ್ ಆಗಿರಬೇಕು. ಅಕ್ರಮವಾಗಿ ನಕಲಿ ಮಾಡಿದ್ರ ಮೇಲೆ ದೂರು ನೀಡಿ, ಅವ್ರ ಮೇಲೆ ಕ್ರಮ ಆಗಬೇಕು ಅಂತ ನಮ್ಮ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ ಎಂದರು.

ಇದನ್ನೂ ಓದಿ: ಅಕ್ಕಿ ಕೊಡಲ್ಲ ಅಂದ್ರೆ, ಕರ್ನಾಟಕವನ್ನ ಒಕ್ಕೂಟ ವ್ಯವಸ್ಥೆಯಿಂದ ಕಿತ್ತಾಕಿ : ಶಿವಲಿಂಗೇಗೌಡ ಕಿಡಿ

ತುಮಕೂರು (Tumakuru) ಘಟನೆಯ ಬಗ್ಗೆ ವರದಿ ತರಿಸಿಕೊಳ್ಳುತ್ತೇವೆ. 

ತುಮಕೂರಿನ ಕೊರಟಗೆರೆಯ, ನಾಗೇನಹಳ್ಳಿಯ ಗೇಟ್ ಬಳಿ ಗುರುವಾರ ಸಂಜೆ, ಬಸ್ ಗಾಗಿ ಕೈ ಅಡ್ಡ ಹಾಕಿದ್ದ ಮಹಿಳೆಯರ ಮೇಲೆ ಬಸ್ ಹತ್ತಿಸಲು ಯತ್ನಿಸಿದ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಾರಿಗೆ ಸಚಿವರು ಘಟನೆಯ ಬಗ್ಗೆ ವರದಿ ತರಿಸಿಕೊಳ್ತೇನೆ ಎಂದಿದ್ದಾರೆ.

 

 

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments