Monday, August 25, 2025
Google search engine
HomeUncategorizedಸಿಲಿಕಾನ್ ಸಿಟಿಯ ನಾಗರೀಕರೇ ಎಚ್ಚರ ಬೃಹತ್‌ ಗಾತ್ರದ ಹೆಬ್ಬಾವು ಪತ್ತೆ..!

ಸಿಲಿಕಾನ್ ಸಿಟಿಯ ನಾಗರೀಕರೇ ಎಚ್ಚರ ಬೃಹತ್‌ ಗಾತ್ರದ ಹೆಬ್ಬಾವು ಪತ್ತೆ..!

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಅಂಜನಾಪುರ ವಾರ್ಡ್​ನ ಕಂಬತ್ತಳ್ಳಿಯಲ್ಲಿ ಮಂಗಳವಾರ ಬೆಳಗ್ಗೆ ಸುಮಾರು 12 ರಿಂದ 14 ಅಡಿ ಉದ್ದದ ಹೆಬ್ಬಾವೊಂದು ಕಾಣಿಸಿಕೊಂಡಿದ್ದು, ವನ್ಯಜೀವಿ ಸಂರಕ್ಷಣಾ ತಂಡವು ಹೆಬ್ಬಾವನ್ನು ರಕ್ಷಣೆ ಮಾಡಿ ಅರಣ್ಯ ಪ್ರದೇಶಕ್ಕೆ ಬಿಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಹೌದು, ಅಂಜನಾಪುರ ವಾರ್ಡ್​ನ ಕಂಬತ್ತಳ್ಳಿಯಲ್ಲಿ ಹೆಬ್ಬಾವು ಮಂಗಳವಾರ (ಏ.25) ಬೆಳಗಿನ ಜಾವ ಸುಮಾರು 2.30ರ ವೇಳೆಗೆ ಬೆಂಗಳೂರಿನ ಕುಂಬತ್ತಹಳ್ಳಿ ಬಳಿಯಿರುವ ಅಂಜನಾಪುರ ನಿವಾಸಿ ರಾಹಿದಾಸ್ ಅವರ ಕಣ್ಣೀಗೆ ಕಾಣಿಸಿಕೊಂಡಿತ್ತು. ಅವರು ಕೊಡಲೇ  ಹೆಬ್ಬಾವೊಂದು ಇರುವುದಾಗಿ ಬಿಬಿಎಂಪಿ ವನ್ಯಜೀವಿ ಸಂರಕ್ಷಣಾ ತಂಡದ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಈ ವಿಚಾರ ತಿಳಿದ ಕೂಡಲೇ ಬಿಬಿಎಂಪಿ ಅರಣ್ಯ ವಿಭಾಗದ ವನ್ಯಜೀವಿ ಸಂರಕ್ಷಕರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಆಗ ಪತ್ತೆಯಾದ ಅಂದಾಜು 6 ರಿಂದ 7 ಅಡಿ ಉದ್ದದ ಇಂಡಿಯನ್ ರಾಕ್ ಪೈತಾನ್ ಹೆಬ್ಬಾವನ್ನು ಪ್ರಸನ್ನ ಕುಮಾರ್ ಪ್ರಾಣಿ ಕಲ್ಯಾಣ ಪರಿಪಾಲಕ ಹಿಡಿದು ಸಂರಕ್ಷಣೆ ಮಾಡಿದ್ದಾರೆ.

ಪ್ರಸ್ತುತ ಬೇಸಿಗೆ ಕಾಲ ಇರುವುದರಿಂದ ಹಾವುಗಳು ಬಿಸಿಲಿನ ತಾಪಕ್ಕೆ ಹೊರಬರುತ್ತಿದ್ದು ಇವುಗಳಿಗೆ ಯಾರೂ ಸಹ ಹಾನಿಯುಂಟುಮಾಡದೆ ಬಿಬಿಎಂಪಿ ಅರಣ್ಯ ವಿಭಾಗದ ವನ್ಯಜೀವಿ ತಂಡಗಳಿಗೆ ಕರೆ ಮಾಡಿ ಸಂರಕ್ಷಣೆ ಮಾಡಲು ಹಾಗೂ ಸೂಕ್ತ ಆವಾಸ ಸ್ಥಾನಕ್ಕೆ ಬಿಡಲು ಸಾರ್ವಜನಿಕರುಗಳು ಅನುವು ಮಾಡಿಕೊಡಬೇಕೆಂದು ಸಹಾಯವಾಣಿ 08022221188 ಕರೆ ಮಾಡಬೇಕೆಂದು ಉಪ ಅರಣ್ಯ ಸಂರಕ್ಷಣಾಧಿಕಾರಿಯಾದ ಶ್ರೀಮತಿ ಸರಿನಾ ಸಿಕ್ಕಲಿಗರ್ ರವರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments