Sunday, August 24, 2025
Google search engine
HomeUncategorizedನಾಳೆ ರಾಜ್ಯಕ್ಕೆ ಮೋದಿ ಗ್ರ್ಯಾಂಡ್ ಎಂಟ್ರಿ : 'ಕರುನಾಡು ಕಬ್ಜ' ಮಾಡ್ತಾರಾ ನಮೋ!

ನಾಳೆ ರಾಜ್ಯಕ್ಕೆ ಮೋದಿ ಗ್ರ್ಯಾಂಡ್ ಎಂಟ್ರಿ : ‘ಕರುನಾಡು ಕಬ್ಜ’ ಮಾಡ್ತಾರಾ ನಮೋ!

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣಾ ಮತದಾನಕ್ಕೆ ಕೇವಲ 12 ದಿನಗಳಷ್ಟೇ ಬಾಕಿ ಉಳಿದಿದೆ. ಕರುನಾಡ ಮತದಾರರ ಮನಸ್ಸು ಗೆಲ್ಲಲು ಮೂರು ಪಕ್ಷಗಳ ಕಸರತ್ತು ನಡೆಸುತ್ತಿದ್ದಾರೆ. ಕಮಲ ಕಲಿಗಳ ಪರವಾಗಿ ಖುದ್ದು ಮೋದಿಯೇ ಮತ ಬೇಟೆಗೆ ಇಳಿದಿದ್ದಾರೆ.

ಹೌದು, ನಾಳೆ ಕರುನಾಡಲ್ಲಿ ಪ್ರಧಾನಿ ನರೇಂದ್ರ ಮೋದಿ‌ ಮೋಡಿ ಮಾಡಲಿದ್ದಾರೆ. ನಾಳೆಯಿಂದ ರಾಜ್ಯದಲ್ಲಿ ಮೋದಿ ಮೇನಿಯಾ ಆರಂಭವಾಗಲಿದೆ. ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮೋದಿ ಮತ ಬೇಟೆ ನಡೆಸಲಿದ್ದಾರೆ.

ಈಗಾಗಲೇ ಸಮಾವೇಶ ಮತ್ತು ರೋಡ್ ಶೋ ಮೂಲಕ  ಮತಯಾಚನೆಯ ಬ್ಲೂ ಪ್ರಿಂಟ್ ರೆಡಿ ಮಾಡಿರುವ ರಾಜ್ಯ ನಾಯಕರು ಮೋದಿ ಆಗಮನಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಮೊದಲು ಮೋದಿ ಉತ್ತರ ಕರ್ನಾಟಕ ಭಾಗದ ಮೂರು ಜಿಲ್ಲೆಗಳಲ್ಲಿ ಕ್ಯಾಂಪೇನ್ ಮಾಡಲಿದ್ದಾರೆ.

ಬೀದರ್, ವಿಜಯಪುರದಲ್ಲಿ ಅಬ್ಬರದ ಪ್ರಚಾರ

ನಾಳೆ (ಶನಿವಾರ) ಬೆಳಿಗ್ಗೆ 8.20ಕ್ಕೆ ದೆಹಲ್ಲಿ ವಿಮಾನ ನಿಲ್ದಾಣದಿಂದ ಹೊರಟು 10.20ಕ್ಕೆ ಬೀದರ್ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಮೋದಿ ಆಗಮಿಸಲಿದ್ದಾರೆ. ಅಲ್ಲಿಂದ ನೇರವಾಗಿ ಹೆಲಿಕಾಪ್ಟರ್ ಮೂಲಕ  10.50ಕ್ಕೆ ಹುಮ್ನಾಬಾದ್ ತಲುಪಲಿದ್ದಾರೆ. ಈ ವೇಳೆ ಹುಮ್ನಾಬಾದ್ ಹೆಲಿಪ್ಯಾಡ್ ನಿಂದ ರಸ್ತೆಯ ಮೂಲಕ ಸಾರ್ವಜನಿಕ ಸಭೆ ನಡೆಯುವ ಸ್ಥಳಕ್ಕೆ ಮೋದಿ ಭೇಟಿ ನೀಡಲಿದ್ದಾರೆ.

ಇದನ್ನೂ ಓದಿ : ನಾನು ಪ್ರಧಾನಿ ಮೋದಿಗೆ ‘ವಿಷದ ಹಾವು’ ಎಂದಿಲ್ಲ : ಉಲ್ಟಾ ಹೊಡೆದ ಖರ್ಗೆ

ಬೆಳಗ್ಗೆ 11 ಗಂಟೆಯಿಂದ 11.40  ರವರೆಗೂ ಹುಮನಾಬಾದ್‌ನಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಇದಾದ ಬಳಿಕ ವಿಜಯಪುರ ಕುಡುಚಿಯಲ್ಲಿ ಬೃಹತ್ ರೋಡ್ ಶೋ ಮೂಲಕ‌ ಪ್ರಧಾನಿ ಮೋದಿ ಪ್ರಚಾರ ಮಾಡಲಿದ್ದಾರೆ.

ಕೆಂಪೇಗೌಡ್ರು ಸ್ರಾಮ್ರಾಜ್ಯದಲ್ಲಿ ನಮೋ ಪ್ರಚಾರ

ಇನ್ನೂ, ಬೆಳಗಾವಿಯಿಂದ ಸಂಜೆ  5.30ಕ್ಕೆ ಬೆಂಗಳೂರು ಎಚ್ ಎ ಎಲ್ ಪ್ರಧಾನಿ ಮೋದಿ ಆಗಮಿಸಲಿದ್ದಾರೆ. ಈ ವೇಳೆ ಬೆಂಗಳೂರು ನಗರ ವ್ಯಾಪ್ತಿಯ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತಯಾಚನೆ ನಡೆಸಲಿದ್ದಾರೆ. ಬೆಂಗಳೂರು ನಗರ ಮತದಾರರ ಮನ ಗೆಲ್ಲಲು ಸಂಜೆ 6 ಗಂಟೆಗೆ ಮತ ಬೇಟೆ ನಡೆಸಲಿದ್ದಾರೆ. ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಮತ ಬೇಟೆ ನಡೆಸಲಿರುವ ಮೋದಿ ಮಾಗಡಿ ರೋಡ್ ನ ನೈಸ್ ರೋಡ್ ಜಂಕ್ಷನ್ ನಿಂದ ರೋಡ್ ಶೋ ನಡೆಸಲಿದ್ದಾರೆ. ಕೊನೆಗೆ ಮೋದಿಯ ರೋಡ್ ಶೋ ಸುಮನಹಳ್ಳಿ ಜಂಕ್ಷನ್ ನಲ್ಲಿ  ಅಂತ್ಯವಾಗಲಿದೆ.

ಬಳಿಕ, ಪ್ರಧಾನಿ ಮೋದಿ ರಾಜಭಾವನಕ್ಕೆ ತೆರಳಿ ರಾತ್ರಿ ಅಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಭಾನುವಾರ ಕೋಲಾರದಲ್ಲಿ ಮತ ಬೇಟೆ ನಡೆಸಲಿದ್ದು, ಕೇಸರಿ ಕಲಿಗಳಿಗೆ ಬೂಸ್ಟ್‌ ನೀಡಲಿದ್ದಾರೆ. ಒಟ್ನಲ್ಲಿ ಕರುನಾಡನ್ನು ಕಬ್ಜ ಮಾಡಲು ಮೋದಿ ಅಂಡ್ ಟೀಂ ರಾಜ್ಯದಲ್ಲಿ ಮತಬೇಟೆ ನಡೆಸಲಿದೆ.‌

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments