Saturday, August 23, 2025
Google search engine
HomeUncategorizedಸಿದ್ದರಾಮಯ್ಯ ಸಂಪುಟದಲ್ಲಿ ಲಿಂಗಾಯತರಿಗೆ ಸಿಂಹಪಾಲು : 8 ಶಾಸಕರಿಗೆ ಮಂತ್ರಿ ಭಾಗ್ಯ

ಸಿದ್ದರಾಮಯ್ಯ ಸಂಪುಟದಲ್ಲಿ ಲಿಂಗಾಯತರಿಗೆ ಸಿಂಹಪಾಲು : 8 ಶಾಸಕರಿಗೆ ಮಂತ್ರಿ ಭಾಗ್ಯ

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಮುಂದಿನ ಲೋಕಸಭಾ ಚುನಾವಣೆಯ ದಿಕ್ಸೂಚಿ. ಹೀಗಾಗಿ, ಕಾಂಗ್ರೆಸ್ ಪಕ್ಷ ಜಾತಿವಾರು, ಪ್ರಾದೇಶಿಕವಾರು ಲೆಕ್ಕಾಚಾರದಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡಿದೆ. ರಾಜ್ಯದ ಪ್ರಬಲ ಸಮುದಾಯವಾಗಿರೋ ಲಿಂಗಾಯತರಿಗೆ ಹೆಚ್ಚು ಮನ್ನಣೆ ನೀಡಿದೆ.

ಹೌದು,135 ಸ್ಥಾನವನ್ನು ಗೆದ್ದು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷ, ಅಳೆದು ತೂಗಿ ಸಚಿವ ಸಂಪುಟ ವಿಸ್ತರಣೆ ಕಗ್ಗಂಟು ಬಗೆಹರಿಸಿದೆ. ಸಿದ್ದರಾಮಯ್ಯ ಸಂಪುಟದ 24 ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಿದ್ದಾರೆ.

ಸಚಿವ ಸಂಪುಟ ರಚನೆಗೂ ಮುನ್ನ ತಮ್ಮ ಸಮುದಾಯಕ್ಕೆ ಐದಾರು ಸಚಿವ ಸ್ಥಾನ ಸಿಗುತ್ತದೆ ಎಂದು ವೀರಶೈವ ಲಿಂಗಾಯತರು ನಿರೀಕ್ಷೆಯಲ್ಲಿದ್ದರು. ಆದರೆ, ಏಳು ಸಚಿವ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್, ಲಿಂಗಾಯತ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ನೀಡಿದೆ.

ಲಿಂಗಾಯತದ ಸಮುದಾಯದ ಎಸ್​.ಎಸ್​ ಮಲ್ಲಿಕಾರ್ಜುನ್, ಈಶ್ವರ ಖಂಡ್ರೆ, ಲಕ್ಷ್ಮೀ ಹೆಬ್ಬಾಳ್ಕರ್, ಶರಣಪ್ರಕಾಶ ಪಾಟೀಲ್, ಶರಣ ಬಸಪ್ಪ ದರ್ಶನಾಪುರ ಮತ್ತು ಶಿವಾನಂದ್ ಪಾಟೀಲ್​ಗೆ ಮಂತ್ರಿಭಾಗ್ಯ ಒಲಿದಿದೆ. ಬಬಲೇಶ್ವರದ ಎಂ.ಬಿ.ಪಾಟೀಲ್ ಅವರೂ ಸಹ ಲಿಂಗಾಯತ ಸಮುದಾಯಕ್ಕೆ ಸೇರಿದ್ದಾರೆ. ಗದಗದ ಎಚ್‌.ಕೆ.ಪಾಟೀಲ್ ಸ್ಥಳೀಯವಾಗಿ ಲಿಂಗಾಯತರೇ ಎಂದು ಪರಿಗಣಿತರಾಗಿದ್ದಾರೆ.

ಇದನ್ನೂ ಓದಿ : ಸಿದ್ದು ಸಂಪುಟದಲ್ಲಿ ಹಲವರಿಗೆ ಸಚಿವ ಸ್ಥಾನ ಮಿಸ್

ಜಗದೀಶ್ ಶೆಟ್ಟರ್ ಗೆ ಎಂಪಿ ಟಿಕೆಟ್?

ಲಿಂಗಾಯತ ಸಮುದಾಯದ 8 ಶಾಸಕರಲ್ಲಿ ಎಲ್ಲಾ ಉಪಜಾತಿಗಳು ಮತ್ತು ಪ್ರದೇಶಗಳಿಗೆ ಅವಕಾಶ ಕಲ್ಪಿಸಲು ಪ್ರಯತ್ನಿಸಲಾಗಿದೆ. ಜಗದೀಶ್ ಶೆಟ್ಟರ್ ಅವರಿಗೆ ಅವಕಾಶ ನೀಡಿದರೆ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಅನುಕೂಲವಾಗಬಹುದು ಎಂಬ ಲೆಕ್ಕಾಚಾರವಿದೆ. ಲಿಂಗಾಯತರು ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದಾರೆ.

ಸದ್ಯ, ಮುಖ್ಯಮಂತ್ರಿ ಸಿದ್ದರಾಮಯ್ಯ ಸಾರಥ್ಯದ ಸಂಪುಟದಲ್ಲಿ ಲಿಂಗಾಯತರಿಗೆ ಹೆಚ್ಚಿನ ಆದ್ಯತೆ ನೀಡಿರೋದ್ರಿಂದ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಬೆಂಬಲಿಸುವ ಸಾಧ್ಯತೆಯಿದೆ.

ಮಂತ್ರಿಗಿರಿ ಗಿಟ್ಟಿಸಿಕೊಂಡ ನಾಯಕರು

  1. ಎಸ್​.ಎಸ್​.ಮಲ್ಲಿಕಾರ್ಜುನ್, ದಾವಣಗೆರೆ ಉತ್ತರ
  2. ಈಶ್ವರ ಖಂಡ್ರೆ, ಭಾಲ್ಕಿ
  3. ಲಕ್ಷ್ಮೀ ಹೆಬ್ಬಾಳ್ಕರ್​, ಬೆಳಗಾವಿ ಗ್ರಾಮೀಣ
  4. ಶರಣಪ್ರಕಾಶ ಪಾಟೀಲ್, ಸೇಡಂ
  5. ಶರಣ ಬಸಪ್ಪ ದರ್ಶನಾಪುರ್​, ಶಹಾಪುರ
  6. ಶಿವಾನಂದ್ ಪಾಟೀಲ್, ಬಸವನಬಾಗೇವಾಡಿ
  7. ಎಂ.ಬಿ.ಪಾಟೀಲ್, ಬಬಲೇಶ್ವರ
  8. ಹೆಚ್‌.ಕೆ.ಪಾಟೀಲ್, ಗದಗ
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments