Sunday, August 24, 2025
Google search engine
HomeUncategorizedಅಲ್ಲು ಅರ್ಜುನ್ ಸಾಹಸ : ಅಮೀರ್ ಪೇಟ್ ನಲ್ಲಿ 'AAA ಸಿನಿಮಾಸ್' ಮಾಲೀಕರಾಗ್ತಿದ್ದಾರೆ ಪುಷ್ಪ ಸ್ಟಾರ್

ಅಲ್ಲು ಅರ್ಜುನ್ ಸಾಹಸ : ಅಮೀರ್ ಪೇಟ್ ನಲ್ಲಿ ‘AAA ಸಿನಿಮಾಸ್’ ಮಾಲೀಕರಾಗ್ತಿದ್ದಾರೆ ಪುಷ್ಪ ಸ್ಟಾರ್

ಬೆಂಗಳೂರು : ಪ್ರಿನ್ಸ್ ಮಹೇಶ್ ಬಾಬು ಹಾಗೂ ವಿಜಯ್ ದೇವರಕೊಂಡ ಬೆನ್ನಲ್ಲಿ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಕೂಡ ಆ ಸಾಹಸಕ್ಕೆ ಕೈ ಹಾಕಿದ್ದಾರೆ. ಅದು ಡಾರ್ಲಿಂಗ್ ಪ್ರಭಾಸ್​ ಅವರ ಆದಿಪುರುಷ್ ಶುಭಾರಂಭ ಆಗ್ತಿದ್ದು, ಎಲ್ಲರ ಚಿತ್ತ ಹೈದ್ರಾಬಾದ್​ನ ಅಮೀರ್​ಪೇಟ್ ಮೇಲೆ ನೆಟ್ಟಿದೆ.

ಹೌದು, ಪುಷ್ಪ ಚಿತ್ರದಿಂದ ನ್ಯಾಷನಲ್ ಸ್ಟಾರ್ ಆಗಿ ಧೂಳೆಬ್ಬಿಸ್ತಿರೋ ಅಲ್ಲು ಅರ್ಜುನ್, ಇದೀಗ ಪುಷ್ಪ ಸೀಕ್ವೆಲ್​​ನಲ್ಲಿ ಬ್ಯುಸಿ ಆಗಿದ್ದಾರೆ. ಸುಕುಮಾರ್ ಜೊತೆ ಪುಷ್ಪ ಚಾಪ್ಟರ್-2 ಶೂಟಿಂಗ್​ನ ಜೊತೆಯಲ್ಲೇ ಮತ್ತೊಂದು ಸಾಹಸಕ್ಕೆ ಕೈ ಹಾಕಿರೋ ಐಕಾನ್ ಸ್ಟಾರ್, ಪ್ರದರ್ಶಕರ ವಲಯಕ್ಕೂ ಲಗ್ಗೆ ಇಟ್ಟಿದ್ದಾರೆ. ಅರ್ಥಾತ್ ಸಿನಿಮಾ ಥಿಯೇಟರ್​ನ ಮಾಲೀಕರಾಗುತ್ತಿದ್ದಾರೆ.

ಅಲ್ಲು ಅರ್ಜುನ್ ಅವರು AAA ಸಿನಿಮಾಸ್ ಟೈಟಲ್​ನಲ್ಲಿ ಹೈದ್ರಾಬಾದ್​ನ ಅಮೀರ್​ಪೇಟ್​​ನಲ್ಲಿ ಬಿಗ್ಗೆಸ್ಟ್ ಮಲ್ಟಿಪ್ಲೆಕ್ಸ್ ಶುಭಾರಂಭ ಮಾಡ್ತಿದ್ದಾರೆ. AAA ಅಂದ್ರೆ ‘ಏಷ್ಯನ್ ಅಲ್ಲು ಅರ್ಜುನ್ ಸಿನಿಮಾಸ್’ ಎಂದರ್ಥ. ಅಂದಹಾಗೆ ಏಷ್ಯನ್ ಸಿನಿಮಾಸ್ ಗ್ರೂಪ್ ಜೊತೆ ಕೈ ಜೋಡಿಸಿರೋ ಸ್ಟೈಲಿಶ್ ಸ್ಟಾರ್, ಪ್ರಿನ್ಸ್ ಮಹೇಶ್ ಬಾಬು ಹಾಗೂ ವಿಜಯ್ ದೇವರಕೊಂಡ ಶೈಲಿಯಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದಾರೆ.

ಆದಿಪುರುಷ್ ಮೊದಲ ಚಿತ್ರವಾಗಿ ಪ್ರದರ್ಶನ

ಈಗಾಗ್ಲೇ ಮಹೇಶ್ ಬಾಬು ಅವರ AMB, ವಿಜಯ್ ದೇವರಕೊಂಡ ಅವರ AVD ಮಲ್ಟಿಪ್ಲೆಕ್ಸ್​ಗಳು ಸಕ್ಸಸ್​ಫುಲ್ ಆಗಿ ರನ್ ಆಗುತ್ತಿವೆ. ಪ್ರಿನ್ಸ್, ದೇವರಕೊಂಡ ಬಳಿಕ ಅಲ್ಲು ಅರ್ಜುನ್ ಕೂಡ ಸಿನಿಮಾ ಥಿಯೇಟರ್ ಫೀಲ್ಡ್​ಗೆ ಕಾಲಿಡುತ್ತಿದ್ದು, ಅದರಲ್ಲಿ ಇದೇ ಜೂನ್ 16ಕ್ಕೆ ರಿಲೀಸ್ ಆಗುತ್ತಿರುವ ಬಹುನಿರೀಕ್ಷಿತ ಆದಿಪುರುಷ್ ಸಿನಿಮಾ ಮೊದಲ ಚಿತ್ರವಾಗಿ ಪ್ರದರ್ಶನವಾಗಲಿದೆಯಂತೆ.

ಡಾರ್ಲಿಂಗ್ ಅಂಡ್ ಟೀಂ ಫುಲ್ ಖುಷ್

ಡಾರ್ಲಿಂಗ್ ಪ್ರಭಾಸ್ ಟಾಲಿವುಡ್ ಅಂಗಳದಲ್ಲಿ ಒಂಥರಾ ಅಜಾತಶತ್ರು. ಹಾಗಾಗಿ, ಅಲ್ಲು ಅರ್ಜುನ್​ರ ಮಲ್ಟಿಪ್ಲೆಕ್ಸ್​​ನಲ್ಲಿ ಪ್ಯಾನ್ ಇಂಡಿಯಾ ರಿಲೀಸ್ ಆಗ್ತಿರೋ ಆದಿಪುರುಷ್ ಸಿನಿಮಾ ಶೋ ಮೂಲಕ ಥಿಯೇಟರ್​ಗೆ ಚಾಲನೆ ನೀಡಲಿದ್ದಾರೆ ಐಕಾನ್ ಸ್ಟಾರ್. ಇದು ಪ್ರಭಾಸ್ ಸೇರಿದಂತೆ ಆದಿಪುರುಷ್​ನಲ್ಲಿ ನಟಿಸಿರೋ ಕೃತಿ ಸನನ್, ಸೈಫ್ ಅಲಿ ಖಾನ್, ಓಂ ರಾವತ್ ಹಾಗೂ ಬಾಲಿವುಡ್ ಮಂದಿಗೂ ಖುಷಿ ಕೊಟ್ಟಿದೆ.

ರಘುಕುಲ ರಾಮನ ಕಥಾನಕ

ನ್ಯಾಷನಲ್ ಅವಾರ್ಡ್​ ವಿನ್ನರ್ ಓಂ ರಾವತ್ ಸಾರಥ್ಯದ ಆದಿಪುರುಷ್, ಶ್ರೀರಾಮಾಯಣದಲ್ಲಿ ಸೀತಾಪಹರಣ, ರಾಮ-ರಾವಣನ ಕದನ, ರಾಮಭಂಟ ಹನುಮನ ಕಥೆಯನ್ನ ಹೇಳಲಿದೆ. ಈಗಾಗಲೇ ಟೀಸರ್, ಟ್ರೈಲರ್ ಹಾಗೂ ಸಾಂಗ್ಸ್ ನೋಡುಗರಲ್ಲಿ ಸಿನಿಮಾ ಮೇಲಿನ ನಿರೀಕ್ಷೆ ಡಬಲ್ ಮಾಡಿದ್ದು, ರಘುಕುಲ ರಾಮನ ಕಥಾನಕ ಇಂದಿನ ಜನರೇಷನ್​ಗೆ ಉಣಬಡಿಸಲಿದೆ.

ಈಗಾಗ್ಲೇ ಆಹಾ ಅನ್ನೋ ಓಟಿಟಿ ಪ್ಲಾಟ್​ಫಾರ್ಮ್​ ಆರಂಭಿಸಿ, ಹೊಸ ಪ್ರತಿಭೆಗಳಿಗೆ ಅವಕಾಶಗಳನ್ನು ನೀಡುತ್ತಿರುವ ಅಲ್ಲು ಅರ್ಜುನ್, AAA ಸಿನಿಮಾಸ್​​ನಿಂದ ಲೋ ಬಜೆಟ್ ಚಿತ್ರಗಳ ರಿಲೀಸ್​ಗೂ ಸಾಥ್ ನೀಡಲಿದ್ದಾರೆ. ಪುಷ್ಪ ಸ್ಟಾರ್ ತೆಗೆದುಕೊಂಡ ಈ ನಿರ್ಧಾರಕ್ಕೆ ಇಡೀ ಟಾಲಿವುಡ್ ದಿಲ್​ಖುಷ್ ಆಗಿದ್ದು, ನಮ್ಮ ಕನ್ನಡದ ಸ್ಟಾರ್ಸ್​ ಯಾವಾಗ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೋ ಗೊತ್ತಿಲ್ಲ.

  • ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments