Monday, August 25, 2025
Google search engine
HomeUncategorizedಸಾವಿತ್ರಿ ಬಾ ಫುಲೆ ವಿಷಯ ಪಠ್ಯದಲ್ಲಿ ಸೇರಿಸಿದ್ದೇವೆ : ಮಧು ಬಂಗಾರಪ್ಪ

ಸಾವಿತ್ರಿ ಬಾ ಫುಲೆ ವಿಷಯ ಪಠ್ಯದಲ್ಲಿ ಸೇರಿಸಿದ್ದೇವೆ : ಮಧು ಬಂಗಾರಪ್ಪ

ಬೆಂಗಳೂರು : ಸಾವಿತ್ರಿ ಬಾ ಫುಲೆ ವಿಷಯವನ್ನು ಪಠ್ಯ ಪುಸ್ತಕದಲ್ಲಿ ಸೇರಿಸಿದ್ದೇವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸಾವಿತ್ರಿ ಬಾ ಫುಲೆ ವಿಷಯ ಸೇರಿಸಿದ್ದೇವೆ. ನೀ ಹೋದ ಮರು ದಿನ ಅದನ್ನ ಸೇರಿಸಿದ್ದೀವಿ. ಮಗಳಿಗೆ ಬರೆದ ಪತ್ರ, ನೆಹರು ಅವರದ್ದೂ ಸೇರಿಸಿದ್ದೀವಿ. ಹೆಡಗೇವಾರ್ ಪಠ್ಯ ತೆಗೆದಿದ್ದೇವೆ. ಚಕ್ರವರ್ತಿ ಸೂಲಿಬೆಲೆ, ಸಾವರ್ಕರ್ ಪಠ್ಯ ಕೈಬಿಡಲಾಗಿದೆ ಎಂದು ತಿಳಿಸಿದ್ದಾರೆ.

ಶಿಕ್ಷಕರು ಏನು ಹೇಳಿಕೊಡಬೇಕು ಅಂತಾ ತಿಳಿಸಿದ್ದೇವೆ. ಮಕ್ಕಳ ಭವಿಷ್ಯಕ್ಕಾಗಿ ಒಳ್ಳೆಯ ಸಮಿತಿ ಮಾಡಲು ಸಿಎಂ ಹೇಳಿದ್ದಾರೆ. ಹತ್ತು ದಿನದೊಳಗೆ ಸಮಿತಿ ರಚಿಸಿ ಸಿಎಂಗೆ ಹೇಳ್ತೇವೆ. ತಜ್ಞರು ಹೇಳಿದ ನಂತ್ರ ಮುಂದೆ ಬದಲಾವಣೆ ಇರುತ್ತೆ. ಕೆಲವು ಕಟು ಪದಗಳನ್ನ ಕೈಬಿಡಲು ಹೇಳಲಾಗಿದೆ. ಟಿಪ್ಪು ವಿಚಾರ ಅದೇನೂ ಚರ್ಚೆ ಆಗಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆಗೆ ನಾಳೆಯಿಂದಲೇ ಅರ್ಜಿ ಸಲ್ಲಿಕೆ ಆರಂಭ

ಪುಸ್ತಕಗಳು ಮಕ್ಕಳ ಕೈಗೆ ಸೇರಿವೆ

ಪಠ್ಯ ಪುಸ್ತಕ ಪರಿಷ್ಕರಣೆ ಆದಷ್ಟು ಬೇಗ ಮಾಡಲು ತೀರ್ಮಾನ ಮಾಡಿದ್ದೆವು. ಈಗಾಗಲೇ ಪುಸ್ತಕಗಳು ಮಕ್ಕಳ ಕೈಗೆ ಹೋಗಿದೆ. ಮಕ್ಕಳಿಗೆ ಅವಶ್ಯಕತೆ ಇರೋದನ್ನ ಮಾತ್ರ ಹೇಳಿಕೊಡ್ತಾರೆ. ಅನಗತ್ಯ ಪಠ್ಯ ತೆಗೆದು ಹಾಕಲಾಗುತ್ತೆ. ದಳವಾಯಿ, ರವೀಶ್, ಟಿ.ಆರ್ ಚಂದ್ರಶೇಖರ್, ಅಶ್ವಥ್ ನಾರಾಯಣ್ ಸೇರಿ ಐವರ ಕಮಿಟಿ ರಚನೆ ಮಾಡಿದ್ದೆವು ಎಂದಿದ್ದಾರೆ.

ಪದಗಳ ಬದಲಾವಣೆ, ವಾಕ್ಯ ಬದಲಾವಣೆ ಆಗಬೇಕು ಅಂದರು. ಅದಕ್ಕೆಲ್ಲಾ ಬಹಳ ಟೈಮ್ ಬೇಕು. ಸಪ್ಲಿಮೆಂಟರಿ ಬುಕ್ ಗಳನ್ನ ಶಾಲೆಗಳಿಗೆ ಕಳಿಸಿದ್ದೇವೆ. 75 ಸಾವಿರ ಶಾಲೆಗಳಿಗೆ ಬುಕ್ ಕಳಿಸಲು ಅಪ್ರೂವಲ್ ಆಗಿದೆ ಎಂದು ಮಧು ಬಂಗಾರಪ್ಪ ಮಾಹಿತಿ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments