Wednesday, August 27, 2025
Google search engine
HomeUncategorized'ಮಂಡ್ಯ ಈಸ್ ಇಂಡಿಯಾ' ಹೇಳಿಕೆಗಷ್ಟೇ ಸೀಮಿತವಾಗಬಾರದು : ಅಶೋಕ್ ಜಯರಾಮ್

‘ಮಂಡ್ಯ ಈಸ್ ಇಂಡಿಯಾ’ ಹೇಳಿಕೆಗಷ್ಟೇ ಸೀಮಿತವಾಗಬಾರದು : ಅಶೋಕ್ ಜಯರಾಮ್

ಬೆಂಗಳೂರು : ‘ಮಂಡ್ಯ ಈಸ್ ಇಂಡಿಯಾ’ ಹೇಳಿಕೆಗಷ್ಟೇ ಸೀಮಿತವಾಗಬಾರದು ಎಂದು ಮಂಡ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಶೋಕ್ ಜಯರಾಮ್ ಅಭಿಪ್ರಾಯಪಟ್ಟಿದ್ದಾರೆ.

ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯದ್ದೇ ಅಬ್ಬರ. ಅಭ್ಯರ್ಥಿ ಅಶೋಕ್ ಜಯರಾಮ್ ಹಾಗೂ ಡಾ. ಪರಮೇಶ್ ಇಂದು ಮಂಡ್ಯ ನಗರದಲ್ಲಿ ಅಬ್ಬರದ ಪ್ರಚಾರ ಕೈಗೊಂಡರು.

ಮತಯಾಚನೆ ಸಂದರ್ಭದಲ್ಲಿ ಮಾತನಾಡಿರುವ ಅವರು, ತಂದೆಯವರ ಅಭಿವೃದ್ಧಿ ಕಾರ್ಯಗಳನ್ನು ಪ್ರಸ್ತಾಪಿಸಿದರು. ಇವತ್ತು ಬರೀ ಹೇಳಿಕೆಗಷ್ಟೇ ‘ಮಂಡ್ಯ ಈಸ್ ಇಂಡಿಯಾ’ ಅಂತಾ ಹೇಳುತ್ತಾ ಇರುತ್ತೇವೆ. ಆದರೆ, ಎಲ್ಲೋ ಒಂದುಕಡೆ ಅದರಲ್ಲಿ ಉರುಳಿಲ್ಲ ಅಂತಾ ನನಗೆ ಅನಿಸುತ್ತದೆ ಎಂದು ಅಶೋಕ್ ಜಯರಾಮ್ ಹೇಳಿದ್ದಾರೆ.

ಇದನ್ನೂ  ಓದಿ : ಅಶೋಕ್ ಜಯರಾಮ್ ಗೆಲ್ಲೋದ್ರಲ್ಲಿ ಯಾವುದೇ ಅನುಮಾನ ಬೇಡ : ಸುಮಲತಾ ಅಂಬರೀಶ್

ದಿಟ್ಟ ನಾಯಕತ್ವ ಕೊಟ್ಟಿದ್ದು ಜಯರಾಮ್

ಮಂಡ್ಯ ಜಿಲ್ಲೆ ಹಾಗೂ ಈ ಕ್ಷೇತ್ರಕ್ಕೆ ದಿಟ್ಟ ನಾಯಕತ್ವ ಕೊಟ್ಟಿದ್ದು ಜಯರಾಮ್ ಅವರು. ಇದೀಗ 25 ವರ್ಷಗಳು ಆಗಿದೆ. ಅಂತಹ ನಾಯಕತ್ವದ ಕೊರತೆ ಮಂಡ್ಯದ ಹೃದಯ ಭಾಗದಲ್ಲಿ ಕಾಣುತ್ತಿದೆ. ಕ್ಷೇತ್ರ ಸಮಗ್ರ ಅಭಿವೃದ್ಧಿ, ಉತ್ತಮ ನಾಯಕತ್ವಕ್ಕಾಗಿ ಬಿಜೆಪಿ ಪಕ್ಷಕ್ಕೆ ನೀವೆಲ್ಲರೂ ಬೆಂಬಲ ನೀಡಬೇಕು. ಬಿಜೆಪಿ ಪಕ್ಷಕ್ಕೆ ಮತ ಹಾಕಬೇಕು ಎಂದು ಮನವಿ ಮಾಡಿದ್ದಾರೆ.

ಕಮಲ ಅರಳೋದ್ರಲ್ಲಿ ಅನುಮಾನವಿಲ್ಲ

ಮತ್ತೊಂದೆಡೆ ಡಾ. ಪರಮೇಶ್ ನೇತೃತ್ವದಲ್ಲಿ ಹಲವಾರು ಮಂದಿ ನಗರಸಭೆ ಮಾಜಿ ಸದಸ್ಯರು ಬಿಜೆಪಿ ಸೇರ್ಪಡೆಗೊಂಡರು. ಜೆಡಿಎಸ್ ನ ಭದ್ರಕೋಟೆ ಮಂಡ್ಯ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಕಮಲ ಅರಳಿಸೋದ್ರಲ್ಲಿ ಯಾವುದೇ ಅನುಮಾನವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಂಡ್ಯದ ಪ್ರತೀ ವಾರ್ಡ್ ಗಳಲ್ಲೂ ಪ್ರಚಾರ ನಡೆಸಿದ ಅಶೋಕ್ ಜಯರಾಮ್ ಅವರಿಗೆ ಒಳ್ಳೆ ರೆಸ್ಪಾನ್ಸ್ ದೊರೆಯಿತು. ನಗರದ ವಾರ್ಡ್ ಗಳಲ್ಲಿರುವ ಹಲವಾರು ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ 10ನೇ ತಾರೀಖು ನಡೆಯುವ ಚುನಾವಣೆಯಲ್ಲಿ ಬೆಂಬಲಿಸುವಂತೆ ಮನವಿ ಮಾಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments