Sunday, August 24, 2025
Google search engine
HomeUncategorizedಖ್ಯಾತ ಲೇಖಕ ಜಿ.ಹೆಚ್ ನಾಯಕ್ ನಿಧನ : ಸಿಎಂ ಸಿದ್ದರಾಮಯ್ಯ ಸಂತಾಪ

ಖ್ಯಾತ ಲೇಖಕ ಜಿ.ಹೆಚ್ ನಾಯಕ್ ನಿಧನ : ಸಿಎಂ ಸಿದ್ದರಾಮಯ್ಯ ಸಂತಾಪ

ಬೆಂಗಳೂರು : ಕನ್ನಡದ ಖ್ಯಾತ ಲೇಖಕ ಹಾಗೂ ವಿಮರ್ಶಕ ಜಿ.ಹೆಚ್ ನಾಯಕ್ (88) ಅವರು ಇಂದು ಅನಾರೋಗ್ಯದಿಂದ ಮೈಸೂರಿನ ಕುವೆಂಪು ನಗರದ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.

ಜಿ.ಹೆಚ್ ನಾಯಕ್ ಅವರ ಅಗಲಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಪ್ರಸಿದ್ಧ ಸಾಹಿತಿ ಪ್ರೊ.ಜಿ.ಹೆಚ್ ನಾಯಕ್ ಅವರ ಅಗಲಿಕೆ ನನಗೆ ಆಘಾತವನ್ನುಂಟು‌ ಮಾಡಿದೆ ಎಂದು ಹೇಳಿದ್ದಾರೆ.

ನನ್ನ ಆತ್ಮೀಯರು ಮತ್ತು ಹಿತಚಿಂತಕರಾಗಿದ್ದ ಜಿ.ಹೆಚ್.ನಾಯಕ್ ಬರವಣಿಗೆಯ ಜೊತೆಗೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಳುವಳಿಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡು ಹೊಸ ತಲೆಮಾರನ್ನು ಪ್ರಭಾವಿಸಿದವರು.ಅವರ ಕುಟುಂಬ ಮತ್ತು ಅಭಿಮಾನಿಗಳ ದುಃಖದಲ್ಲಿ ನಾನು ಭಾಗಿಯಾಗಿದ್ದೇನೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಅಶ್ವತ್ಥನಾರಾಯಣ ವಿರುದ್ಧ ಮೈಸೂರಿನಲ್ಲಿ FIR ದಾಖಲು

ಕನ್ನಡ ಪ್ರಾಧ್ಯಾಪಕರಾಗಿ ಸೇವೆ

ಜಿ.ಹೆಚ್.ನಾಯಕ್ ಅವರು ಕನ್ನಡ ಸಾಹಿತ್ಯದ ವಿಮರ್ಶೆ, ವಿಶ್ಲೇಷಣೆ ಹಾಗೂ ಬರಹಲೋಕದ ಅಪರೂಪದ ವ್ಯಕ್ತಿ. ಪ್ರಗತಿಪರ ಚಿಂತಕರು,  ಸೌಜನ್ಯಶೀಲ, ನಿಷ್ಠುರ ವಿಮರ್ಶಕರಾದ ನಾಯಕ್ ಅವರು ಪೂರ್ವಾಗ್ರಹವಿಲ್ಲದ ಅಪ್ಪಟ ಮಾನವೀಯ ಮನಸ್ಸುಳ್ಳವರಾಗಿದ್ದರು. ನಾಯಕ್ ಅವರು ಮೈಸೂರು ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಹಂಪಿ ಹಾಗೂ ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕಾವ್ಯಾಧ್ಯಯನ ಪೀಠದ ಸಂದರ್ಶ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಸಮಕಾಲೀನ, ಅನಿವಾರ್ಯ ನಿರಪೇಕ್ಷ ಸೇರಿದಂತೆ ಹಲವಾರು ವಿಮರ್ಶಾ ಕೃತಿಗಳು ಹಾಗೂ ಸಾಹಿತ್ಯ ಕೃತಿಗಳನ್ನು ಸಂಪಾದಿಸಿದ ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅತ್ಯುತ್ತಮ ಸಾಹಿತ್ಯ ವಿಮರ್ಶೆ ಪ್ರಶಸ್ತಿಯನ್ನು ಒಳಗೊಂಡಂತೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments