Sunday, August 24, 2025
Google search engine
HomeUncategorized5 ಗ್ಯಾರಂಟಿ ಈ ಆರ್ಥಿಕ ವರ್ಷದಲ್ಲೇ ಜಾರಿ : ಸಿಎಂ ಸಿದ್ದರಾಮಯ್ಯ

5 ಗ್ಯಾರಂಟಿ ಈ ಆರ್ಥಿಕ ವರ್ಷದಲ್ಲೇ ಜಾರಿ : ಸಿಎಂ ಸಿದ್ದರಾಮಯ್ಯ

ಬೆಂಗಳೂರು : ನಾವು ಘೋಷಿಸಿದ್ದ ಐದು ಉಚಿತ ಗ್ಯಾರಂಟಿಗಳನ್ನು ಈ ಆರ್ಥಿಕ ವರ್ಷದಲ್ಲೇ ಜಾರಿಗೊಳಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.

ಕ್ಯಾಬಿನೆಟ್ ಸಭೆ ಬಳಿಕ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರು, ನಾವು ವಿಧಾನಸಭಾ ಚುನಾವನೆ ಸಂದರ್ಭದಲ್ಲಿ ಹಾಗೂ ಅದಕ್ಕೂ ಮುನ್ನ ಪಕ್ಷದ ವತಿಯಿಂದ 5 ಗ್ಯಾರಂಟಿ ಘೋಷಣೆ ಮಾಡಿದ್ದೆವು. ನಾನು ಹಾಗೂ ಕೆಪಿಸಿಸಿಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಗ್ಯಾರಂಟಿ ಕಾರ್ಡ್ ಗಲಿಗೆ ಸಹಿ ಮಾಡಿದ್ದೇವು. ಜನರಿಗೆ ಉಚಿತ ಗ್ಯಾರಂಟಿ ತಲುಪಿಸುತ್ತೇವೆ ಎಂದು ಹೇಳಿದ್ದೆವು ಎಂದು ಹೇಳಿದರು.

ವಿರೋಧ ಪಕ್ಷಗಳು ಹಾಗೂ ಮಾಧ್ಯಮಗಳು ಏನು ಅನಿಸುತ್ತದೆಯೋ ಅದನ್ನು ಹೇಳಿದ್ದೀರಿ. ಊಹಾಪೋಹಗಳನ್ನು ಮಾಡಿದ್ದೀರಿ. ಆದರೆ, ಕ್ಯಾಬಿನೆಟ್ ಏನು ತೀರ್ಮಾನ ಮಾಡುತ್ತದೆಯೋ ಅದೇ ಅಂತಿಮ. ನಾನು, ಡಿಕೆಶಿ ಹಾಗೂ ಎಂಟು ಮಂತ್ರಿಗಲು ಪ್ರಮಾಣವಚನ ಸ್ವೀಕಾರ ಮಾಡಿದ್ದೆವು. ಅಂದು ಐದು ಗ್ಯಾರಂಟಿಗಳನ್ನು ಜಾರಿಗೊಳಿಸುತ್ತೇವೆ ಎಂದು ಅಂದೇ ತಾತ್ವಿಕ ಆದೇಶವನ್ನು ಕೊಟ್ಟಿದ್ದೆವು ಎಂದು ತಿಳಿಸಿದರು.

ಈ ಕ್ಯಾಬಿನೆಟ್ ಮೀಟಿಂಗ್ ಕರೆದಿದ್ದು ವಿಶೇಷವಾಗಿ ಐದು ಗ್ಯಾರಂಟಿಗಳ ಜಾರಿ ಬಗ್ಗೆ ಚರ್ಚಿಸಲು. ಐದು ಗ್ಯಾರಂಟಿಗಳ ಬಗ್ಗೆ ಸುಧೀರ್ಘವಾಗಿ ಚರ್ಚೆ ಮಾಡಿದ್ದೇವೆ. ಐದು ಗ್ಯಾರಂಟಿಗಳನ್ನು ಈ ಆರ್ಥಿಕ ವರ್ಷದಲ್ಲಿ ಜಾರಿಗೊಳಿಸಬೇಕು ಎಂದು ತೀರ್ಮಾನ ಮಾಡಿದ್ದೇವೆ. ಯಾವುದೇ ಜಾತಿ, ಯಾವುದೇ ಧರ್ಮ, ಯಾವುದೇ ಭಾಷೆ ಎಂಬ ಬೇದಭಾವವಿಲ್ಲದೆ ಸರ್ವರಿಗೂ ಕೊಡಲಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.

ಗ್ಯಾರಂಟಿ ನಂ.1

  • ಜುಲೈ 1ರಿಂದ ಗೃಹ ಜ್ಯೋತಿ ಜಾರಿ, ಬಾಕಿ ಬಿಲ್ ನೀವೇ ಕಟ್ಟಬೇಕು
  • ಜುಲೈ ಒಂದರಿಂದ ಗೃಹಜ್ಯೋತಿ ಜಾರಿ
  • ಜುಲೈವರೆಗಿನ ವಿದ್ಯುತ್​ ಬಿಲ್​ಅನ್ನು ಅವರೇ ಕಟ್ಟಬೇಕು
  • 199 ಯೂನಿಟ್​ ವಿದ್ಯುತ್ ಬಳಸಿದ್ರೂ ಫ್ರೀ
  • 12 ತಿಂಗಳ ಸರಾಸರಿ ಬಳಕೆ ಆಧಾರದ ಮೇಲೆ ವಿದ್ಯುತ್​ ಬಿಲ್​​
  • ಯಾರು ಎಷ್ಟು ಬಳಕೆ ಮಾಡ್ತಾರೆ ಅನ್ನೋದರ ಮೇಲೆ ತೀರ್ಮಾನ
  • ಜುಲೈ 1ರಿಂದ ಪ್ರತಿ ಮನೆಗೂ ಉಚಿತ ವಿದ್ಯುತ್​​​
  • ಜುಲೈ 1ರವರೆಗಿನ ಬಾಕಿ ವಿದ್ಯುತ್​​ ಬಿಲ್​​ ಪಾವತಿಸಲೇಬೇಕು
  • ಬಾಡಿಗೆದಾರರಿಗೂ ಉಚಿತ ವಿದ್ಯುತ್

ಗೃಹ ಜ್ಯೋತಿ-200 ಯೂನಿಟ್ ವರೆಗೆ ಉಚಿತವಾಗಿ ವಿದ್ಯುತ್ ಕೊಡುತ್ತೇವೆ. ಎಲ್ಲರಿಗೂ ಉಚಿತವಾಗಿ ಕೊಡುತ್ತೇವೆ ಎಂದು ವಾಗ್ದಾನ ಕೊಟ್ಟಿದ್ದೇವೆ. ಈ ಗ್ಯಾರಂಟಿ ಜಾರಿಗೊಳಿಸಲು ನಾವು ನಿರ್ಧರಿಸಿದ್ದೇವೆ ಎಂದು ಸಿದ್ದರಾಮಯ್ಯ ಘೋಷಿಸಿದರು.

ಗ್ಯಾರಂಟಿ ನಂ.2

  • ಆಗಸ್ಟ್ 15ರಂದು  ಗೃಹ ಲಕ್ಷ್ಮಿ ಯೋಜನೆ ಜಾರಿಗೊಳಿಸಲಾಗುತ್ತದೆ
  • ಯಾವುದೇ ಷರತ್ತು ಇಲ್ಲದೇ ಗೃಹ ಲಕ್ಷ್ಮಿ ಜಾರಿ
  • ಪ್ರತಿ ತಿಂಗಳು ಮನೆಯೊಡತಿಗೆ 2000 ರೂ. ಜಮೆ
  • ಜೂನ್​ 1 ರಿಂದ ಜುಲೈ 15 ರವರೆಗೆ ಅರ್ಜಿ ಸಲ್ಲಿಸಬೇಕು
  • ಆಗಸ್ಟ್​​ 15ರಿಂದ ಗೃಹ ಲಕ್ಷ್ಮೀ ಜಾರಿ
  • ಸ್ವಾತಂತ್ರ್ಯ ದಿನಾಚರಣೆಯ ದಿನ ಗೃಹಲಕ್ಷ್ಮೀ ಜಾರಿ
  • ಎಪಿಎಲ್​ ಅಂಡ್​ ಬಿಪಿಎಲ್​ ಇಬ್ಬರಿಗೂ ಗೃಹಲಕ್ಷ್ಮೀ
  • ಪಿಂಚಣಿ ಜೊತೆಗೆ 2000 ರೂಪಾಯಿ ಕೊಡ್ತೀವಿ
  • ಪಿಂಚಣಿ ಪಡೆಯುತ್ತಿರುವವರೂ ಗೃಹಲಕ್ಷ್ಮಿಗೆ ಅರ್ಹರು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments