Saturday, August 23, 2025
Google search engine
HomeUncategorizedನನಗೆ ಅಧಿಕಾರಬೇಕಿಲ್ಲ, ಪಕ್ಷ ಕಟ್ಟಿದ 'ಕಾರ್ಯಕರ್ತರ ಮುಖದಲ್ಲಿ ನಗು ನೋಡಬೇಕು'

ನನಗೆ ಅಧಿಕಾರಬೇಕಿಲ್ಲ, ಪಕ್ಷ ಕಟ್ಟಿದ ‘ಕಾರ್ಯಕರ್ತರ ಮುಖದಲ್ಲಿ ನಗು ನೋಡಬೇಕು’

ಬೆಂಗಳೂರು : ನನಗೆ ಅಧಿಕಾರಬೇಕಿಲ್ಲ, ಪಕ್ಷ ಕಟ್ಟಿದ ಕಾರ್ಯಕರ್ತರ ಮುಖದಲ್ಲಿ ನಗು ನೋಡಬೇಕು ಎಂದು ಜೆಡಿಎಸ್ ಪಕ್ಷದ ಹಿರಿಯ ಮುಖಂಡ ಹಾಗೂ ವಕೀಲರಾದ ಕೆ.ವಿ.ಶಂಕರಣ್ಣ ಹೇಳಿದರು.

ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಮೃದ್ಧಿ ಮಂಜುನಾಥ್ ಅವರ ಪರ ಪ್ರಚಾರ ನಡೆಸಿ, ಮತಯಾಚನೆ ಮಾಡಿ ಅವರು ಮಾತನಾಡಿದರು.

ನಾನು ಅಧಿಕಾರಕ್ಕೆ ಆಸೆ ಪಡುವುದಿಲ್ಲ. ಆದರೆ ನಮ್ಮ ಪಕ್ಷವನ್ನು ಕಟ್ಟಿದ ಸ್ವಾಭಿಮಾನಿ ಕಾರ್ಯಕರ್ತರು ಪಕ್ಷದ ಕಟ್ಟಾಳುಗಳ ಮುಖದಲ್ಲಿ ನಗುವನ್ನು ನೋಡಬೇಕಿದೆ. ಅವರ ಮುಖದಲ್ಲಿ ಸಂತಸ ಕಾಣಲು ತಾಲ್ಲೂಕಿನ ಅಭಿವೃದ್ಧಿಗಾಗಿ ಈ ಬಾರಿ ನಮ್ಮ ಪಕ್ಷದ ಅಭ್ಯರ್ಥಿ ಸಮೃದ್ಧಿ ಮಂಜುನಾಥ್ ಅವರನ್ನು ಗೆಲ್ಲಿಸಿ ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.

ಇದನ್ನೂ ಓದಿ : ‘ಕುಮಾರಣ್ಣ ಸಿಎಂ’ ಆಗೋದನ್ನು ಯಾರಿಂದಲೂ ತಡೆಯೋಕೆ ಆಗಲ್ಲ : ನಾಪಂಡ ಮುತ್ತಪ್ಪ

ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ನೇತೃತ್ವದಲ್ಲಿ ಉತ್ತಮ ಸರ್ಕಾರ ನಿರ್ಮಾಣ ಆಗಲಿದೆ. ಸಮೃದ್ಧಿ ಮಂಜುನಾಥ್ ಅವರನ್ನು ಜಯಶಾಲಿ ಮಾಡುವ ಮೂಲಕ ಕುಮಾರಸ್ವಾಮಿ ಅವರ ಕೈ ಬಲಪಡಿಸಬೇಕು. ಮುಳಬಾಗಲು ಕ್ಷೇತ್ರದ ಅಭಿವೃದ್ಧಿಗೆ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಮತ ಹಾಕುವಂತೆ ಕೋರಿದರು.

ಪತಿ ಪರಪತ್ನಿ ಪದ್ಮಮತ ಬೇಟೆ

ಇದೇ ವೇಳೆ ಸಮೃದ್ಧಿ ಮಂಜುನಾಥ್ ಅವರ ಪರವಾಗಿ ಮಹಿಳೆಯರು ಮತ ಯಾಚನೆ ಮಾಡಿದರು. ಪಟ್ಟಣದಲ್ಲಿ ವಾರ್ಡ್ ವಾರು ಮಹಿಳೆಯರು ಪ್ರಚಾರ ಕೈಗೊಂಡರು. ಇವರಿಗೆ ದಿವಂಗತ ಆಲಂಗೂರು ಶ್ರೀನಿವಾಸ ಅವರ ಪುತ್ರಿ ಡಾ.ಭವಾನಿ ಮತ್ತು ಅಭ್ಯರ್ಥಿ ಸಮೃದ್ದಿ ಮಂಜುನಾಥ ಪತ್ನಿ ಪದ್ಮ ಮಂಜುನಾಥ್ ಅವರು ಸಾಥ್ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments