Sunday, August 24, 2025
Google search engine
HomeUncategorizedರಾಹುಲ್ ಗಾಂಧಿ ತುಕಡೆ ಗ್ಯಾಂಗಿಗೆ ಬೆಂಬಲ ಕೊಡ್ತಾರೆ : ಸಿ.ಟಿ ರವಿ

ರಾಹುಲ್ ಗಾಂಧಿ ತುಕಡೆ ಗ್ಯಾಂಗಿಗೆ ಬೆಂಬಲ ಕೊಡ್ತಾರೆ : ಸಿ.ಟಿ ರವಿ

ಚಿಕ್ಕಮಗಳೂರು : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತುಕಡೆ ಗ್ಯಾಂಗಿಗೆ ಬೆಂಬಲ ಕೊಡ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ‌ ರವಿ ಕುಟುಕಿದ್ದಾರೆ.

ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕಾಂಗ್ರೆಸಿಗರಿಗೆ ದೇಶಭಕ್ತಿ ಅಂದರೆ ಅಲರ್ಜಿ ಅನ್ನೋದು ಸ್ಪಷ್ಟ ಎಂದು ಹೇಳಿದ್ದಾರೆ.

ಕಮ್ಯುನಿಸ್ಟ್ ಪಾರ್ಟಿ ಆಫ್ ಚೈನಾ ಜೊತೆ ರಾಹುಲ್ ಗಾಂಧಿ ಒಪ್ಪಂದ, ದೇಶಭಕ್ತಿಗೆ ವಿರೋಧದ ಒಪ್ಪಂದ ಎಂದು ಅನುಮಾನ ಕಾಡುತ್ತಿದೆ. ಭಾರತ್ ತೆರೇ ತುಕ್ಕುಡೆ ಹೂಂಗೆ ಇನ್ಸಾ ಅಲ್ಲಾ ಅಂತ ಘೋಷಣೆ ಕೂಗಿದ ತುಕಡೆ ಗ್ಯಾಂಗಿಗೆ ಬೆಂಬಲ ಕೊಡ್ತಾರೆ ಎಂದು ಟೀಕಿಸಿದ್ದಾರೆ.

ಪಠ್ಯವನ್ನು ಜನರ ಮುಂದೆ ಇಡ್ತೀವಿ

ದೇಶಭಕ್ತಿಯ ಪ್ರೇರಣೆಯಿಂದ ಕೂಡಿದ ಪಾಠವನ್ನು ಹಿಂದೆ ತೆಗೆಯುತ್ತಾರೆ. ನಾವು ಇದೇ ಪಠ್ಯವನ್ನು ಜನರ ಮುಂದೆ ಇಡುತ್ತೇವೆ. ತಪ್ಪು ಹುಡುಕಲು ಜನರನ್ನು ಕೇಳುತ್ತೇವೆ. ಚಕ್ರವರ್ತಿ ಸೂಲಿಬೆಲೆ ಭಗತ್ ಸಿಂಗ್, ಸುಖದೇವ್, ರಾಜಗುರು ಬಗ್ಗೆ ದೇಶಭಕ್ತಿ ಪ್ರೇರಿತ ಲೇಖನ ಬರೆದಿದ್ರು. ಕಾಂಗ್ರೆಸಿಗೆ ಅಂಬೇಡ್ಕರ್ ಅವರನ್ನು ಕಂಡರೆ ಆಗುತ್ತಿರಲಿಲ್ಲ ಎಂದು ಭಾವಿಸಿದ್ದೆ. ಕಾಂಗ್ರೆಸಿಗೆ ಭಗತ್ ಸಿಂಗ್, ರಾಜಗುರು ಹಾಗೂ ಸುಖದೇವ್ ಕಂಡರು ಆಗಲ್ಲ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ : ಭಾರತ್ ಜೋಡೋದಿಂದ ‘ದ್ವೇಷ ಸೋತಿದೆ, ಪ್ರೀತಿ ಗೆದ್ದಿದೆ’ : ರಾಹುಲ್ ಗಾಂಧಿ

ಅಂಬೇಡ್ಕರ್ ಕಂಡ್ರೂ ಆಗಲ್ಲ

ಯಾವುದೇ ಕ್ರಾಂತಿಕಾರಿಗಳನ್ನು ಕಂಡರೂ ಕಾಂಗ್ರೆಸ್ಸಿಗೆ ಆಗಲ್ಲ. ಕಾಂಗ್ರೆಸ್ ತೆಗೆದಿರುವುದು ಕ್ರಾಂತಿಕಾರಿಗಳ ಪಾಠ. ಅದರಲ್ಲಿ ಇದ್ದದ್ದು ಸೂಲೆಬೆಲೆ ಅವರ ಜೀವನದ ಪಠ್ಯ ಅಲ್ಲ. ಕಾಂಗ್ರೆಸಿಗೆ ಅಂಬೇಡ್ಕರ್ ಅವರನ್ನು ಕಂಡರೂ ಆಗುವುದಿಲ್ಲ. ಅವರು ಬದುಕಿದ್ದಾಗಲೂ ವಿರೋಧ ಮಾಡಿದರು. ಚುನಾವಣೆಯಲ್ಲಿ ಸೋಲಿಸಿ, ಸತ್ತಾಗಲು ಅವಮಾನಿಸಿದರು ಎಂದು ಸಿ.ಟಿ ರವಿ ಛೇಡಿಸಿದ್ದಾರೆ.

ಕಾಂಗ್ರೆಸ್ ಅಡ್ಡಡ್ಡ ಮಲಗುತ್ತದೆ

ದಲ್ಲಾಳಿಗಳ ಕಪಿಮುಷ್ಠಿಯಲ್ಲಿ ರೈತ ಸಿಲುಕಿ ಒದ್ದಾಡಬೇಕೆಂಬುದು ಕಾಂಗ್ರೆಸ್ ಉದ್ದೇಶ. ರೈತರನ್ನು ಹೇಗೆ ದಿಕ್ಕು ತಪ್ಪಿಸುತ್ತಿದ್ದಾರೆ, ಸುಳ್ಳನ್ನೇ ಹೇಳುತ್ತಿದ್ದಾರೆ ಎಂದು ರೈತರಿಗೆ ಅರಿವಾಗುತ್ತದೆ. ರೈತರಿಗೆ ಸತ್ಯದ ಅರಿವಾಗುವ ಕಾಲ ದೂರ ಇಲ್ಲ. ರೈತರು ಉದ್ದಿಮೆದಾರರಾಗುವ ಅವಕಾಶವನ್ನು ಇದು ತಪ್ಪಿಸುತ್ತದೆ. ಇದರ ಅಡ್ಡ ಪರಿಣಾಮ ಕೆಲವೇ ದಿನಗಳಲ್ಲಿ ಗೊತ್ತಾಗುತ್ತೆ. ಕಾಂಗ್ರೆಸ್ ಕೂಡ ಅಡ್ಡಡ್ಡ ಮಲಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments