Monday, August 25, 2025
Google search engine
HomeUncategorized'ಅಭಿವಾ' ಬೀಗರ ಔತಣದಲ್ಲಿ ಮುದ್ದೆ, ನಾಟಿ ಕೋಳಿ ಸಾರು, ಬೋಟಿ ಗೊಜ್ಜು, ; ಮೆನುನಲ್ಲಿ ಇನ್ನೂ...

‘ಅಭಿವಾ’ ಬೀಗರ ಔತಣದಲ್ಲಿ ಮುದ್ದೆ, ನಾಟಿ ಕೋಳಿ ಸಾರು, ಬೋಟಿ ಗೊಜ್ಜು, ; ಮೆನುನಲ್ಲಿ ಇನ್ನೂ ಏನೆಲ್ಲಾ ಇದೆ ಗೊತ್ತಾ..?

ಮಂಡ್ಯ: ಮಂಡ್ಯದ ಗಂಡು ಅಂಬರೀಶ್ ಪುತ್ರ ಅಭಿಷೇಕ್ (Abhishek Ambareesh) ಮತ್ತು ಅವಿವಾ (Aviva) ಅವರ ವಿವಾಹವು ಇದೇ ಜೂನ್ 5ರಂದು ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆದಿತ್ತು. ಅಂದ್ರೆ ಇದೀಗ ಮಂಡ್ಯ ಜನತೆಯ ಪ್ರೀತಿಗಾಗಿ ಅಂಬರೀಶ್​ ಅಭಿಮಾನಿಗಳಿಗಾಗಿ ಸುಮಲತಾ ಬೀಗರ ಔಟಣ ಕೂಟವನ್ನು ಇಂದು ಏರ್ಪಡಿಸಿದ್ದಾರೆ.

ಹೌದು, ಮಂಡ್ಯ (Mandya) ಜಿಲ್ಲೆ ಮದ್ದೂರು (Maddur) ತಾಲೂಕಿನ ಗೆಜ್ಜಲಗೆರೆ ಬಳಿಯ 15 ಎಕರೆ ಪ್ರದೇಶದಲ್ಲಿ ಬೀಗರ ಔತಣ ಕೂಟ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸುಮಾರು 50 ಸಾವಿರ ಜನರಿಗೆ ಸುಮಲತಾ ಅಂಬರೀಶ್ (Sumalatha Ambareesh) ಕುಟುಂಬ ಅಭಿಮಾನಿಗಳಿಗೆ ಬೊಂಬಾಟ್ ಬಾಡೂಟ ಹಾಕಿಸಲು ಸಕಲ ಸಿದ್ಧತೆಗಳನ್ನ ಮಾಡಿಕೊಂಡಿದೆ.

ಇದನ್ನೂ ಓದಿ: ಐಷಾರಾಮಿ ಕಾರು ಖರೀದಿಸಿದ ರಾಕಿ ಬಾಯ್​ ​ ; ಎಷ್ಟಿದರ ಬೆಲೆ..? ಇಲ್ಲಿದೆ ಕಂಪ್ಲೀಟ್​ ಡೀಟೆಲ್ಸ್

ಇನ್ನೂ ಮಂಡ್ಯ ಜನತೆಗಾಗಿ ಮಂಡ್ಯದ ಶೈಲಿಯಲ್ಲಿ ಬಾಡೂಟ ತಯಾರಿಗೊಳ್ಳುತ್ತಿದ್ದು, ಮಂಡ್ಯದ ಪ್ರಖ್ಯಾತ ಬಾಣಸಿಗರ ತಂಡದ 900 ಮಂದಿಯಿಂದ ಅಡುಗೆ ತಯಾರಿ ಕಾರ್ಯಗಳು ಬಿರುಸಿನಿಂದ ನಡೆಯುತ್ತಿದೆ. 7 ಟನ್ ಮಟನ್, 8 ಟನ್ ಚಿಕನ್ ಬಳಸಿ ಭರ್ಜರಿ ಬಾಡೂಟವನ್ನು ಸಿದ್ಧಗೊಳಿಸಲಾಗುತ್ತಿದೆ.

ಊಟದ ಮೆನುವಿನಲ್ಲಿ ವೈರಟಿ ವೈರಟಿ ಪುಡ್​ 

ರಾಗಿಮುದ್ದೆ, ಮಟನ್ ಬಿರಿಯಾನಿ, ಬೋಟಿ ಗೊಜ್ಜು, ನಾಟಿಕೋಳಿ ಸಾಂಬಾರ್, ಕಬಾಬ್, ಮೊಟ್ಟೆ, ರೈಸ್, ತಿಳಿ ಸಾಂಬಾರ್, ಬಾದುಶಾ, ಪಾಯಸ, ಬೀಡಾ, ಐಸ್‌ಕ್ರೀಂ, ಬಾಳೆಹಣ್ಣು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments