Sunday, August 24, 2025
Google search engine
HomeUncategorized'ಮಾದರಿ ಶಿಡ್ಲಘಟ್ಟ' ನನ್ನ ಕನಸು, ಅದನ್ನ ಮಾಡಿಯೇ ತೀರುತ್ತೇನೆ : ಸೀಕಲ್ ರಾಮಚಂದ್ರಗೌಡ

‘ಮಾದರಿ ಶಿಡ್ಲಘಟ್ಟ’ ನನ್ನ ಕನಸು, ಅದನ್ನ ಮಾಡಿಯೇ ತೀರುತ್ತೇನೆ : ಸೀಕಲ್ ರಾಮಚಂದ್ರಗೌಡ

ಬೆಂಗಳೂರು : ಮಾದರಿ ಶಿಡ್ಲಘಟ್ಟ ನನ್ನ ಕನಸು ಅದನ್ನು ಮಾಡಿಯೇ ತೀರುತ್ತೇವೆ ಎಂದು ಶಿಡ್ಲಘಟ್ಟ ಬಿಜೆಪಿ ಅಭ್ಯರ್ಥಿ ಸೀಕಲ್ ರಾಮಚಂದ್ರಗೌಡ ಅವರು ಭರವಸೆ ನೀಡಿದ್ದಾರೆ.

ಶಿಡ್ಲಘಟ್ಟ ಮತಕ್ಷೇತ್ರ ವ್ಯಾಪ್ತಿಯ ತಲಕಾಯಲ ಬೆಟ್ಟ ಮತ್ತು ಈ ತಿಮ್ಮಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಿರುಸಿನ ಪ್ರಚಾರ ನಡೆಸಿ ಮತದಾರರನ್ನುದ್ದೇಶಿಸಿ ಅವರು ಮಾತನಾಡಿದ್ದಾರೆ.

ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಜನತೆ ಏನು ಅಂತ ನನಗೆ ಅರ್ಥ ಆಗಿದೆ. ಮಾದರಿ ಶಿಡ್ಲಘಟ್ಟ ನನ್ನ ಕನಸು ಅದನ್ನ ಮಾಡಿಯೇ ತೀರುತ್ತೇವೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಬಿಜೆಪಿ ಪಕ್ಷವನ್ನು ಬೆಂಬಲಿ, ನನಗೆ ನಿಮ್ಮ ಆಶೀರ್ವಾದ ನೀಡಿ ಎಂದು ಸೀಕಲ್ ರಾಮಚಂದ್ರಗೌಡ ಅವರು ಮನವಿ ಮಾಡಿದ್ದಾರೆ.

ಇದನ್ನು ಓದಿ : ಶಿಡ್ಲಘಟ್ಟದಲ್ಲಿ ‘ಬಿಜೆಪಿ ಬಂದ್ರೆ ಅಭಿವೃದ್ಧಿ’ಗೆ ಆನೆಬಲ : ಸೀಕಲ್ ರಾಮಚಂದ್ರಗೌಡ

ಮಾಜಿ ಶಾಸಕ ರಾಜಣ್ಣ ಅವರ ನೇತೃತ್ವದಲ್ಲಿ ತಲಕಾಯಲ ಬೆಟ್ಟ ಮತ್ತು ಈ ತಿಮ್ಮಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಶಿಡ್ಲಘಟ್ಟ ಬಿಜೆಪಿ ಅಭ್ಯರ್ಥಿ ರಾಮಚಂದ್ರಗೌಡ ಅವರು ಅದ್ದೂರಿ ಪ್ರಚಾರ ನಡೆಸಿದರು. ತಲಕಾಯಲ ಬೆಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ ಜಿ ನಕ್ಕನಹಳ್ಳಿ, ಆಟ ಗೊಲ್ಲಹಳ್ಳಿ, ಬಂಡಹಳ್ಳಿ, ಗಾಂಡ್ಲಚಿಂತೆ, ದಿಂಬಾರ್ಲಹಳ್ಳಿ, ಮರಳಪ್ಪನಹಳ್ಳಿ, ದಾಸರಹಳ್ಳಿ, ಬುಡಗವಾರಹಳ್ಳಿ, ಮಾದೇನಹಳ್ಳಿ ಗ್ರಾಮಗಳಲ್ಲಿ ಮತಯಾಚಿಸಿದರು.

ಈ ತಿಮ್ಮಸಂದ್ರ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಡ್ಲವಾರಹಳ್ಳಿ, ಎಸ್ ಎಂ ಕೊಂಡರಾಜನಹಳ್ಳಿ, ವರಸಂದ್ರ, ಶೆಟ್ಟಿಕೆರೆ, ತುರುಕಾಚೆನಹಳ್ಳಿ, ಕೊಮ್ಮಸಂದ್ರ, ಹಳೆ ಹಳ್ಳಿ, ಮಲ್ಲಿ ಶೆಟ್ಟಿಪುರ, ಬೈರಗಾನಹಳ್ಳಿ ಸುಬ್ಬರಾಯನ ಹಳ್ಳಿ ಗ್ರಾಮಗಳಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರೊಂದಿಗೆ ಅದ್ದೂರಿ ಪ್ರಚಾರ ನಡೆಸಿದರು. ಗ್ರಾಮ ಪಂಚಾಯತಿ ವ್ಯಾಪ್ತಿಯ ನೂರಾರು ಕಾರ್ಯಕರ್ತರು ಪಟಾಕಿ ಸಿಡಿಸಿ ಬಿಜೆಪಿ ಅಭ್ಯರ್ಥಿ ರಾಮಚಂದ್ರಗೌಡ ಮತ್ತು ಮಾಜಿ ಶಾಸಕ ಎಂ ರಾಜಣ್ಣ ಅವರನ್ನು ಸ್ವಾಗತಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments